Home Blog

ಈ ದಿನದಂದು ಹುಟ್ಟಿದವರ ಬಳಿ ರಹಸ್ಯಗಳು ಹೆಚ್ಚು ಇರುತ್ತವೆ

0

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಹೇಮಂತ  ಋತು, ಮಾರ್ಗಶಿರ   ಮಾಸೆ, ಶುಕ್ಲ  ಪಕ್ಷದ ಚತುರ್ಥಿ  ತಿಥಿ,  ಶ್ರವಣಾ ನಕ್ಷತ್ರ,      ವ್ಯಾಘಟ  ಯೋಗ ,  ಭದ್ರಂಕ್ ಕರಣ, ಡಿಸೆಂಬರ್ 18 ,  ಶುಕ್ರವಾರದ  ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ  ಬೆಳಿಗ್ಗೆ 8ಗಂಟೆ 44 ನಿಮಿಷದಿಂದ 10ಗಂಟೆ  19ನಿಮಿಷದ ವರೆಗೆ ಇದೆ.

ಈ 1ಕಷ್ಟಕರವಾದ ಸಂಸ್ಕಾರವನ್ನು  ಅಥವಾ ಅನುಷ್ಠಾನವನ್ನು   ಮಕ್ಕಳಿಗೆ ಅದರಲ್ಲೂ ಪುಟ್ಟ ತುಂಟ  ಮಕ್ಕಳಿಗೆ ಮಾಡಿಸಿದರೆ ಅದ್ಭುತವಾದ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಕಂಪೇರ್ ಮಾಡಲು ಹೋಗಬೇಡಿ. ನಮ್ಮ ಮಾತು ಕೇಳುತ್ತಿಲ್ಲ ಕಾನ್ಸಂಟ್ರೇಶನ್ ಇಲ್ಲ     ಈ ರೀತಿ ಸಮಸ್ಯೆ ಇರುವವರು 16ಇಲ್ಲವೆ 21ಸಂಕಷ್ಟ ಚತುರ್ಥಿಗಳನ್ನು ಪೂಜೆ ಮಾಡಿ ಆ ನಂತರ  ಗುರುವಾರದಂದು ಸಂಕಷ್ಟ ಚತುರ್ಥಿಯ ದಿನ  2ಮೂಗನ್ನು ಚುಚ್ಚಿಸಿ  ನಂತರ ಅದು ಮುಚ್ಚಿಕೊಂಡು ಬಿಡುತ್ತದೆ.  ಈ ಅದ್ಭುತವಾದ ಫಲಿತಾಂಶ ದೊರೆಯುತ್ತದೆ.  ಕಾನ್ಸೆಂಟ್ರೇಷನ್ ಕೂಡ ಬರುತ್ತದೆ. ಅಜ್ಞಾ ಶಕ್ತಿ ಜಾಗ್ರತಗೊಳ್ಳುತ್ತದೆ.

ಚತುರ್ಥಿಯ ದಿನದಂದು ಹುಟ್ಟಿದವರು ಬಳಿ ರಹಸ್ಯಗಳು ಹೆಚ್ಚು ಇರುತ್ತವೆ. 1ಮಾತನ್ನು ಹೊರಗಡೆ ನೀವು ಮಾತನಾಡಿದರೆ ನೂರು ಮಾತುಗಳು ನಿಮ್ಮ ಮನಸಿನಲ್ಲಿ ಉಳಿದಿರುತ್ತವೆ.

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ : ಚೆನ್ನಾಗಿದೆ  ಹಣ್ಣು ಹಾಲು  ಪೂಜಾ ಸಾಮಗ್ರಿಗಳು ಗ್ರಂಥಿಕೆ ಅಂಗಡಿ ಆಚಾರ್ಯ ವಿಶ್ವಕರ್ಮ ಈ ರೀತಿ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ಅನುಕೂಲಕರ.

ವೃಷಭ ರಾಶಿ : ಆಮದು ರಫ್ತು ದೂರದ ಕೆಲಸ, ದೂರದ ವ್ಯವಹಾರಗಳು,  ದೂರದ ವಿದ್ಯೆ, ದೂರದ ಪ್ರಯಾಣ ಎಲ್ಲಾ ಸ್ವಲ್ಪ ಪ್ರಯಾಸಕರ. ಎಸ್ ಶ್ರೀನಿವಾಸ ದೇವರ ಸೇವೆಯನ್ನು ಮಾಡಿ ಮತ್ತು ವಿಷ್ಣು ಸಹಸ್ರನಾಮವನ್ನು ಕೇಳಿ ಒಳ್ಳೆಯದಾಗುತ್ತದೆ.

ಮಿಥುನ ರಾಶಿ : ದುಡಿಯಲು ಓಡಬೇಕಾಗುತ್ತದೆ, ದಣಿಯುತ್ತೀರಿ,   ಆರೋಗ್ಯದ ಕಡೆ ಗಮನ ಕೊಡಿ.

ಕರ್ಕಾಟಕ ರಾಶಿ : ಚೆನ್ನಾಗಿದೆ ಜನಸೇವೆ ಜನಾನುರಾಗಿ ವೃದ್ಧಾಶ್ರಮ ಅನಾಥಾಶ್ರಮ ದೇವ ಕಾರ್ಯ ಜನಪರ ಕಾರ್ಯಗಳಲ್ಲಿ ತೊಡಗಿರುವವರಿಗೆ ಅದ್ಭುತವಾದ ಪ್ರಗತಿ.

ಸಿಂಹ ರಾಶಿ : ರಾಜಕೀಯದ ಚಿಂತೆ ಇದ್ದರೆ ಸೂರ್ಯ ನೀಚನಾಗಿರುವುದರಿಂದ ಸ್ವಲ್ಪ ನಿಧಾನಿಸುವುದು ಒಳ್ಳೆಯದು. ಸಾರ್ವಜನಿಕ ಅವಮಾನಗಳು ಆಗುತ್ತದೆ ಜೊತೆಗೆ ದುಡ್ಡನ್ನು ಕೂಡ ಕಳೆದುಕೊಳ್ಳುತ್ತಿರುವ ಎಚ್ಚರಿಕೆ.

ಕನ್ಯಾ ರಾಶಿ : ಚೆನ್ನಾಗಿದೆ, ತೊಂದರೆಯೆನಿಲ್ಲ, ತೃಪ್ತಿದಾಯಕ ,ಒಳ್ಳೆಯ ಭೋಜನ ,ಸುತ್ತಾಟ, ಪ್ರಯಾಣ ,ಎಲ್ಲವನ್ನು ನೋಡುವಂತಹ ದಿನ.

ತುಲಾ ರಾಶಿ : ಚೆನ್ನಾಗಿದೆ ವೃತ್ತಿಪರವಾಗಿ ಶುಭ ಸುದ್ದಿಯೊಂದನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ : ಭಾಗ್ಯೋದಯ ಮಾಡುವ ಕೆಲಸ ಕಾರ್ಯಗಳಲ್ಲಿ ವಿಶೇಷ ಅಭಿವೃದ್ಧಿ.

ಧನಸ್ಸು ರಾಶಿ : ಕುಟುಂಬದಲ್ಲೊಂದು ಅಸಮಾಧಾನ, ಹತ್ತಿರದವರಿಂದ ನೋವು, ಇಲ್ಲವೆ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುತ್ತೀರಾ.

ಮಕರ ರಾಶಿ : ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಒದಗಿ ಬರುತ್ತದೆ.

ಕುಂಭ ರಾಶಿ : ಪ್ರಯಾಣದಲ್ಲಿ ಎಚ್ಚರಿಕೆ ಬೇಗ ಥಂಡಿಯಾಗುತ್ತದೆ.

ಮೀನ ರಾಶಿ : ಮಕ್ಕಳಿಂದ ಮನೆಯವರಿಂದ ವಿಶೇಷ ಲಾಭ. ಇಷ್ಟು ದಿನ ಪಟ್ಟಂತಹ ಕಷ್ಟಕ್ಕೆ ಸೌಭಾಗ್ಯ  ಯೋಗವಿದೆ, ಛತ್ರ ಚಾಮರಗಳಿಂದ ಪೂಜಿಸಲ್ಪಡುವಿರಿ.

All Rights reserved Namma  Kannada Entertainment.

ಅನುದಾನಿತ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ: ಸುರೇಶ್ ಕುಮಾರ್

0

ಬೆಂಗಳೂರು: ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇರುವಂತೆಯೇ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ವಿಸ್ತರಿಸುವ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ
ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂ (ರಿ), ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಹಾಗೂ ಆಡಳಿತ ಮಂಡಳಿಗಳ ಹೋರಾಟ ಸಮನ್ವಯ ಸಮಿತಿ ಹಾಗೂ ರಾಜ್ಯದ ವಿವಿಧ ಸಂಟನೆಗಳ ಆಶ್ರಯದಲ್ಲಿ ಧಾರವಾಡದಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ ಮತ್ತು ಸಂಟಘನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸರ್ಕಾರಿ ನೌಕರರಿಗಿರುವ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.
ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿ ಸಲ್ಲಿಸಿರುವ ಕಾಲ್ಪನಿಕ ವೇತನ ಅನುಷ್ಠಾನದಿಂದಾಗುವ ಆರ್ಥಿಕ ಪರಿಣಾಮಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ವಿವರವಾದ ವರದಿ ತಯಾರಿಸಿ ಸಂಪುಟದ ಮುಂದಿಡಲಾಗುವುದು. ಈ ಕುರಿತಂತೆ ವರದಿಯನ್ನು ಕಡತದಲ್ಲಿ ಮಂಡಿಸುವಂತೆ ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಾಕಿ ವೇತನದ ಹೊರೆಯಿಲ್ಲದೇ ಮತ್ತು ಸರ್ಕಾರದ ಬೊಕ್ಕಸಕ್ಕೆ ಅನಾವಶ್ಯಕ ಹೊರೆಯಾಗದಂತೆ ಎಲ್ಲ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸೌಲಭ್ಯವನ್ನು ಒದಗಿಸಲು ಸಿಎಂ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ವಿವರಿಸಿದರು.

