ಬಡತನದಲ್ಲಿ ಹುಟ್ಟಿಬೆಳೆದ ನಟಿ ಈಗ ಒಂದು ದೇಶವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ !

0
7871

ಮನುಷ್ಯ ಜೀವನವೇ ಒಂದು ನಾಟಕರಂಗ, ಮನುಷ್ಯ ಜೀವಿಸುತ್ತಿರುವುದು ಭೂಮಿ ಮೇಲಾದರೆ ಕನಸು ಕಾಣುವುದು ಆಕಾಶದಷ್ಟು. ಪ್ರತಿಯೊಬ್ಬರಿಗೂ ಜೀವನದಲ್ಲಿ ಹೆಸರು ಮಾಡಬೇಕು,ಆಸ್ತಿ ಅಂತಸ್ತು ಸಂಪಾದಿಸಬೇಕು ಎಂಬುವುದಿರುತ್ತದೆ. ಇದು ಮನುಜನ ಸಹಜ ಗುಣ ಬಿಡಿ. ನಮ್ಮ ಸಮಾಜದಲ್ಲಿ ಹೆಸರು ಮಾಡಿರುವ ಅನೇಕ ಗಣ್ಯ ವ್ಯಕ್ತಿಗಳೆಲ್ಲ ಬಡ ಕುಟುಂಬದಿಂದ ಬಂದವರೇ. ಅನಾದಿ ಕಾಲದಿದಂದಲೂ ಶ್ರಿಮಂತರಾಗಿದ್ದವರು ಸಿನಿಮಾ ಮತ್ತು ಇತರ ಕೆಲಸದಲ್ಲಿ ಹೆಸರು ಮಾಡಿರುವುದು ಬೆರಳಿಣಿಕೆಯಷ್ಟು.

ಬಡತನ ಕುಟುಂಬದಿಂದ ಬಂದವರಿಗೆ ಜೀವನ ಮತ್ತು ಊಟದ ಬೆಲೆ ಗೊತ್ತಿರುತ್ತದೆ,ಜೀವನ ಹೇಗೆ ಮಾಡಬೇಕೆಂಬುದನ್ನು ಬಡತನ ತೋರಿಸಿ ಕೊಟ್ಟಿರುತ್ತದೆ. ಬಡಕುಟುಂಬದಲ್ಲೆ ಬೆಳೆದು ಬಂದ ವ್ಯಕ್ತಿಗಳಲ್ಲಿ ನೂರಾರು ಕನಸುಗಳಿರುತ್ತವೇ ಆದರೆ ಈ ಹಸಿವು ಅವರ ಕನಸುಗಳನ್ನು ನುಂಗಿ ಹಾಕಿರುತ್ತದೆ. ಬಡ ಕುಟುಂಬದಿದಂದ ಬಂದು 70-80 ರ ದಶಕದಲ್ಲಿ ಇಡೀ ಭಾರತ ಚಿತ್ರರಂಗವನ್ನೇ ಆಳಿದ ನಟಿ ಮಾಧವಿ ಈಗ ಒಂದು ದೇಶವನ್ನೇ ಖರೀದಿ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ.

ಮಾಧವಿ ಶರ್ಮ ಅವರ ಹುಟ್ಟು ಹೆಸರು ವಿಜಯಲಕ್ಷ್ಮಿ, 12 ಆಗಸ್ಟ್ 1962 ಹೈದರಾಬಾದ್ ನಲ್ಲಿ ಜನಿಸಿದ ಇವರು ಶಶಿರೇಖಾ ಮತ್ತು ಗೋವಿಂದಸ್ವಾಮಿ ದಂಪತಿಗಳ ಬಡ ಕುಟುಂಬದಲ್ಲಿ ಜನಿಸಿದರು ಮತ್ತು ಕೀರ್ತಿ ಕುಮಾರಿ,ಧನಜಂಯ್ ಎಂಬ ಸಹೋದರ ಸಹೋದರಿ ಇದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕಲೆ ಮತ್ತು ನಾಟ್ಯದ ಮೇಲೆ ಸಾಕಷ್ಟು ಒಲವು ಹೊಂದಿದ್ದ ಮಾಧವಿ ಅವರು ಉಮಾ ಮಹೇಶ್ವರಿ ಅವರಿಂದ ಭರತನಾಟ್ಯ ಮತ್ತು ಶ್ರೀ ಭಟ್ ಅವರಿಂದ ಜಾನಪದ ನೃತ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತರು.

