ಟಿ-ಟ್ವೆಂಟಿ ಸರಣಿ ಗೆದ್ದ ಬ್ಲೂ ಬಾಯ್ಸ್.!

0
347

ವೆಸ್ಟ್ ಇಂಡೀಸ್ ವಿರುದ್ಧ ನಿನ್ನೆ ನಡೆದ ಟಿ-ಟ್ವೆಂಟಿ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟ್ವಿ- ಟ್ವೆಂಟಿ ಸರಣಿಯನ್ನು ಗೆದ್ದಿದ್ದಾರೆ ಬ್ಲೂ ಬಾಯ್ಸ್. ಹೌದು, ಮೊದಲನೇ ಟಿ -ಟ್ವೆಂಟಿ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ, ಟೀಂ ಇಂಡಿಯಾ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿ ೨೦ ಓವರ್ಗಳಲ್ಲಿ ೦೫ ವಿಕೆಟ್’ಗಳ ನಷ್ಟಕ್ಕೆ ೧೬೭ ರನ್ ಕಲೆ ಹಾಕಲು ಯಶಸ್ವಿಯಾಯಿತು. ೧೬೭ರನ್’ಗಳ ಟಾರ್ಗೆಟ್ ಚೇಸ್ ಮಾಡಿದ ವೆಸ್ಟ್ ಇಂಡೀಸ್ ತಂಡ ೧೫.೩ ಓವರ್’ಗಲ್ಲಿ ೯೮ ರನ್ ಗಳಿಸಿತು. ಈ ಮಧ್ಯೆ ಮಳೆ ಬಂದ ಕಾರಣ ಕೆಲ ಸಮಯ ಪಂದ್ಯವನ್ನು ರದ್ದುಗೊಳಿಸಲಾಯಿತು. ಡಿಎಲ್ಎಸ್ ನಿಯಮ ಅನುಸಾರ ಚಾಲ್ತಿ ಮಾಡಿದರೂ ಕೂಡ ವಿಂಡೀಸ್’ಗಳಿಗೆ ೧೫.೩ ಓವರ್ಗಳಲ್ಲಿ ೧೨೦ ರನ್ ಗಳಿಸಬೇಕಾಗಿತ್ತು. ಡಿಎಲ್ಎಸ್ ಪ್ರಕ್ರಿಯೆ ನಡೆಸಿದರೂ ಕೂಡ ರನ್ ಚೇಸ್ ಮಾಡಲು ಬಹಳ ಕಷ್ಟವಿತ್ತು, ಜೊತೆಗೆ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಿದ್ದರಿಂದ ಟೀಂ ಇಂಡಿಯಾ ೨೨ ರನ್’ಗಳ ಜಯ ಸಾಧಿಸಿತು.

ಭಾರತಕ್ಕೆ ಉತ್ತಮ ಆರಂಭ ನೀಡಿದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಉತ್ತಮ ರನ್ ಕಲೆ ಹಾಕಿದರು. ರೋಹಿತ್ ಶರ್ಮಾ ೭೬, ಶಿಖರ್ ಧವನ್ ೨೩ ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಅಂತರದಲ್ಲಿ ಟಿ -ಟ್ವೆಂಟಿ ಸರಣಿಯನ್ನು ಗೆದ್ದಿದ್ದಾರೆ ಬ್ಲೂಬಾಯ್ಸ್. ಇದರ ಜೊತೆಗೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ ‘ಹಿಟ್ ಮ್ಯಾನ್’ ರೋಹಿತ್ ಶರ್ಮ. ಟಿ -ಟ್ವೆಂಟಿ ಇತಿಹಾಸದಲ್ಲಿ ೨೧ ಅರ್ಧಶತಕಗಳನ್ನು ಪೂರೈಸಿರುವ ಬ್ಯಾಟ್ಸ್’ಮನ್ಗಳ ಸಾಲಿನಲ್ಲಿ ರೋಹಿತ್ ಶರ್ಮ ಅಗ್ರಸ್ಥಾನದಲ್ಲಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್ ೧೦೬ ಸಿಕ್ಸರ್ಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿದ್ದರು. ಈಗ ರೋಹಿತ್ ಶರ್ಮ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದು ಅಗ್ರ ಸ್ಥಾನ ಏರಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಇದೊಂದು ಖುಷಿಯ ವಿಚಾರ ಎನ್ನಬಹುದು.

LEAVE A REPLY

Please enter your comment!
Please enter your name here