ಎನ್.ಪಿ.ಎಸ್ ಪದ್ಧತಿ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಮುಂದುವರೆಸುವುದು ಶಿಕ್ಷಣ ಇಲಾಖೆಯೊಂದೇ ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಅದು ಎಲ್ಲ ಇಲಾಖೆಗಳಿಗೂ ಸಂಬಂಧಿಸಿದಾಗಿದ್ದು, ಇದು ನೀತಿನಿರೂಪಣಾ ವಿಷಯವಾಗಿರುವುದರಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಗಳೂ ಸೇರಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಹಳೇ ಪದ್ಧತಿಯನ್ನೇ ಮುಂದುವರೆಸುವುದು ಇಲ್ಲವೇ ಎನ್.ಪಿ.ಎಸ್ ಮುಂದುವರೆಸುವುದಾದರೆ ಉದ್ಯೋಗದಾತನ ವಂತಿಗೆಯನ್ನು ಸರ್ಕಾರವೇ ಭರ್ತಿ ಮಾಡಬೇಕೆಂಬ ಕುರಿತ ತಮ್ಮ ಆಗ್ರಹವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು

ದೈಹಿಕ ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿಸಿದ ಡಾ. ವೈದ್ಯನಾಥನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಪ್ರಸ್ತಾಪಿಸಿದ್ದು, ಈ ಶಿಕ್ಷಕರನ್ನು ಇತರೆ ಶಿಕ್ಷಕರ ಸಾಲಿನಲ್ಲಿ ಸಮಾನವಾಗಿ ಗುರುತಿಸಲು ಅನುವಾಗುವಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

2015ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಸೇರಿದಂತೆ ಹಲವಾರು ಕಾರಣಗಳಿಂದ ತೆರವಾಗಿರುವ ಹುದ್ದೆಗಳ ಭರ್ತಿಗೆ ಪ್ರಸ್ತುತ ಆರ್ಥಿಕ ಇಲಾಖೆಯ ನಿರ್ಬಂಧದ ತೆರವಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಾಗೆಯೇ ಇದಕ್ಕೂ ಮುನ್ನ ರಾಜ್ಯದ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳ ವಿವರಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದಲ್ಲಿ 100ಕ್ಕಿಂತ ಕಡಿಮೆ ಇರುವ ಶಾಲೆಗಳ ನೊಂದಣಿ ರದ್ದುಪಡಿಸಲು ಆ ಭಾಗದ ಆಯುಕ್ತರು ಹೊರಡಿಸಿರುವ ಆದೇಶ ಶಿಕ್ಷಣ ಅಧಿನಿಯಮದ ಆದೇಶಕ್ಕೆ ವಿರುದ್ಧವಾಗಿದ್ದು, ತಕ್ಷಣವೇ ಹಿಂಪಡೆಯಲು ಅಪರ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದರು. ಸರ್ಕಾರವು ಎಲ್ಲ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಲು ತೆರೆದ ಮನಸ್ಸು ಹೊಂದಿದ್ದು ಮೂರು ತಿಂಗಳ ಅವಧಿಯಲ್ಲಿ ಈಡೇರಿಸಲು ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕ್ರಮ ವಹಿಸುತ್ತದೆ. ನಾಡಿನ ಮಕ್ಕಳ ಹಿತದೃಷ್ಟಿಯಿಂದ ಸಂಘಟನೆಯು ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು. ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವ, ವಿಧಾನಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ, ಸಂಘಟನೆಯ ರಾಜ್ಯ ಸಂಟನಾ ಕಾರ್ಯದರ್ಶಿ ಶಾಮ ಮಲ್ಲನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ತೊರೆದು‌ ಜೆಡಿಎಸ್ ಸೇರ್ಪಡೆಗೆ ಸಿಎಂ ಇಬ್ರಾಹಿಂ ನಿರ್ಧಾರ

0

ಬೆಂಗಳೂರು: ಕಾಂಗ್ರೆಸ್ ವಿರುದ್ದದ ಅಸಮಧಾನದ ಕಿಚ್ಚು ಮಾಜಿ ಸಚಿವ ಸಿಎಂ ಇಬ್ರಾಹಿಂ ರನ್ನು ಮತ್ತೇ ಜೆಡಿಎಸ್ ಪಕ್ಷಕ್ಕೆ ಸೇರುವಂತೆ ಮಾಡಿದೆ. ರಾಜ್ಯಸಭಾ ಸ್ಥಾನ ಕೊಡದೇ ಇದ್ದದ್ದು, ಅಲ್ಪಸಂಖ್ಯಾತ ನಾಯಕನಾಗಿ ಕಾಂಗ್ರೆಸ್ ನಲ್ಲಿ ಜಮೀರ್ ಅಹಮದ್ ಗುರುತಿಸಿಕೊಳ್ಳುತ್ತಿರುವುದು. ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರೂ ಯಾವುದೇ ಫಲಕೊಡದೇ ಇದ್ದದ್ದು ಕಾಂಗ್ರೆಸ್ ವಿರುದ್ಧ ಅಸಮಧಾನ ಭುಗಿಲೇಳಲು ಶುರುಮಾಡಿತ್ತು. ಹೀಗಾಗಿ ಕಾಂಗ್ರೆಸ್ ತೊರೆದು ಮತ್ತೇ ಜೆಡಿಎಸ್ ಗೆ ತೆರಳಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿಎಂ ಇಬ್ರಾಹಿಂ ನಿರ್ಧರಿಸಿದ್ದಾರೆ.

ಇಂದು ಪದ್ಮನಾಭ ನಗರದಲ್ಲಿ ಇರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರವರ ನಿವಾಸಕ್ಕೆ ತೆರಳಿ ಪಕ್ಷ ಸೇರ್ಪಡೆ ಕುರಿತು ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆ ಸುಧೀರ್ಘ ಚರ್ಚೆ ನಡೆಸಿದರು. ಹೆಚ್ ಡಿ ದೇವೇಗೌಡರ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾತನಾಡಿದ ಮಾಜಿ ಸಚಿವ ಸಿಎಂ ಇಬ್ರಾಹಿಂ, ನಾಳೆಯಿಂದ ರಾಜ್ಯ ಪ್ರವಾಸ ಆರಂಭಿಸುವೆ. ಜನರ ಅಭಿಪ್ರಾಯ ಪಡೆದ ನಂತರ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

“ಕಾಂಗ್ರೆಸ್ ಪೋಸ್ಟರ್ ನಲ್ಲಿ ಎಲ್ಲೂ ಸಾಬರ ಫೋಟೋ ಇಲ್ಲ ಯಾಕೆ..?”..!

ಡಿ.ಕೆ. ಶಿವಕುಮಾರ್ ಕೂಡ ಬಂದು ಮಾತುಕತೆ ನಡೆಸಿದ್ದಾರೆ. ಜನರ ಬಳಿ ಹೋಗಿ ಎರಡನ್ನೂ ತಿಳಿಸುವೆ. ಅವರು ಹೇಗೆ ಹೇಳ್ತಾರೋ ಹಾಗೆ ಮಾಡುವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ನಾನು ಮಾತಾಡಲ್ಲ. ಸಮಯ ಬಂದಾಗ ನೀವೇ ನೋಡಿ. ರಾಜ್ಯದ ಜನರೇ ಚಿತ್ರಣ ಕೊಡಬೇಕು. ನಾನು ದೇವೇಗೌಡರು ತಂದೆ ಮಗ ಇದ್ದಂತೆ, ತಂದೆ ಎಂದಾದರೂ ಮಗನಿಗೆ ಬೇಡ ಅಂತಾರಾ..? ಬಿಜೆಪಿ ಬಗ್ಗೆಯೂ ಆತ್ಮೀಯತೆ ಇದೆ, ಯಾರ ಬಗ್ಗೆಯೂ ವೈಯಕ್ತಿಕ ಶತೃತ್ವ ಇಲ್ಲ, ಸಿದ್ದಾಂತ ಬೇರೆ ಬೇರೆ ಅಷ್ಟೇ. ನಾನು ಸಚಿವನಾಗಿದ್ದಾಗ ಅನಿಲ್ ಬೈಜಲ್ ಅಂತ ಎಂಡಿ ಇದ್ರು, ಅವರು ಆರೆಸ್ಸೆಸ್, ಹಾಗಂತ ನಾನು ಆರೆಸ್ಸೆಸ್ ಆದೆನಾ..? ಇಲ್ಲ. ಎಲ್ಲರ ಅಭಿಪ್ರಾಯ ಪಡೆದು ಡಿಸಿಷನ್ ತಗೋಬೇಕು. ಎಲ್ಲರ ಅಭಿಪ್ರಾಯ ಪಡೆದು ಹೇಳ್ತೀನಿ ಅಂತ ಡಿಕೆಗೆ ಹೇಳಿದೆ. ನಾನು ಯಾವಾಗಲೂ ಮುಸ್ಲಿಂ ನಾಯಕ ಆಗಲೇ ಇಲ್ಲ. ಸಿದ್ದರಾಮಯ್ಯ ಗೆ ಕುರುಬರ ನಾಯಕ ಅಂತಾರಾ..? ನಾನು ಹುಬ್ಬಳ್ಳಿ ಈದ್ದಾಗಲ್ಲೇ ಅದನ್ನು ತೋರಿಸಿದ್ದೇನೆ. ಅಲ್ಪಸಂಖ್ಯಾತರಿಗೆ ಸಂವಿಧಾನದ ಬೇಡಿಕೆ ಕೊಡಿ ಅಂತ ಕೇಳಿದ್ದೀನಿ. ಕಾಂಗ್ರೆಸ್ ಪೋಸ್ಟರ್ ನಲ್ಲಿ ಎಲ್ಲೂ ಸಾಬರ ಫೋಟೋ ಇಲ್ಲ ಯಾಕೆ..?. ಎಲ್ಲರೂ ಕುಳಿತಿದ್ದಾರೆ, ನಾವು ನಿಂತಿದ್ದೇವೆ, ನಮಗೆ ಯಾವ ಸ್ಥಾನ ಕೊಡಬೇಕೋ ಅದನ್ನ ಕೊಡಿ ಅಂತ ಅಂದಿನಿಂದಲೂ ಕೇಳಿದ್ದೇನೆ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ವಿಚಾರದ ಕುರಿತು ಹೇಳಿಕೆ ನೀಡಿದ ಅವರು, ಜೆರ್ಸಿ ಹಸು ಗಂಡು ಕರು ಹಾಕಿದರೆ ಸಾಕೋರು ಯಾರು..? ಗೋವು ಸಾಗಿಸುವಾಗ ಹಿಡಿದು ಕೊಂದರೂ ತಪ್ಪಿಲ್ಲ ಅಂತ ಮಾಡಿರೋದು ಸರಿಯಲ್ಲ. ನಾಳೆ ಕೌನ್ಸಿಲ್ ನಲ್ಲಿ ಮಾತಾಡಲು ಇನ್ ಪುಟ್ ಪಡೆದಿದ್ದೇನೆ. ನಾಳೆ ಸೆಷನ್ ಕರೆದಿರೋದು ಇಲ್ಲೀಗಲ್. ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಕಾರ್ಯದರ್ಶಿ ಹತ್ತಿರ ಲೆಟರ್ ಬರೆಸಿಲ್ಲ ಹಿಂದೆ ಯಾವಾಗಲೂ ನಡೆದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