ಹೀಗೆ ಕಡು ಬಡತನದಲ್ಲಿ ಹುಟ್ಟಿ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದು ಸುಮಾರು ಸಾವಿರಕ್ಕು ಹೆಚ್ಚು ಸ್ಟೇಜ್ ಶೋ ಕೊಟ್ಟರೂ  ಅವರ ಕೈಗೆ  ಹೇಳಿಕೊಳ್ಳುವಷ್ಟು ಹಣ ಸಿಗಲಿಲ್ಲ. ಬಂದ ಹಣ ದಿನದ ಮತ್ತು ಮನೆಯ ಖರ್ಚಿಗೆ ಸರಿತೂಗುತ್ತಿತ್ತು, ನಂತರ ಕಠಿಣ ಪರಿಶ್ರಮದಿಂದ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ನಿದೇಶಕ ದಾಸರಿ ನಾರಾಯಣ್ ರಾವ್ ಅವರ ತೂರುಪು ಪದಮಾರದಲ್ಲಿ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತೆಲುಗು,ತಮಿಳು,ಮಲಯಾಳಂ,ಹಿಂದಿ,ಒರಿಯಾ,ಕನ್ನಡ ಸೇರಿದಂತೆ 300 ಸಿನಿಮಾಗಳಲ್ಲಿ ಅಭಿನಯಿಸುವ ಮುಖಾಂತರ ಭಾರತಾದ್ಯಂತ ದಾಖಲೆ ಬರೆದಿದ್ದಾರೆ. ತಮ್ಮ ಹದಿನೇಳು
ವಯಸ್ಸಿನ್ನಲ್ಲೇ ಸಿನಿಮಾರಂಗಕ್ಕೆ ಪ್ರವೇಶ ಮಾಡಿ 1976-1996 ರ ತನಕ ದಕ್ಷಿಣ ಭಾರತದ ಅಂದಿನ ಕಾಲದ ದೊಡ್ಡ ಸ್ಟಾರ್ ನಟರೆಲ್ಲರ ಜೊತೆಲೂ ಸ್ಕ್ರೀನ್ ಶೇರ್ ಮಾಡಿದ್ದಾರೆ.

ವಿಶೇಷವೇನೆಂದರೆ ಕನ್ನಡ ಚಿತ್ರರಂಗದಲ್ಲೂ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ. ವರನಟ ಡಾಕ್ಟರ್ ರಾಜಕುಮಾರ್,ವಿಷ್ಣುವರ್ದನ್,ಅನಂತ್ ನಾಗ್ ಮತ್ತು ಅಂಬರೀಶ ಸೇರಿದಂತೆ ಅನೇಕ ಜನಪ್ರಿಯ ನಟರೊಂದಿಗೆ ಹಲವಾರು ಸಿನಿಮಾದಲ್ಲಿ ಅಭಿನಯಿಸಿ ಕನ್ನಡದವರೇ ಎನ್ನುವಂತೆ ಜನರ ಮನ್ನಸ್ಸಲ್ಲಿ ನೆಲೆಯೂರಿದ್ದಾರೆ. ಹಾಲು ಜೇನು ಮತ್ತು ಮಲಯ ಮಾರುತ ಸಿನಿಮಾಗಳು ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿವೆ.

