ದೆವ್ವಗಳು ಕಟ್ಟಿದ ಶಿವಾಲಯ ಕರ್ನಾಟಕದಲ್ಲಿಯೇ ಇದೆ ಎಂಬುದು ನಿಮಗೆ ಗೊತ್ತಾ..?

0
198

ನಮ್ಮ ಭಾರತ ದೇಶದಲ್ಲಿ ಹಲವಾರು ದೇವಾಲಯಗಳಿವೆ. ಅವುಗಳನ್ನು ದೇವತೆಗಳು, ಮುನಿಗಳು, ಮಹರ್ಷಿಗಳು ಇಲ್ಲವಾದಲ್ಲಿ ಆಗಿನ ಕಾಲದಲ್ಲಿ ಆ ರಾಜ್ಯವನ್ನು ಆಳುತ್ತಿದ್ದ ರಾಜರುಗಳೋ ನಿರ್ಮಿಸುತ್ತಿದ್ದರು. ಹೀಗೆ ಇವರ್ಯಾರು ಅಲ್ಲದೆ ಬೇರೊಬ್ಬರು ನಿರ್ಮಿಸಿದ ಈ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ. ಈ ಮಧ್ಯಕಾಲದಲ್ಲಿ ಬೆಳಕಿಗೆ ಬಂದಿರುವ ಈ ದೇವಸ್ಥಾನದ ಬಗ್ಗೆ ವಿಚಿತ್ರವಾದ ಮಾಹಿತಿಗಳು ತಿಳಿದು ಬರುತ್ತಿವೆ. ಈ ವಿಚಿತ್ರ ವಿಷಯಗಳು ಎಷ್ಟರ ಮಟ್ಟಿಗೆ ಸತ್ಯವೆಂದು ತಿಳಿಯಲು ಕರ್ನಾಟಕದಲ್ಲಿರುವ ಬೊಮ್ಮವರಗೆ ಹೋಗಲೇಬೇಕು. ದೊಡ್ಡಬಳ್ಳಾಪುರ ದೇವನಹಳ್ಳಿಯ ಮಾರ್ಗದ ಮಧ್ಯದಲ್ಲಿರುವ ಬೊಮ್ಮವರದಲ್ಲಿರುವ ಸುಂದರೇಶ್ವರನ ಆಲಯವನ್ನು ದೆವ್ವಗಳು ನಿರ್ಮಿಸುವವರೆಂದು ಹೇಳಲಾಗುತ್ತಿದೆ.


600 ವರ್ಷಗಳ ಹಿಂದೆ ಈ ಊರಲ್ಲಿ ದೆವ್ವಗಳ ಬೊಚ್ಚಯ್ಯ ಎನ್ನುವ ದೆವ್ವಗಳ ಮಾಂತ್ರಿಕನೊಬ್ಬ ಇದ್ದನಂತೆ. ಆಗಿನ ಕಾಲದಲ್ಲಿ ಊರಿನಲ್ಲೆಲ್ಲಾ ದೆವ್ವಗಳೇ ಇದವಂತೆ. ಆಗ ಒಂದು ಆಲಯವನ್ನು ನಿರ್ಮಿಸುವ ಯೋಚನೆಯಿಂದ ಆ ಮಾಂತ್ರಿಕ ದೇವಾಲಯವನ್ನು ನಿರ್ಮಿಸಿದನಂತೆ. ಇನ್ನೂ ಆ ದೆವ್ವಗಳು ಆ ರಾತ್ರಿಗೆ ಆಲಯವನ್ನು ಬಿಳಿಸಿದವಂತೆ. ಕೋಪಗೊಂಡ ಆ ಮಾಂತ್ರಿಕ ತನ್ನ ಮಂತ್ರ ಶಕ್ತಿಯಿಂದ ಆ ದೆವ್ವಗಳನ್ನು ವಶ ಮಾಡಿಕೊಂಡು ಅವುಗಳ ಕೂದಲನ್ನು ಕತ್ತರಿಸಿ ತನ್ನಲ್ಲಿರುವ ಒನಕೆಗೆ ಕಟ್ಟಿ ಹಾಕಿದನಂತೆ. ತಮ್ಮ ಕೂದಲನ್ನು ಹಿಂತಿರುಗಿಸುವಂತೆ ಆ ದೆವ್ವಗಳು ಮೊರೆಯಿಟ್ಟವಂತೆ. ಆಗ ಆ ಮಾಂತ್ರಿಕ ಒಂದು ಶರತ್ತನ್ನು ಇಟ್ಟನಂತೆ. ಆ ದೇವಾಲಯವನ್ನು ಯಥರೀತಿಯಾಗಿ ನಿರ್ಮಿಸಿದಲ್ಲಿ ಕೂದಲನ್ನು ಹಿಂತಿರುಗಿಸುವುದಾಗಿ ಹೇಳಿದರಂತೆ. ಇನ್ನು ಮಾಂತ್ರಿಕನ ಆಜ್ಞೆಯಂತೆ ಆ ಆಲಯವನ್ನು ದೆವ್ವಗಳು ತಿರುಗಿ ಯಥರೀತಿಯಾಗಿ ನಿರ್ಮಿಸಿದವಂತೆ. ಪ್ರಸ್ತುತ ಬೊಮ್ಮವರ ವಾಸಿಗಳು ಹೇಳುತ್ತಿರುವ ಕಥೆ ಇದೆ.