“ಬೀಫ್ ಎಕ್ಸ್ ಪೋರ್ಟ್ ಮಾಡ್ತಿರೋರೆಲ್ಲಾ ಬಿಜೆಪಿ ಸಪೋಟರ್ಸ್”

0

ಬೆಂಗಳೂರು: ಬೀಫ್ ಎಕ್ಸ್ ಪೋರ್ಟ್ ಮಾಡ್ತಿರೋರೆಲ್ಲಾ ಬಿಜೆಪಿ ಸಪೋಟರ್ಸ್ ಗಳೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರದ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೋದಿ ಸರ್ಕಾರ ಬಂದ ಮೇಲೆ ಬೀಫ್ ಎಕ್ಸ್ ಪೋರ್ಟ್ ಜಾಸ್ತಿಯಾಗಿದೆ. ಅಲ್ಲದೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿರೋರೆಲ್ಲಾ ಬಿಜೆಪಿ ಸಪೋಟರ್ಸ್ ಗಳೆ. ಎಕ್ಸ್ ಪೋರ್ಟ್ ಮಾಡ್ತಿರುವವರಿಗೆ ಒಂದು ನೀತಿ. ಬೇರೆಯವರಿಗೆ ಒಂದು ನೀತಿ ಎಂದು ವಿಧಿಸುವುದು ಸರಿ ಅಲ್ಲ. 25 ಲಕ್ಷ ಕುಟುಂಬಗಳು ಚರ್ಮೋಶ್ಯೋಗದಲ್ಲಿದ್ದಾರೆ. 8 ಲಕ್ಷ ಪ. ಜಾ ಜನ ಚರ್ಮ ಸುಲಿಯುವ ಕೆಲಸದಲ್ಲಿ ಬದುಕಿದ್ದಾರೆ. ನಮ್ಮ ದೇಶಕ್ಕೆ ಚರ್ಮೋದ್ಯೋಗದಿಂದ 5.5 ಬಿಲಿಯನ್ ಡಾಲರ್ಸ್ ಜಿಡಿಪಿ ಆದಾಯ ಇದೆ. ಚರ್ಮೋದ್ಯೋಗದಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಚರ್ಮದ ಪ್ರಾಡಕ್ಸ್ಟ್ ಮೇಲೆ ಬೇಕಾದಷ್ಟು ಮಂದಿ ಅವಲಂಬಿತರಾಗಿದ್ದಾರೆ. ಈಗಲೇ ಉದ್ಯೋಗ ಕೊಡೋಕೆ ಆಗ್ತಿಲ್ಲ. ಏಕಾಏಕಿ ನಿಷೇಧ ಮಾಡುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದಾರೆ.

ಗೋ ಹತ್ಯೆ ನಿಷೇಧದಿಂದ ನಿರೋದ್ಯೋಗ ಜಾಸ್ತಿ ಆಗುತ್ತೆ. ಹೀಗಾಗಿ ಸೆಂಟ್ರಲ್ ಕಮಿಟಿ ರಚಿಸಿ ಒಂದು ತಜ್ಞರ ಕಮಿಟಿ ಮಾಡಲಿ. ಅದರ ಕುರಿತು ವ್ಯಾಪಕವಾಗಿ ಚರ್ಚೆ ಆಗಲಿ. ಅವರ ವರದಿ ಮೇಲೆ ಕ್ರಮ ತೆಗೆದುಕೊಳ್ಳಲಿ. ಇದ್ಯಾವುದೇ ಇಲ್ಲದೇ ಆಗೋ ನಷ್ಟಕ್ಕೆ ಪರಿಹಾರ ಕೊಡೋದು ಯಾರು..? ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದರು.

“ಸ್ಪೀಕರ್ ಸ್ಥಿತಿ ನೋಡಿದ್ರೆ ಅಯ್ಯೋ ಅನ್ಸುತ್ತೆ”

ಮುಂದುವರೆದು ಮಾತನಾಡಿದ ಅವರು, ಸ್ಪೀಕರ್ ಸ್ಥಿತಿ ನೋಡಿದ್ರೆ ಅಯ್ಯೋ ಅನ್ಸುತ್ತೆ. ಅವ್ರು ಆರ್ ಎಸ್ ಎಸ್ ಕಡೆಯವ್ರು. ಅದಕ್ಕೆ ಮಾಡಿದ್ರೆ ಮಾಡಿಕೊಳ್ಳಲಿ ಅಂತ ಸುಮ್ಮನಿದ್ದಾರೆ. ಗೋಶಾಲೆಗಳಲ್ಲಿ ಹಸುಗಳನ್ನು ಸಾಕೋದು ಪ್ರಾಕ್ಟಿಕಲ್ ಆಗಿ ಆಗುತ್ತಾ..? ನಾವು ಗೋಮಾತೆ ಪೂಜೆ ಮಾಡ್ತೀವಪ್ಪಾ. ದೀಪಾವಳಿ ಹಬ್ಬದಂದೂ ನಾವು ಹಸುಗಳಿಗೆ ಎಡೆ ಹಾಕ್ತೀವಿ. ಗೋವುಗಳನ್ನ ಸಾಕದೇ ಇರೋರ ಕೆಲಸ ಇದು. ಒಂದು ಹಸುಗೆ ದಿನಕ್ಕೆ ಕನಿಷ್ಠ 6 ಕೆಜಿ ಮೇವು ಬೇಕು. ಸರ್ಕಾರವೇ ದುಡ್ಡು ಕೊಟ್ಟು ಗೋಶಾಲೆಗಳನ್ನ ನಡೆಸಬೇಕಾಗುತ್ತೆ. ಇದು ಸರ್ಕಾರಕ್ಕೂ ಹೊರೆಯಾಗುವುದಿಲ್ಲವೇ..?. ಚರ್ಮದ ಉದ್ಯಮಕ್ಕೂ ಧಕ್ಕೆಯಾಗಲಿದೆ. ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತೆ. ಆಗ ರೈತರು ವಯಸ್ಸಾದ ಹಸುಗಳನ್ನ ಬೀದಿಗೆ ಬಿಟ್ಟು ಬಿಡ್ತಾರೆ. ಕಂಡೋರ ಜಮೀನುಗಳಿಗೆ ಹಸುಗಳು ನುಗ್ಗಿ ಗಲಾಟೆಗಳು ಆಗ್ತವೆ. ಸಣ್ಣ ರೈತರು, ಕೂಲಿ ಕಾರ್ಮಿಕರಿಗೆ ದೊಡ್ಡ ಹೊಡೆತ ಆಗಲಿದೆ. ಮಹಿಳೆಯರು ಬಹಳಷ್ಟು ಮಂದಿ ಹೈನುಗಾರಿಕೆ ಮೇಲೆ ಅವಲಂಭಿತರಾಗಿದ್ದಾರೆ. ಈಗ ನಿಷೇಧ ಮಾಡಿದ್ರೆ ಬಹಳಷ್ಟು ಅವ್ರಿಗೆ ಲಾಸ್ ಆಗುತ್ತೆ. ಅನುತ್ಪಾದಕ ಗೋವುಗಳನ್ನು ಸರ್ಕಾರವೇ ಕೊಂಡುಕೊಳ್ಳಲಿ. ಜನಸಾಮಾನ್ಯರ ಮೇಲೆ ಯಾಕೆ ಹೊರೆ ಹಾಕ್ತೀರಿ ಎಂದು ಆರೋಪಿಸಿದರು.

ಬಸ್ ನಂಬಿ ರೋಡಿಗಿಳಿದರೆ ಜೋಕೆ: ನಾಳೆಯೂ ಇಲ್ಲ ಸಾರಿಗೆ ವ್ಯವಸ್ಥೆ

0

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ನಾಳೆಯೂ ಮುಂದುವರೆಯಲಿದೆ.