ತೆಲುಗಿನಲ್ಲಿ ಅವರ ಕೊನೆಯ ಚಿತ್ರ ಬಿಗ್ ಬಾಸ್(1995) ಆದರೆ ಕನ್ನಡದಲ್ಲಿ ಒಡಹುಟ್ಟಿದವರು(1994). ಮಲಯಾಳಂನಲ್ಲಿ ಆಯಿರಾಮ್ ನಾವುಲ್ಲೆ ಅನಂತನ್(1996) ಕೊನೆಯ ಚಿತ್ರವಾದರೆ ತಮಿಳಿನಲ್ಲಿ ಆಥಿಸಯ ಪಿರವಿ (1990). ಹಿಂದಿಯಲ್ಲಿಯೂ 25 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಬಿ.ಟೌನ್ ನಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು 80-90 ರ ದಶಕದಲ್ಲಿ ನಾಯಕಿಯರಿಗೆ ಸಿಗುತ್ತಿದ್ದ ಸಂಭಾವನೆ ಹೇಳಿಕೊಳ್ಳುವವಷ್ಟು ಇರುತ್ತಿರಲಿಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸ್ವಂತ ಹಣದಲ್ಲಿ ಮನೆಯನ್ನೂ ಸಹ ಖರೀದಿ ಮಾಡಲು ಮಾಧವಿ ಅವರ ಕೈಯಲ್ಲಿ ಆಗಲಿಲ್ಲ, ಆದರೆ ಈಗ ಒಂದು ದೇಶವನ್ನೇ ಕೊಂಡುಕೊಳ್ಳುವ ಶಕ್ತಿ ಹೊಂದಿದ್ದಾರೆ.

ಹಿಂದೂ ಆಧ್ಯಾತ್ಮಿಕ ಶಿಕ್ಷಣ ಸ್ವಾಮಿರಾಮ ಅವರು ತಮ್ಮ ಅನುಯಾಯಿಗಳಲ್ಲಿ ಒಬ್ಬರಾದ ರಾಲ್ಫ್ ಶರ್ಮ ಅವರ ಜೊತೆ ವಿವಾಹವನ್ನು  ಏರ್ಪಡಿಸಿದರು. ಗುರು ಹಿರಿಯರ ನಿಶ್ಚಯದಂತೆ ಫೆಬ್ರವರಿ 12,1996 ರಂದು ಮಾಧವಿ ಮತ್ತು ರಾಲ್ಫ್ ಶರ್ಮ ವಿವಾಹರಾದರು. ರಾಲ್ಫ್ ಶರ್ಮ ಅವರು ದೊಡ್ಡ ಉದ್ಯಮಿಯಾಗಿದ್ದು ಅಮೇರಿಕಾದಲ್ಲಿ ದೊಡ್ಡ ಔಷಧಿ ಕಂಪನಿ ಇಟ್ಟಿದ್ದಾರೆ.

ಸದ್ಯ ಸಿನಿಮಾರಂಗದಿಂದ ದೂರವಾದ ನಟಿ ಮಾಧವಿ ಅಮೇರಿಕದಲ್ಲಿದ್ದು ತಮ್ಮ ಪತಿಯ ಔಷಧಿ ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಸಂಪತ್ತು ಎಷ್ಟಿದೆ ಎಂದು ಕೇಳಿದರೆ ನೀವೂ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.. ಹೌದು ಮಾಧವಿ ಅವರು ಸುಮಾರು ಹತ್ತು ಸಾವಿರ ಕೋಟಿಗಿಂತಲೂ ಅಧಿಕ ಹಣದ ಒಡತಿಯಾಗಿದ್ದಾರೆ. ಸದ್ಯಕ್ಕೆ ವೈಸ್ ಪ್ರೆಸಿಂಡೆಂಟ್ ಹುದ್ದೆಯನ್ನು ಮಾಡುತ್ತಿದ್ದಾರೆ.ಇವರ ಮನೆ ಬಳಿ ಸ್ವಂತ ಹೆಲಿಪ್ಯಾಡ್ ಹಾಗೂ ಸ್ವಂತ ವಿಮಾನವನ್ನು ಕೂಡ ನಟಿ ಮಾಧವಿ ಹೊಂದಿದ್ದಾರೆ ಅಷ್ಟೇ ಅಲ್ಲದೇ ವಿಮಾನವನ್ನು ಸಹಿತ ಇವರೇ ಓಡಿಸುತ್ತಾರೆ.

ನೋಡುದ್ರಲ್ಲಾ ಬಡ ಕುಟುಂಬದಲ್ಲಿ ಬೆಳೆದು ಸಾವಿರಾರು ಕೋಟಿಗೆ ವಾರಸುದಾರಿ ಯಾಗಿರುವ ಮಾಧವಿ ಅವರು ಜೀವನದಲ್ಲಿ ಅನೇಕ ನೋವು ನಲಿವು ಸೋಲುಗಳನ್ನು ಕಂಡು  ತಮ್ಮ ಕಠಿನ ಪರಿಶ್ರಮದಿಂದ ಈಗ ಉನ್ನತ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here