ಇನ್ನು ಇಲ್ಲಿಯವರೆಗೆ ನಾವು ಕಂಡ ದೇವಸ್ಥಾನಗಳ ಗೋಡೆ ಗೋಪುರಗಳ ಮೇಲೆ ದೇವತೆಗಳ ವಿಗ್ರಹಗಳನ್ನು ಕಾಮ ಸೂತ್ರದ ಭಂಗಿಮಗಳನ್ನು ಕಂಡಿದ್ದೇವೆ. ಆದರೆ ಈ ದೇವಸ್ಥಾನದ ಗೋಡೆಗಳ ಮೇಲೆ ದೆವ್ವಗಳ ಗೊಂಬೆಗಳು ಕಂಡು ಬರುತ್ತವೆ. ದೆವ್ವಗಳು ನಿರ್ಮಿಸಿದ ಗುಡಿಯಾದರಿಂದ ಆ ಆಲಯದ ಮೇಲೆ ಅವುಗಳ ಪ್ರತಿರೂಪಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಇದು ಒಂದು ವಿಶೇಷವಾಗಿ ಇದ್ದರೆ ಈ ದೇವಾಲಯದಲ್ಲಿ ಯಾವುದೇ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಇಲ್ಲವಂತೆ. ಕಳೆದ ಐವತ್ತು ವರ್ಷಗಳ ಹಿಂದಿನವರೆಗೆ ಗರ್ಭಗುಡಿ ಕಾಲಿಯಾಗಿತ್ತಂತೆ ಆದರೆ 50 ವರ್ಷಗಳ ಹಿಂದೆ ಊರಿನ ಹೊರಗಡೆ ಇರುವ ಕುಡಿಯುವ ನೀರಿನ ಕೆರೆಯನ್ನು ತೋಡುತ್ತಿದ್ದಾಗ ಎಂಟು ಅಡಿಗಳ ಶಿವಲಿಂಗವೊಂದು ದೊರಕಿತಂತೆ.

ಆ ಲಿಂಗವನ್ನು ತಂದಿಟ್ಟು ಖಾಲಿ ಇರುವ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಸುಂದರೇಶ್ವರ ದೇವಾಲಯವೆಂದು ಆ ದೇವಾಲಯಕ್ಕೆ ನಾಮಕರಣ ಮಾಡಲಾಗಿದೆಯಂತೆ. ಇಷ್ಟು ಎತ್ತರವಾದ ಲಿಂಗ ರಾಜ್ಯದಲ್ಲೇ ಇನ್ನೆಲ್ಲೂ ಇಲ್ಲವೆಂದು ದೇಶದಲ್ಲಿ ಕೇವಲ ಐದು ಸ್ಥಳಗಳಲ್ಲಿ ಮಾತ್ರ ಇಷ್ಟು ಎತ್ತರದ ಲಿಂಗಗಳಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ನಿಜವಾಗಿಯೂ ಈ ದೇವಾಲಯವನ್ನು ನಿರ್ಮಿಸಿರುವುದು ದೆವ್ವಗಳೇ ಎಂದು ಗ್ರಾಮಸ್ಥರು ಇಂದಿಗೂ ನಂಬಿದ್ದಾರೆ.

– ಸುಷ್ಮಿತಾ

LEAVE A REPLY

Please enter your comment!
Please enter your name here