ಸಂಧಾನ ಮಾತುಕತೆ ವಿಫಲ

ಇಂದು ಸಾರಿಗೆ ನೌಕರರ ಮುಖಂಡರನ್ನು ಕರೆದು ಡಿಸಿಎಂ, ಸಾರಿಗೆ ಸಚಿವ ಲಕ್ಷಣ್ ಸವದಿ ವಿಧಾನಸೌಧದಲ್ಲಿ ಸಭೆ ನಡೆಸಿದರು. ಆದರೆ ಮುಷ್ಕರಕ್ಕೆ ಕರೆಕೊಟ್ಟ ಸಂಘಟನೆಯನ್ನು ಹೊರತು ಪಡಿಸಿ ಉಳಿದ ಸಂಘಟನೆಗಳ ಪ್ರಮುಖರ ಜೊತೆ ಡಿಸಿಎಂ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಮಾತುಕತೆ ವಿಫಲವಾಗಿದ್ದು, ನಾಳೆಯೂ ಪ್ರತಿಭಟನೆ ಮುಂದುವರೆಸಲು ಸಾರಿಗೆ ಇಲಾಖೆ ನೌಕರರು ನಿರ್ಧರಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಸಚಿವ ಲಕ್ಷಣ್ ಸವದಿ, ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಬೇಡಿಕೆಗಳ ಬಗ್ಗೆ ಈಗಾಗಲೇ ಒಕ್ಕೂಟಗಳ ಮುಖಂಡರ ಒಂದು ಸುತ್ತಿನ ಸಭೆ ನಡೆಸಲಾಯಿತು. ಅಗತ್ಯವಿದ್ದರೆ ಮತ್ತಷ್ಟು ಮಾತುಕತೆಗಳನ್ನು ನಡೆಸಿ ಸಂಧಾನ ಮಾರ್ಗದಲ್ಲಿ ಸಮಸ್ಯೆ ಪರಿಹರಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ.
ಇಂದು ದಿಡೀರ್ ಆಗಿ ಬಸ್ ಸಂಚಾರವನ್ನು ಕೆಲವೆಡೆ ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣ ಮುಷ್ಕರನಿರತ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಬೇಕು ಎಂದು ಮನವಿ ಮಾಡಿದ್ದಾರೆ.

ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಯವರೊಂದಿಗೆ ಒಕ್ಕೂಟದ ಮುಖಂಡರುಗಳ ಸಭೆಯನ್ನು ಏರ್ಪಡಿಸಿ ಶೀಘ್ರವೇ ಮುಂದಿನ ಮಾರ್ಗೋಪಾಯಗಳನ್ನು ನಿರೂಪಿಸಲಾಗುವುದು. ಕೋವಿಡ್‍ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು.
ಸಿಬ್ಬಂದಿಗಳಿಗೆ ಕೆಲಸಗಳನ್ನು ವಿಂಗಡಿಸುವಾಗ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಒಕ್ಕೂಟದ ಮುಖಂಡರು ಗಮನ ಸೆಳೆದಿದ್ದಾರೆ. ಆದ್ದರಿಂದ ಈ ರೀತಿಯ ಕಿರುಕುಳ ನೀಡುವ ಘಟನೆಗಳು ಮುಂದೆ ನಡೆದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ವಿಧಾನಮಂಡಲದ ಅಧಿವೇಶನದಲ್ಲಿ ನಾನು ಪಾಲ್ಗೊಂಡಿದ್ದರಿಂದ ಸಾರಿಗೆ ಅಧಿಕಾರಿಗಳನ್ನು ಕಳುಹಿಸಿ ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಕಾರ್ಮಿಕರ ಹಿತಾಸಕ್ತಿ ರಕ್ಷಿಸುವುದೇ ನನ್ನ ಪ್ರಥಮ ಆದ್ಯತೆಯೇ ಹೊರತು ನನಗೆ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಉದ್ಭವಿಸಿಲ್ಲ ಎಂಬುದನ್ನು ಪ್ರತಿಭಟನಾಕಾರರು ಗಮನಿಸಬೇಕು ಎಂದರು ತಿಳಿಸಿದ್ದಾರೆ.

ಸಾರಿಗೆ ಸಿಬ್ಬಂದಿಗಳ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಸಹ ಸಾರಿಗೆ ಸಿಬ್ಬಂದಿಗಳ ಸಂಬಳ ನೀಡಿಕೆಯ ಬಗ್ಗೆ ಅತ್ಯಂತ ಉದಾರವಾಗಿ ಬೇಡಿಕೆಗೆ ಸ್ಪಂದಿಸಿದ್ದನ್ನು ನಾನು ಸ್ಮರಿಸುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ಎ.ಐ.ಟಿ.ಯು.ಸಿ ಮುಖಂಡರಾದ ಶ್ರೀ ಅನಂತ ಸುಬ್ಬರಾವ್, ಸಿ.ಐ.ಟಿ.ಯು. ಮುಖಂಡರಾದ ಶ್ರೀ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಸಾರಿಗೆ ಆಯುಕ್ತರಾದ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: 350 ಉಪನ್ಯಾಸಕರ ನೇಮಕ

0

ಬೆಂಗಳೂರು: ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ
ರಾಜ್ಯ ಸರ್ಕಾರ ನೂತನ ಉದ್ಯೋಗ ಘೋಷಣೆಗೆ ಬ್ರೇಕ್ ಹಾಕಿತ್ತು. ಖಜಾನೆಯಲ್ಲಿ ಹಣ ಇಲ್ಲ ಎನ್ನುವ ಕಾರಣಕ್ಕೆ ಹೊಸ ಉದ್ಯೋಗ ಕ್ಕೆ ಕರೆ ನೀಡಲು ಹಿಂದೇಟು ಹಾಕಿತ್ತು.‌
ರಾಜ್ಯ ಸರ್ಕಾರದ ನಡೆ ಆಕಾಂಕ್ಷಿಗಳಿಗೆ ಭಾರೀ ನಿರಾಸೆ ಉಂಟು ಮಾಡಿತ್ತು. ಸರ್ಕಾರಿ ಉದ್ಯೋಗ ವನ್ನೇ ನಂಬಿ ಕೂತಿದ್ದ ಮಂದಿಗೆ ಆತಂಕ ಉಂಟುಮಾಡಿತ್ತು. ಇದೀಗ ಕೋವಿಡ್ 19 ನಿಂದ ಕೊಂಚ ಮಟ್ಟಿಗೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ

ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ ನಂತರವೂ ನೆನೆಗುದಿಗೆ ಬಿದ್ದಿರುವ ಅನುದಾನಿತ ಪದವಿ ಕಾಲೇಜುಗಳ 350 ಉಪನ್ಯಾಸಕರ ನೇಮಕಾತಿ ಬಗ್ಗೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಅನುದಾನಿತ ಪ್ರಾಧ್ಯಾಪಕರ ಒಕ್ಕೂಟದ ಪ್ರತಿನಿಧಿಗಳು, ಉನ್ನತ ಶಿಕ್ಷಣ ಹಾಗೂ ಹಣಕಾಸು ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ ಡಿಸಿಎಂ, ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರಲ್ಲದೆ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಒಟ್ಟು 907 ಮಂದಿ ಉಪನ್ಯಾಸಕರನ್ನು ಅನುದಾನಿತ ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದರಲ್ಲಿ 369 ಮಂದಿಗೆ ನೇಮಕಾತಿ ಆದೇಶ ನೀಡಿದ್ದು ಅವರೆಲ್ಲರೂ ತಮಗೆ ನಿಯೋಜನೆ ಆಗಿರುವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯುಜಿಸಿ ನಿಯಮಗಳ ಅನುಸಾರವಾಗಿಯೇ ಅವರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

ಇನ್ನು, 350 ಅಭ್ಯರ್ಥಿಗಳ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದು, ಇಷ್ಟೂ ಮಂದಿಯ ನೇಮಕಾತಿ ಕುರಿತಂತೆ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿಎಂ, ಈ ಬಗ್ಗೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಅವರು ಕೂಡ, ಪ್ರಸ್ತಾವನೆ ಬಂದ ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಕೊಳ್ಳೆಗಾಲದ ಶಾಸಕ ಮಹೇಶ್‌ ಅವರ ನೇತೃತ್ವಲ್ಲಿ ಡಾ.ಅಶ್ವತ್ಥನಾರಾಯಣ ಅವರನ್ನು ಭೇಟಿಯಾದ ಅನುದಾನಿತ ಕಾಲೇಜುಗಳ ಉಪನ್ಯಾಸಕರು ತಮ್ಮೆಲ್ಲ ಸಮಸ್ಯೆಗಳನ್ನು ನಿವೇದನೆ ಮಾಡಿಕೊಂಡರು.

ಈ ಹಿಂದೆ ಅಂದರೆ, 2015ರ ಡಿಸೆಂಬರ್ 31ರವರೆಗಿನ ಬೋಧಕರ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಆ ಪ್ರಕಾರ ಈ ನೇಮಕ ಮಾಡಬೇಕಾಗಿದೆ.

ಸಾರಿಗೆ ನೌಕರರ ಮುಷ್ಕರ: ಸಭೆ ಮೂಲಕ ಸಂಧಾನಕ್ಕೆ ಮುಂದಾದ ಸವದಿ

0

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಡಿಸಿಎಂ, ಸಾರಿಗೆ ಸಚಿವ ಲಕ್ಷಣ್ ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ.

