ಬಸ್ಸಿನಲ್ಲಿ ಮೊಬೈಲ್ ಬಳಸುವವರಿಗೆ ಶಾಕ್ ನೀಡಿದ ಬಿಎಂಟಿಸಿ..!!

0
416

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ತಮ್ಮ ಪ್ರಯಾಣಿಕರಿಗೆ ಶಾಕಿಂಗ್ ಸೂಚನೆಯೊಂದನ್ನು ನೀಡಿದ್ದು, ದಿನನಿತ್ಯ ಸರ್ಕಾರಿ ಬಸ್’ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸದ್ಯ ಬಿಎಂಟಿಸಿ ಸಂಸ್ಥೆ ಜಾರಿಗೊಳಿಸಿರುವ ಹೊಸ ನಿಯಮದಿಂದ ಸಂಗೀತ ಕೇಳುವ ಪ್ರಿಯರಿಗೆ ಸ್ವಲ್ಪ ಕಷ್ಟವಾಗಲಿದೆ ಎನ್ನಬಹುದು. ಬಿಎಂಟಿಸಿ ಸಂಸ್ಥೆ ಪ್ರತಿ ಬಾರಿಯೂ ಒಂದಲ್ಲ ಒಂದು ರೀತಿಯ ನಿಯಮಗಳನ್ನು ಪ್ರಯಾಣಿಕರಿಗೆ ಪರಿಚಯಿಸುತ್ತಿರುತ್ತದೆ. ಅದೇ ರೀತಿ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಹಾಡು ಕೇಳುವವರಿಗೆ ಈಗ ಬ್ರೇಕ್ ನೀಡಲಾಗಿದೆ.

ಬಸ್ಸಿನಲ್ಲಿ ಪ್ರಯಾಣ ಬೆಳೆಸುವಾಗ ಹಾಡನ್ನು ಜೋರಾಗಿ ಲೌಡ್ ಸ್ಪೀಕರ್ ಕೊಟ್ಟು ಕೇಳುವುದರಿಂದ ಶಬ್ದ ಮಾಲಿನ್ಯ ಆಗುತ್ತದೆ ಜೊತೆಗೆ ಸಹ ಪ್ರಯಾಣಿಕರಿಗೂ ಹಿಂಸೆ ಆಗಲಿದೆ ಎಂಬ ಆಲೋಚನೆಯಿಂದ ಬಿಎಂಟಿಸಿ ಲೌಡ್ ಸ್ಪೀಕರ್ ಕೊಟ್ಟು ಹಾಡು ಕೇಳುವ ಪ್ರಯಾಣಿಕರಿಗೆ ನಿರ್ಬಂಧ ಹೇರಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ ಸಂಸ್ಥೆ ಪ್ರಯಾಣಿಕರಿಗೆ ಎಚ್ಚರಿಕೆ ಸೂಚನೆಯನ್ನು ನೀಡಿದೆ. ಲೌಡ್ ಸ್ಪೀಕರ್ ಕೊಟ್ಟು ಹಾಡು ಕೇಳುವುದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಹೀಗಾಗಿ ಬಸ್ಸಿನಲ್ಲಿ ಹಾಡು ಕೇಳುವುದಕ್ಕೆ ನಿರ್ಬಂಧಿಸಿದೆ ಎನ್ನಲಾಗಿದೆ.

ಪ್ರಯಾಣಿಕರು ಲೌಡ್ ಸ್ಪೀಕರ್ ಕೊಟ್ಟು ಹಾಡು ಕೇಳದಂತೆ ನೋಡಿಕೊಳ್ಳುವ ಜವಾಬ್ದಾರಿ ಚಾಲಕ ಮತ್ತು ನಿರ್ವಾಹಕರ ಹೆಗಲಿಗೆ ವಹಿಸಲಾಗಿದೆ. ಪ್ರಯಾಣಿಕರು ಬಸ್ಸಿನಲ್ಲಿ ಜೋರಾಗಿ ಹಾಡು ಕೇಳುತ್ತಿದ್ದರೆ ಅಂಥವರ ವಿರುದ್ಧ ಸೂಕ್ತ ದಂಡವನ್ನು ವಿಧಿಸಲಾಗುತ್ತದೆ. ಈ ಕುರಿತು ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಕೆಯಾಗಿರುವುದರಿಂದ ಬಿಎಂಟಿಸಿ ಈ ಹೊಸ ನಿಯಮವನ್ನು ಅನುಷ್ಠಾನಗೊಳಿಸಿದೆ.

LEAVE A REPLY

Please enter your comment!
Please enter your name here