ದೆಹಲಿ ಪೊಲೀಸರಿಗಿಂತ ಕಾಂಡೋಮ್ ಸುರಕ್ಷಿತ ಅಂತೆ…ಬಾಲಿವುಡ್ ನಿರ್ದೇಶಕ ಟ್ವೀಟ್​​

0
147

ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಕಳೆದ ಅಕ್ಟೋಬರ್​​​ನಲ್ಲಿ ಆರಂಭವಾದ ಜೆಎನ್​​ಯು ವಿದ್ಯಾರ್ಥಿಗಳ ಪ್ರತಿಭಟನೆ ಇಂದಿಗೂ ಮುಂದುವರೆದಿದೆ. ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ವೇಳೆ ಮುಸುಕುಧಾರಿಗಳು ಕ್ಯಾಂಪಸ್​​​ಗೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ನಂತರ ಹಲ್ಲೆಗೊಳಗಾದವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

ಈ ಘಟನೆ ವಿರುದ್ಧ ಸೆಲಬ್ರಿಟಿಗಳು ಸೇರಿ ಸಾಕಷ್ಟು ಮಂದಿ ಟೀಕೆ ಮಾಡುತ್ತಾ ಬಂದಿದ್ದಾರೆ. ಇದೀಗ ಬಾಲಿವುಡ್​​ ನಿರ್ದೇಶಕರೊಬ್ಬರು ದೆಹಲಿ ಪೊಲೀಸರ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಿರ್ದೇಶಕ ಹನ್ಸಾಲ್​​ ಮೆಹ್ತಾ ಜೆಎನ್​ಯು ದಾಳಿ ಬಗ್ಗೆ ಟ್ವೀಟ್​​ ಮಾಡಿದ್ದು, ಡ್ಯುರೆಕ್ಸ್​ ಕಾಂಡೋಮ್​ ಕಂಪನಿಯ ಜಾಹೀರಾತಿನ ಫೋಟೋವನ್ನು ಹಾಕಿ ‘ದೆಹಲಿ ಪೊಲೀಸರಿಗಿಂತ ಕಾಂಡೋಮ್’​​ ಹೆಚ್ಚು ಸುರಕ್ಷಿತ ಎಂದು ಕ್ಯಾಪ್ಷನ್ ಹಾಕಿದ್ದಾರೆ. ‘ಐ ಚೂಸ್​​ ಡ್ಯುರೆಕ್ಸ್​​, ಕೀಪ್​​​ ಯು ಸೇಫ್​ ಅಂಡ್​​ ಹ್ಯಾಪಿ, ಬೆಟರ್​​​ ಪ್ರೊಟಕ್ಷನ್​​ ದ್ಯಾನ್​​ ಡೆಲ್ಲಿ ಪೊಲೀಸ್’​ ಎಂದು ತಮ್ಮ ಟ್ವೀಟ್​​​​ ಮಾಡಿದ್ದಾರೆ. ಹನ್ಸಾಲ್ ಟ್ವೀಟ್​​​​​ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಏನೇ ಆಗಲಿ ಪೊಲೀಸರ ಬಗ್ಗೆ ಈ ರೀತಿ ಮಾತನಾಡಬಾರದು ಎಂದು ರಾಗ ಎಳೆದಿದ್ದಾರೆ.

 

 

ಜವಹರ್​​​ಲಾಲ್​ನೆಹರು ಕ್ಯಾಂಪನ್​​ ಒಳಗೆ ಮುಸುಕುಧಾರಿಗಳು ಆಗಮಿಸಿ, ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಏಕಾಏಕಿ ಹಲ್ಲೆ ಮಾಡಲು ಆರಂಭಿಸಿದಾಗ ವಿದ್ಯಾರ್ಥಿಗಳು ಪೊಲೀಸರ ರಕ್ಷಣೆ ಕೇಳಿದ್ದಾರೆ. ಆದರೆ ಪೊಲೀಸರು ತಕ್ಷಣಕ್ಕೆ ವಿದ್ಯಾರ್ಥಿಗಳ ಸಹಾಯಕ್ಕೆ ಬಂದಿಲ್ಲ. ಈ ಹಿನ್ನೆಲೆ ನಿರ್ದೇಶಕ ಹನ್ಸಾಲ್ ಈ ರೀತಿಯ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here