ವಿವಿಧ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವದಿ ಮುಷ್ಕರ ನಡೆಸಲು ನಿರ್ಧರಿಸಿದ್ದು, ಕೆ ಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ ಸೇವೆಯನ್ನು ಇಂದು‌ ಬೆಳಗ್ಗಿನಿಂದಲೇ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸಾರಿಗೆ ಸಚಿವ ಡಿಸಿಎಂ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತಿದ್ದು, ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಬಿಸಿ: ಪ್ರಯಾಣಿಕರು ಸಹಕರಿಸುವಂತೆ ಸಾರಿಗೆ ಸಚಿವರ ಮನವಿ

ಸಭೆಗೂ ಮುನ್ನ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೊರೊನಾ ಸಂಕಷ್ಟದಿಂದ ಸಾರಿಗೆ ನಿಗಮ‌ ಸುಮಾರು ೩ ಸಾವಿರ ಕೋಟಿ‌ ರೂ ನಷ್ಟ ಅನುಭವಿಸಿದೆ. ಆದರೂ ನಿಗಮದ ನೌಕರರಿಗೆ ವೇತನ ಪಾವತಿಯಲ್ಲಿ ತೊಂದರೆ ಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಹಾಗೂ ನಿಗಮದ ಸಹಕಾರ ದೊಂದಿಗೆ ವೇತನ ಪಾವತಿ ಮಾಡಲಾಗಿದೆ. ಬೇರೆ ರಾಜ್ಯದಲ್ಲಿ ಶೇಕಡಾ ೨೫ ರಷ್ಟು‌ವೇತನ ಕಡಿತಗೊಳಿಸಿದರೂ ನಮ್ಮಲ್ಲಿ ನೌಕರರಿಗೆ ತೊಂದರೆಯಾಗದಂತೆ ಪೂರ್ಣ ವೇತನ ನೀಡಲಾಗಿದೆ. ನೌಕರರ ಬೇಡಿಕೆ ಬಗ್ಗೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಎರಡು ತಿಂಗಳು ಬಂದ್ ಇತ್ತು. ಅಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ.‌ ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆ ಆಗುತ್ತೆ.
ಏಕಾಏಕಿ ಬದಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದರು.‌

ನಿನ್ನೆಯ ಅಧಿವೇಶನದಲ್ಲಿ ನಾವೆಲ್ಲರೂ ಸದನದಲ್ಲಿ ಇರಬೇಕಿತ್ತು. ಎಲ್ಲಾ ಸದಸ್ಯರು ಇದ್ದು ಬಿಲ್ ಪಾಸ್ ಮಾಡಬೇಕಿತ್ತು. ನಮಗೆ ಬಹುಮತ ಇರಲಿಲ್ಲ ಅದಕ್ಕಾಗಿ ನಾವು ಅಧಿವೇಶನದಲ್ಲೇ ಇದ್ವಿ.‌ ಬಿಲ್ ಗಳ ಪಾಸ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು.‌ ಅದಕ್ಕಾಗಿ ನಾನು ನಿನ್ನೆ ಸದನದಲ್ಲಿ ಇದ್ದೆ. ಅದಕ್ಕಾಗಿ ಪ್ರತಿಭಟನೆ ಸ್ಥಳಕ್ಕೆ ಹೋಗೋಕೆ ಆಗಿರಲಿಲ್ಲ. ಪ್ರತಿಭಟನೆ ಮಾಡುವಂತ ಸಂದರ್ಭದಲ್ಲಿ ಅವರು ಮುತ್ತಿಗೆ ಹಾಕುವ ಕೆಲಸ ಮಾಡಿದ್ರು.‌ ಅದಕ್ಕಾಗಿ ನಿಯಂತ್ರಿಸಲು ಹಾಗು ಮುಂದಿನ ಅನಾಹುತ ತಪ್ಪಿಸಲು ಪೊಲೀಸರು ಅವರನ್ನು ಬಂಧಿಸಿದ್ರು. ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇವತ್ತು ಅವರ ಜೊತೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

ಧರಣಿ ವಾಪಸ್ ಪಡೆಯಿರಿ..ಸರ್ಕಾರ ನಿಮ್ಮ ಜೊತೆ ಇದೆ. ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಆದರೆ ಇಂತಹ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡ. ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕೂತು ಚರ್ಚೆ ಮಾಡೋಣ. ಒಂದು ನಿಗಮವನ್ನು ಸಾರಿಗೆ ನಿಗಮ ಅಂತಾ ಘೋಷಣೆ ಮಾಡಿದ್ರೆ ಇಡೀ ನಿಗಮ ಘೋಷಣೆ ಮಾಡುವ ಒತ್ತಾಯ ಬರುತ್ತದೆ. ಇದು ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಇದೆ.‌ ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡೋಕೆ ಆಗಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ತಿಳಿಸಿದರು.

ವಿವಾದಕ್ಕೀಡಾಯ್ತು ಅನಿಲ್ ಕಪೂರ್ ಚಿತ್ರದ ಟ್ರೇಲರ್; ಐಎಎಫ್ ಕ್ಷಮೆ ಕೋರಿದ ಬಾಲಿವುಡ್ ನಟ

0

ಅನಿಲ್ ಕಪೂರ್ ಅಭಿನಯದ ಎಕೆ ವರ್ಸಸ್ ಎಕೆ ಚಿತ್ರದ ಟ್ರೇಲರ್ ಭಾರೀ ವಿವಾದಕ್ಕೀಡಾಗಿದ್ದು, ಚಿತ್ರದ ಪ್ರಚಾರಕ್ಕಾಗಿ ಬಿಡುಗಡೆಯಾಗಿದ್ದ ಟ್ರೇಲರ್ ನಲ್ಲಿ ಬಳಸಿರುವ ಭಾಷೆ ಬಗ್ಗೆ ಭಾರತೀಯ ವಾಯುಪಡೆ (ಐಎಎಫ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ದೃಶ್ಯವನ್ನು ತೆಗೆಗುವಂತೆ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ನೆಟ್ ಫ್ಲಿಕ್ಸ್ ಗೆ ಸೂಚನೆ ನೀಡಿದೆ.

ಎಕೆ ವರ್ಸಸ್ ಎಕೆ ಚಿತ್ರದ ಪ್ರಚಾರಾರ್ಥ ನಟ ಅನಿಲ್ ಕಪೂರ್ ಟ್ರೇಲರ್ ನ್ನು ಟ್ವೀಟ್ ಮಾಡಿದ್ದರು. ಇದರಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸುವ ಪದ ಬಳಕೆ ಮಾಡಲಾಗಿತ್ತು. ಈ ವಿಡಿಯೋ ತುಣುಕನ್ನು ರಿಟ್ವೀಟ್ ಮಾಡಿದ್ದ ಭಾರತೀಯ ವಾಯುಪಡೆ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ನಡವಳಿಕೆಗೆ ವಿರುದ್ಧವಾಗಿದ್ದು, ಸಂಭಾಷೆಣೆಯಲ್ಲಿರುವ ಪದಬಳಕೆ ಸೂಕ್ತವಾಗಿಲ್ಲ ಎಂದು ಕಿಡಿಕಾರಿತ್ತು. ಅಲ್ಲದೇ ಇದಕ್ಕೆ ಸಂಬಂಧಿಸಿದ ದೃಶ್ಯವನ್ನು ಹಿಂಪಡೆಯಬೇಕು ಎಂದು ತಾಕೀತು ಮಾಡಿತ್ತು.

ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಎಕೆ ವರ್ಸಸ್ ಎಕೆ ಚಿತ್ರಕ್ಕೆ ಅನುರಾಗ್ ಕಶ್ಯಪ್ ನಿರ್ಮಾಪಕರಾಗಿದ್ದಾರೆ. ಚಿತ್ರದ ಪ್ರಚಾರಕ್ಕೆಂದು ಅನಿಲ್ ಕಪೂರ್ ಈ ಚಿತ್ರದ ಟ್ರೇಲರ್ ಹಂಚಿಕೊಂಡಿದ್ದರು. ಟ್ರೇಲರ್ ನ ಆರಂಭದಲ್ಲಿ ಅನಿಲ್ ಕಪೂರ್ ಭಾರತೀಯ ವಾಯುಸೇನೆಯ ಸಮವಸ್ತ್ರ ಧರಿಸಿದ್ದು, ಅನುರಾಗ್ ಕಶ್ಯಪ್ ಗೆ ಅವಾಚ್ಯ ಪದಗಳಲ್ಲಿ ನಿಂದಿಸುವ ಸೀನ್ ತೋರಿಸಲಾಗಿದೆ. ಇದು ಭಾರತೀಯ ವಾಯುಪಡೆಯ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಭಾರತೀಯ ಸಶಸ್ತ್ರ ಪಡೆಗಳ ವರ್ತನೆಗೆ ವಿರುದ್ಧವಾಗಿದೆ ಮಾತ್ರವಲ್ಲ ಐಎಎಫ್ ಸಮವಸ್ತ್ರವನ್ನು ಸರಿಯಾಗಿ ಧರಿಸಿಲ್ಲ. ತಕ್ಷಣ ಈ ದೃಶ್ಯಗಳನ್ನು ತೆಗೆಯಬೇಕು ಎಂದು ವಾರ್ನಿಂಗ್ ನೀಡಿತ್ತು.

ಟ್ರೇಲರ್ ವಿವಾದಕ್ಕೀಡಾಗುತ್ತಿದ್ದಂತೆಯೇ ಚಿತ್ರದ ಟ್ರೇಲರ್ ನಲ್ಲಿ ಬಳಸಲಾಗಿರುವ ಪದಬಳಕೆ ಬಗ್ಗೆ ಇದೀಗ ನಟ ಅನಿಲ್ ಕಪೂರ್ ಭಾರತೀಯ ವಾಯುಪಡೆ ಕ್ಷಮೆಯಾಚಿಸಿದ್ದಾರೆ. ನನ್ನ ಹೊಸ ಚಿತ್ರ ಎಕೆ ವರ್ಸಸ್ ಎಕೆ ಟ್ರೇಲರ್ ಹಲವರನ್ನು ಕೆರಳಸಿದೆ ಎಂದು ತಿಳಿದುಬಂದಿದೆ. ಯೋಗ್ಯವಲ್ಲದ ಭಾಷೆಯನ್ನು ಬಳಸುವ ಸಂದರ್ಭದಲ್ಲಿ ನಾನು ಐಎಎಫ್ ಸಮವಸ್ತ್ರ ಧರಿಸಿರುವುದರಿಂದ ನೋವುಂಟಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ. ಆದರೆ ಇದು ಉದ್ದೇಶಪೂರ್ವಕವಾಗಿ ನೋವುಕೊಡಬೇಕೆಂದು ಮಾಡಿದ್ದಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಹಿನ್ನಲೆ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ: ಪ್ರತಿಭಟನೆ ಕೈ ಬಿಡುವಂತೆ ಸಿಎಂ ಮನವಿ

0

ಬೆಂಗಳೂರು: ಕೋವಿಡ್ ಸಂಕಷ್ಟದಿಂದ ರಾಜ್ಯದ ಆರ್ಥಿಕ ‌ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಗೋಹತ್ಯೆ ನಿಷೇಧ ಕಾಯಿದೆ ಅಂಗೀಕಾರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸ ಕಾವೇರಿಯಲ್ಲಿ ಗೋವಿಗೆ ಪೂಜೆ ಮಾಡಲಾಯಿತು.

ಬಳಿಕ ಸಾರಿಗೆ ನೌಕರರ ಪ್ರತಿಭಟನೆ ವಿಚಾರ ಬಗ್ಗೆ ಮಾತನಾಡಿದ ಅವರು, ಸಾರಿಗೆ ನೌಕರರು ಪ್ರತಿಭಟನೆ ವಾಪಾಸ್ ಪಡೆದು ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡುತ್ತೇನೆ. ಕೋವಿಡ್ ಸಂಕಷ್ಟದಿಂದ ರಾಜ್ಯದ ಆರ್ಥಿಕ ‌ಪರಿಸ್ಥಿತಿ ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ ಎಂದು ತಿಳಿಸಿದರು.
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೌಕರರು ಕರ್ತವ್ಯಕ್ಕೆ ಮರಳಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಅವರನ್ನು ಕರೆದು ಮಾತಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಂಬಂಧಿಸಿದ ಸಚಿವರು ಅವರ ಜೊತೆ ಚರ್ಚೆ ಮಾಡಿದ್ದಾರೆ ಎಂದರು.

ಮೇಲ್ಮನೆಯಲ್ಲಿ ವಿಧೇಯಕ ಮಂಡನೆಯಾಗದ ವಿಚಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಂಗಳವಾರ ಒಂದು ದಿನದ ಅಧಿವೇಶನ ಕರೆಯಲು ನಿರ್ಧಾರ ಮಾಡಲಾಗಿದೆ.‌ ಈ ಬಗ್ಗೆ ರಾಜ್ಯಪಾಲರ ಜೊತೆಯೂ ಚರ್ಚೆ ಮಾಡಿದ್ದೇವೆ. ನಿನ್ನೆ ಅಧಿವೇಶನ ಬೇಗ ಮುಕ್ತಾಯ ಗೊಳಿಸಿದ್ದಕ್ಕೆ ಸಭಾಪತಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ಸಿಎಂ ಬಿಎಸ್ವೈ ‌, ಮಂಗಳವಾರ ಮತ್ತೊಮ್ಮೆ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಪತ್ರ ಕಳುಹಿಸಿಲಾಗಿದೆ. ಯಾವುದೇ ಕಾರಣಕ್ಕೂ ಅಧಿವೇಶನ ಮುಂದೂಡೋ ಅಧಿಕಾರ ಸಭಾಪತಿ ಗಿಲ್ಲ.‌ ಹಿಂದೆ ಬಿಎಸಿ ಸಭೆಯಲ್ಲಿ ಮಂಗಳವಾರದ ವರೆಗೂ ಸದನ ನಡೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಪತಿ ಗಳೇ ಇದ್ರು. ಆದರೂ ಕೂಡ ದಿಢೀರನೆ ಮುಂದೆ ಹಾಕಿದ್ದಾರೆ. ಮಂಗಳವಾರ ಅಧಿವೇಶನ ನಡೆಸಲು ನಿರ್ಧಾರ ಮಾಡಿದ್ದೇವೆ. ರಾಜ್ಯಪಾಲರಿಗೂ ಈ ಬಗ್ಗೆ ಪತ್ರ ಕಳುಹಿಸಿದ್ದೇವೆ.‌ ಕಾಯಿದೆ ತರಲು ಸಭಾಪತಿ ಸಹಕಾರ ಕೊಡ್ತಾ ಇರಲಿಲ್ಲ. ಅದಕ್ಕಾಗಿ ಸುಗ್ರೀವಾಜ್ಣೆ ಮೂಲಕ ಕಾಯಿದೆ ಜಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಸಾರಿಗೆ ನೌಕರರ ಮುಷ್ಕರ ಕುರಿತ ಬೆಂಗಳೂರಿನಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷಣ್ ಸವದಿ, ಕೋವಿಡ್ ನಿಂದ ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಆದರೆ ಇಂತಹ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡೋದು ಬೇಡ. ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕೂತು ಚರ್ಚೆ ಮಾಡೋಣ.‌ಒಂದು ನಿಗಮವನ್ನು ಸಾರಿಗೆ ನಿಗಮ ಅಂತಾ ಘೋಷಣೆ ಮಾಡಿದ್ರೆ ಇಡೀ ನಿಗಮ ಘೋಷಣೆ ಮಾಡುವ ಒತ್ತಾಯ ಬರುತ್ತದೆ.‌ಇದು ಸರ್ಕಾರಕ್ಕೆ ಒಂದು ದೊಡ್ಡ ಸವಾಲು ಇದೆ.‌ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡೋಕೆ ಆಗಲ್ಲ.‌ಇದರ ಬಗ್ಗೆ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ಸಾರಿಗೆ‌ ಸಚಿವ ಲಕ್ಷಣ್ ಸವದಿ ಹೇಳಿದರು.

ಬಿಬಿಎಂಪಿ ಕಾಯ್ದೆ-೨೦೨೦ ಕ್ಕೆ ಉಭಯ ಸದನಗಳ ಅಂಗೀಕಾರ- ಹೊಸ ಕಾಯ್ದೆಯಲ್ಲಿ ಏನೇನಿದೆ?

0

ಬೆಂಗಳೂರು: ಇಂದು ಬಿಬಿಎಂಪಿಯ ನೂತನ ಕಾಯ್ದೆ-೨೦೨೦ ಕ್ಕೆ ಅಂಗೀಕಾರ ದೊರೆತಿದೆ. ಬೆಂಗಳೂರು ಈಗಿರುವ ವ್ಯಾಪ್ತಿಯ ಗಡಿಯಿಂದ ಹೊರಗೆ ಒಂದು ಕಿ.ಮೀ ವರೆಗೆ ವಿಸ್ತಾರವಾಗಲಿದೆ. ಹೊಸ ಗ್ರಾಮಪಂಚಾಯಿತಿ, ಪುರಸಭೆಗಳು ಸೇರ್ಪಡೆಗೊಳ್ಳಲಿವೆ. ವಾರ್ಡ್ ಪುನರ್ ವಿಂಗಡನೆ ಮಾಡಿ 243 ಕ್ಕೆ ವಾರ್ಡ್ ಗಳ ಸಂಖ್ಯೆ ಏರಿಕೆಯಾಗಲಿದ್ದು, ಹೊಸ ಪ್ರದೇಶಗಳೂ ಸೇರ್ಪಡೆಯಾಗಲಿವೆ.
ರಾಜ್ಯದ ಇತರ ನಗರಗಳಿಗೆ ಅನ್ವಯವಾಗುವ ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾಯ್ದೆ) ಕಾಯ್ದೆ ಮಹಾನಗರ ಬೆಂಗಳೂರಿಗೆ ಸೂಕ್ತವಿಲ್ಲ. ಅಂತರಾಷ್ಟ್ರೀಯ ಖ್ಯಾತಿಯ ನಗರಕ್ಕೆ ಹೊಸ ಕಾಯ್ದೆಯೇ ಬೇಕು ಎಂದು ನಿರ್ಧರಿಸಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಪ್ರಮುಖವಾಗಿ ಈಗಿರುವ ಬಿಬಿಎಂಪಿ ಮೇಯರ್ -ಉಪಮೇಯರ್ ಅವಧಿ ಒಂದು ವರ್ಷದಿಂದ ಎರಡುವರೇ ವರ್ಷಕ್ಕೆ ಏರಿಕೆಯಾಗಲಿದೆ.
– ತೆರಿಗೆ, ಆಡಳಿತ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಘನತ್ಯಾಜ್ಯ, ಲೆಕ್ಕಪತ್ರ, ವಾರ್ಡ್ ಅಭಿವೃದ್ಧಿ ಸೇರಿದಂತೆ ಹನ್ನೆರಡು ಇದ್ದ ವಿವಿಧ ಸ್ಥಾಯಿ ಸಮಿತಿಗಳನ್ನು ಎಂಟಕ್ಕೆ ಮಿತಿಗೊಳಿಸಲಾಗಿದೆ.
– ವಲಯ ಸಮಿತಿ ಹಾಗೂ ವಿಧಾನಸಭಾ ಸಮಾಲೋಚನಾ ಸಮಿತಿ ರಚಿಸಲು ಕಾಯ್ದೆಯಲ್ಲಿ ತಿಳಿಸಲಾಗಿದೆ. ವಿಧಾನಸಭಾ ಸಮಾಲೋಚನ ಸಮಿತಿಗೆ ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಲಿದ್ದು, ವಲಯ ಸಮಿತಿಗಳಿಗೆ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಬಹುದಾಗಿದೆ. ಇದರಿಂದ ಶಾಸಕರ ಅಧಿಕಾರ ಹೆಚ್ಚಲಿದ್ದು ಕಾರ್ಪೊರೇಟರ್ ಗಳ ಪ್ರಾಬಲ್ಯ ಕಡಿಮೆಯಾಗಲಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಮುಖ್ಯ ಆಯುಕ್ತರ ನೇಮಕ
ಈಗಿರುವ ಆಯುಕ್ತರ ಹುದ್ದೆಯ ಜಾಗದಲ್ಲಿ, ಮುಖ್ಯ ಆಯುಕ್ತರನ್ನು ನೇಮಕ ಮಾಡಬೇಕು. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲದವರನ್ನು ಸರ್ಕಾರ ನೇಮಕ ಮಾಡಬೇಕು.ಜೊತೆಗೆ ಅಧಿಕಾರ ಎರಡು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ನಿಯೋಜನೆ ಮಾಡಬೇಕು‌. ಮುಖ್ಯ ಆಯುಕ್ತರ ಆಡಳಿತ ತೃಪ್ತಿಕರವಾದರೆ ಅಧಿಕಾರ ಅವಧಿ ವಿಸ್ತರಿಸುವ ಅಧಿಕಾರ ಸರ್ಕಾರಕ್ಕೆ ಇರಲಿದೆ. ಇದಕ್ಕೆ ಮೊದಲೇ ವರ್ಗ ಮಾಡಬೇಕಾದರೆ, ಬಿಬಿಎಂಪಿ ,ಮೇಯರ್ ಅವರಿಗೆ ಕಾರಣ ತಿಳಿಸಬೇಕಾಗಿದೆ.

ಇನ್ನು ನಗರದಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವ ಉದ್ದೇಶದಿಂದ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡುವ ಪ್ರಸ್ತಾವನೆ ಸಹ ಇದೆ.

ಹೊಸ ತೆರಿಗೆ ಪ್ರಸ್ತಾಪ
ಹಾಲಿ ಇರುವ ತೆರಿಗೆಗಳ ಜೊತೆಗೆ ಬೆಂಗಳೂರಿನಲ್ಲಿ ಮನೋರಂಜನಾ ತೆರಿಗೆ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೀಗೆ ಮಾಡುವುದರಿಂದ ಸಿನಿಮಾ, ಕ್ರಿಕೆಟ್ ಪಂದ್ಯಾವಳಿ ಮುಂತಾದ ಮನೋರಂಜನ ಚಟುವಟಿಕೆಗಳಿಗೆ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ.

ಹೊಸ ಪ್ರದೇಶಗಳ ಸೇರ್ಪಡೆ ವಿಳಂಬ
ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖವಾದರೆ ಸಾಲದು, ಇದಕ್ಕೆ ಸೇರ್ಪಡೆಗೊಳ್ಳಲಿರುವ ಪ್ರದೇಶಗಳನ್ನು ಖಚಿತವಾಗಿ ಉಲ್ಲೇಖಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಪತ್ರದಲ್ಲಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಜನರ ಪ್ರತಿಕ್ರಿಯೆ ಆಧರಿಸಿ ಹೊಸ ಗ್ರಾಮಗಳ ಸೇರ್ಪಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಹೊಸ ಪ್ರದೇಶಗಳ ಸೇರ್ಪಡೆಯಲ್ಲಿ ವಿಳಂಬವಾಗಲಿದೆ.

ಒಟ್ಟಿನಲ್ಲಿ ಬಿಬಿಎಂಪಿ ಕಾಯ್ದೆ-೨೦೨೦ ರಲ್ಲಿ ಹಲವು ಹೊಸ ನಿಯಮಗಳ ಜೊತೆಗೆ, ಬೆಂಗಳೂರಿನ ವ್ಯಾಪ್ತಿ, ಬಿಬಿಎಂಪಿ ಮೇಯರ್ ಅಧಿಕಾರಾವಧಿ, ಶಾಸಕರ ಜವಾಬ್ದಾರಿ , ಅಧಿಕಾರ ವಿಸ್ತರಣೆಗಳ ಅಂಶ ಸೇರಿಕೊಂಡಿವೆ.

ಗಂಟಲು ನೋವಿಗೆ ಸುಲಭವಾದ ಮನೆ ಮದ್ದು

0

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವು ಉತ್ತಮವಾಗಿದ್ದರೆ ಉತ್ತಮವಾದ ಜೀವನವನ್ನು ಮಾಡಬಹುದು. ಹೀಗಾಗಿ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಉತ್ತಮ. ಚಿಕ್ಕ ಪುಟ್ಟ ಸಮಸ್ಯೆಗಳು ಎದುರಾದಾಗ ವೈದ್ಯರಲ್ಲಿಗೆ ಭೇಟಿ ನೀಡುವ ಮೊದಲು ಮನೆಯಲ್ಲೇ ಬೇಕಾದ ಔಷಧಿಯನ್ನು ತಯಾರಿಸಿ ಗುಣ ಮುಖರಾಗುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಕೊರೋನಾದಂತಹ ಲಕ್ಷಣಗಳು ಎಲ್ಲರನ್ನು ಆತಂಕಕ್ಕೀಡು ಮಾಡುತ್ತಿದೆ. ಕೊರೋನಾದ ಲಕ್ಷಣಗಳಲ್ಲಿ ಒಂದಾದ ಗಂಟಲು ನೋವು ಕಾಣಿಸಿಕೊಂಡರೆ, ವೈದ್ಯರನ್ನು ಭೇಟಿ ತೊಂದರೆಗೆ ಸಿಲುಕುವ ಬದಲು, ಮನೆಯಲ್ಲೇ ಸುಭಲವಾಗಿ ಇಂತಹ ಸಮಸ್ಯೆಯನ್ನು ನಿವಾರಿಸಿಕೊಂಡರೆ ಉತ್ತಮ.
• ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಬಿಸಿ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಉಪ್ಪು ಮತ್ತು ಚಿಟಿಕೆಯಷ್ಟು ಅರಶಿಣ ಹಾಕಿ ಬಾಯಿ ಮುಕ್ಕಳಿಸುವುದನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

• ಎರಡು ಮೂರು ಸಾಂಬ್ರಾಣಿ ಎಲೆಗಳನ್ನು ಎರಡು ಚಿಟಿಕೆ ಉಪ್ಪಿನೊಂದಿಗೆ ಜಗಿದು ತಿಂದರೆ ಗಂಟಲು ನೋವು ಕಡಿಮೆಯಾಗುತ್ತದೆ.
• ಏಲಕ್ಕಿ ಮತ್ತು ಚಕ್ಕೆಯನ್ನು ಅರೆದು, ತೆಗೆದ ರಸದಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು, ಜ್ವರ ಮತ್ತ ಧ್ವನಿ ಬದಲಾವಣೆಯನ್ನು ತಡೆಯಬಹುದು.
• ಉಷ್ಣದಲ್ಲಿ ಗಂಟಲು ನೋವಿನಿಂದ ಸ್ವರ ಹೋಗಿದ್ದರೆ, ಒಂದು ತುಂಡು ಬೆಲ್ಲವನ್ನು ತುಪ್ಪದೊಂದಿದೆ ಮುಳುಗಿಸಿ ತಿಂದರೆ ಸ್ವರ ಬರುವ ಸಾಧ್ಯತೆ ಇರುತ್ತದೆ.
• ಜೀರಿಗೆ ಹುಡಿ ಮಾಡಿ ಕಲ್ಲು ಸಕ್ಕರೆ ಬೆರೆಸಿ ಸ್ವಲ್ಪ ಸ್ವಲ್ಪ ಆಗಾಗ ಬಾಯಿಗೆ ಹಾಕಬೇಕು. ಹೀಗೆ ಮಾಡಿದ್ದಲ್ಲಿ ಗಂಟಲು ನೋವು ಕಡಿಮೆಯಾಗುತ್ತದೆ.
• ಒಳ್ಳೆ ಮೆಣಸು ಪುಡಿ ಮಾಡಿ ಜೇನುತುಪ್ಪ ಮತ್ತು ದನದ ತುಪ್ಪ ಬೆರೆಸಿ ಸ್ವಲ್ಪ ಸ್ವಲ್ಪ ಸೇವಿಸುತ್ತಿರಬೇಕು ಹೀಗೆ ಮಾಡಿದರೆ ಎರಡು ಮೂರು ದಿನಗಳಲ್ಲಿ ಗಂಟಲು ನೋವು ಕಡಿಮೆಯಾಗಿ ತಥಾಸ್ಥಿತಿಗೆ ಬರುತ್ತದೆ.
• ಆಡುಸೋಗೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ನಂತರ ಅದಕ್ಕೆ ವೀಳ್ಯದೆಲೆ ಸೊಪ್ಪು, ಸಾಂಬ್ರಾಣಿ ಸೊಪ್ಪು, ಹಸಿ ಶುಂಠಿ, ಈರುಳ್ಳಿ, ಒಳ್ಳೆ ಮೆಣಸು ಎಲ್ಲಾ ಸಮಪ್ರಮಾಣದಲ್ಲಿ ಹಾಕಿ ಜಜ್ಜಿ ರಸ ತೆಗೆದು ಅದಕ್ಕೆ ಒಂದು ಚಮಚ ಜೇನು ಮತ್ತು ಅರ್ತ ನಿಂಬೆರಸ ಸೇರಿಸಿ ಬೆಳ್ಳಗೆ ಮತ್ತು ರಾತ್ರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲು ನೋವು ಶಮನಗೊಳ್ಳುತ್ತದೆ.


• ಗಂಟಲು ತುರಿಕೆಯ ಜೊತೆಗೆ ಸೀನು ಬರುತ್ತಿದ್ದರೆ, ಕೊತ್ತಂಬರಿ ಬೀಜವನ್ನು ಜಗಿದು ತಿನ್ನುವುದರಿಂದ ಗಂಟಲು ತುರಿಕೆ ಮತ್ತು ಸೀನು ಸ್ವಲ್ಪ ಪ್ರಮಾಣದಲ್ಲಿ ನಿಲ್ಲುತ್ತದೆ. ತದನಂತರ ಬಿಸಿ ನೀರಿಗೆ ಚಿಟಿಕೆ ಉಪ್ಪನ್ನು ಹಾಕಿ ಬಾಯಿ ಮುಕ್ಕಳಿಸಿದರೆ ಕಡಿಮೆಯಾಗುತ್ತದೆ.
ಇಂತಹ ಮನೆಮದ್ದನ್ನು ಮನೆಯಲ್ಲಿಯೇ ಮಾಡುವುದರಿಂದ ಗಂಟಲು ನೋವು ಸುಲಭವಾಗಿ ಶಮನಗೊಳ್ಳುವುದರ ಜೊತೆಗೆ ಗಂಟಲು ನೋವಿನಿಂದ ಮುಕ್ತರಾಗಬಹುದು.

ಸಾಯಿನಂದಾ ಚಿಟ್ಪಾಡಿ

ಗಾಯಗಳಾದರೆ ಚಿಂತಿಸ ಬೇಡಿ, ಗಾಯಗಳ ನಿವಾರಣೆಗೆ ಇಲ್ಲಿದೆ ಸುಲಭೋಪಾಯ

0

ಕೆಲವೊಮ್ಮೆ ಗಾಯಗಳು ಆದಾಗ ಅದನ್ನುಗುಣಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಹಾಗಿದ್ದಾಗ ಈ ರೀತಿಯಾಗಿ ಮಾಡಿದ್ದಲ್ಲಿ ಗಾಯಗಳಿಂದಾಗುವ ರಕ್ರಸ್ರಾವವನ್ನು ತಡೆದು ಗುಣಮುಖವಾಗುವಂತೆ ಮಾಡಬಹುದು.
• ದಾಸವಾಳ ಹೂವನ್ನು ಅರೆದು ಮುಲಾಮಿನಂತೆ ಮಾಡಿಕೊಂಡು ಗಾಯಗಳಿಗೆ ಲೇಪಿಸಿದರೆ ರಕ್ತಸ್ರಾವ ಕೂಡಲೇ ನಿಲ್ಲುತ್ತದೆ.
• ಗಾಜಿನ ಚೂರು ಅಥವಾ ಮುಳ್ಳು ತಾಗಿದರೆ ತಾಗಿದ ಜಾಗವನ್ನು ಸೂಜಿ ಅಥವಾ ಮುಳ್ಳಲ್ಲಿ ಶುಚಿಗೊಳಿಸಿ, ಕೆಸುವಿನ ಗೆಡ್ಡೆಯ ನೀರನ್ನು ಬಿಡುವುದು. ಮಾರನೆಯ ದಿನ ಬೆರಳಿನಲ್ಲಿ ಗಾಯದ ಬದಿಯನ್ನು ಹಿಂಡುತ್ತಾ ಇರಬೇಕು.
• ಬಿದ್ದ ಗಾಯಕ್ಕೆ ಈರುಳ್ಳಿ ಕಾಯಿಸಿದ ಎಣ್ಣೆ ಹಚ್ಚಿದರೆ ಬೇಗನೆ ಗುಣಮುಖವಾಗುತ್ತದೆ. ಗಾಯವನ್ನು ಬೆಳ್ಳುಳ್ಳಿ ಕಷಾಯದಲ್ಲಿ ತೊಳೆದೆರೆ ಬೇಗನೆ ಗುಣಮುಖವಾಗುತ್ತದೆ.


• ಮುಳ್ಳು ಚುಚ್ಚಿದ ಜಾಗಕ್ಕೆ ಸೀಮೆಎಣ್ಣೆ ಲೇಪಿಸುವುದರಿಂದ ಮುಳ್ಳು ಚರ್ಮದ ಒಳಗೆ ಇದ್ದರೆ ಹೊರಗೆ ಬರುತ್ತದೆ.
• ಕತ್ತಿ ಅಥವಾ ಬೇರೆ ಏನಾದರೂ ತಾಗಿ ರಕ್ತ ಬಂದರೆ ನಾಚಿಕೆ ಮುಳ್ಳಿನ ಸೊಪ್ಪು ತಂದು ಚೆನ್ನಾಗಿ ಜಜ್ಜಿ ಆ ಭಾಗಕ್ಕೆ ಇಟ್ಟು ಬಟ್ಟೆ ಕಟ್ಟಿ ಬಿಡಬೇಕು. ಐದು-ಆರು ಗಂಟೆಯ ನಂತರ ಬಿಚ್ಚಬೇಕು. ರಕ್ತ ಬರುವುದು ನಿಲ್ಲದಿದ್ದರೆ ಪುನಃ ಬೇರೆ ಸೊಪ್ಪು ಜಜ್ಜಿ ಇಟ್ಟು ಕಟ್ಟಬೇಕು. ರಕ್ತ ಬರುವುದು ಕಡಿಮೆ ಆದ ಮೇಲೆ ನಾಚಿಕೆ ಎಲೆಯನ್ನು ಜಜ್ಜಿ ತೆಂಗಿನೆಣ್ಣೆಗೆ ಹಾಕಿ ಬಿಸಿಮಾಡಿ ಹಚ್ಚಬೇಕು.
• ಗರಿಕೆ ಹುಲ್ಲನ್ನು ಅರೆದು ಗಾಯದ ಮೇಲೆ ಕಟ್ಟಿದರೆ ಗಾಯ ಬೇಗನೆ ವಾಸಿಯಾಗುವುದು.
• ಕತ್ತಿ ತಾಗಿದರೆ ಬಾಗಿಲು ಕಿಟಕಿ ಸಂದುಗಳಲ್ಲೋ, ಮನೆಗೋಡೆ ಮೂಲೆಯಲ್ಲೋ ಕಟ್ಟಿದ ಜೇಡನ ಬಲೆಯನ್ನು ನಿಧಾನವಾಗಿ ಒಂದು ಇಂಚಿನಷ್ಟು ಬೆರಳಲ್ಲಿ ಎಳೆದು ಎಲ್ಲಿ ಗಾಯವಾಗಿಯೆಯೋ ಅದರ ಮೇಲೆ ಸುತ್ತುತ್ತಾ ಬನ್ನಿ. ನೆನಪಿರಲಿ ದೊಡ್ಡ ಗಾಯಗಳಿಗೆ ಈ ಚಿಕಿತ್ಸೆಯಾಗದು. ಗಾಯ ಮಾಸುವವರೆಗೂ ಈ ಬಲೆಯನ್ನು ತೆಗೆಯಬೇಡಿ ಮೂರನೇ ದಿವಸದಲ್ಲೇ ಗಾಯ ಮಾಸುವುದು. ಅನಂತರ ಎಣ್ಣೆ ಅಥವಾ ಮುಲಾಮು ಬೇಕಾದರೆ ಹಚ್ಚಬಹುದು.
• ಕೈಕಾಲಿಗೆ ಗಾಯಗಳಾದರೆ ತೆಂಗಿನ ಕಾಯಿಯ ನೀರನ್ನು ಒಲೆ ಅಥವಾ ಗ್ಯಾಸಿನಲ್ಲಿ ಹದವಾದ ಬೆಂಕಿಯಲ್ಲಿ ಕುದಿಸುತ್ತಾ ಬರಬೇಕು. ಕುದಿದು ಕುದಿದು ದಪ್ಪವಾಗಿ ಸೌಟಿನಲ್ಲಿ ನೂಲಿನಂತೆ ಬರಬೇಕು. ಅನಂತರ ಆರಿಸಿ ಬಾಟ್ಲಿಯಲ್ಲಿ ಹಾಕಿ ಮುಚ್ಚಳ ಹಾಕಿ ಇಟ್ಟರೆ ಗಾಯವಾದ ತಕ್ಷಣ ಹಚ್ಚಬಹುದು. ಹಚ್ಚಿದಾಗ ಸ್ವಲ್ಪ ಉರಿಯುತ್ತದೆ. ನಂತರ ಗಾಯವೂ ಗುಣಮುಖವಾಗುತ್ತದೆ.


• ಮೆಣಸಿನಕಾಳು, ಉತ್ತರಣೆ ಸೊಪ್ಪು, ಅರಸಿನ ಮತ್ತು ಸುಣ್ಣ ಇವುಗಳನ್ನು ಸೇರಿಸಿ ಚೆನ್ನಾಗಿ ಅರೆದು ಕಾಲಿಗೆ ಮುಳ್ಳು ತಾಗಿ ಊದಿಕೊಂಡಿರುವಲ್ಲಿಗೆ ಈ ಮಿಶ್ರಣವನ್ನು ಹಚ್ಚಿ ಬಟ್ಟೆಯಿಂದ ಕಟ್ಟುವುದರಿಂದ ನೋವು ಗುಣವಾಗಿ ಊದಿಕೊಂಡಿರುವುದು ಸರಿಯಾಗುವುದು.
ಸಾಯಿನಂದಾ ಚಿಟ್ಪಾಡಿ

“ಕಾಂಗ್ರೆಸ್ ಪಕ್ಷದ ಶಾಲೇ ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಆಗಿ ಮಾಡಿದ್ದು”

0

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಲೇ ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿಯನ್ನಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರೈತರು ಕರೆಕೊಟ್ಟ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ನಾನು ಹಸಿರು ಶಾಲನ್ನು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಇಡೀ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಧ್ವನಿ ಎತ್ತಿತ್ತು. ಹೆಚ್.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಲಿಗೆ ವ್ಯಾಲ್ಯೂ ಇಲ್ಲ. ಹೀಗಾಗಿ ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾಂಗ್ರೆಸ್ ಪಕ್ಷದ ಶಾಲೇ ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿಯನ್ನಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.‌ ಪಕ್ಷದ ಅಧ್ಯಕ್ಷನಾಗಿ, ಕಾರ್ಯಕರ್ತನಾಗಿ ನಮ್ಮ ಪಕ್ಷದ ತ್ರಿವರ್ಣ ಶಾಲಿನ ಬಗ್ಗೆ ಯಾರೇ ಹೀನಾಯವಾಗಿ ಮಾತನಾಡಿದಾಗ ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದರ ಗೌರವಕ್ಕೆ ಧಕ್ಕೆ ಆಗಲು ಬಿಡುವುದಿಲ್ಲ ಎಂದರು.

“ಆ ರಕ್ತ ಈ ದೇಹದಲ್ಲಿ ಇಲ್ಲ: ಸಾಬೀತು ಮಾಡಿ ರಾಜಕೀಯ ನಿವೃತ್ತಿ ಪಡೆಯುತ್ತೀನಿ”

ಈ ಸರ್ಕಾರದ ಮುಖ್ಯಮಂತ್ರಿ, ಸಚಿವರನ್ನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದರೆ, ಅದನ್ನು ಅವರು ಸಾಬೀತುಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗೆ ಚಾಲೆಂಜ್ ಹಾಕಿದ್ದಾರೆ.
ರಾತ್ರಿ ವೇಳೆ ಹೋಗಿ ಡಿಕೆ ಶಿವಕುಮಾರ್ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಒಂದು ದಿನವಾದರೂ ನಾನು ಯಡಿಯೂರಪ್ಪನವರನ್ನಾಗಲಿ, ಈ ಸರ್ಕಾರದ ಯಾವುದಾದರೂ ಸಚಿವರನ್ನಾಗಲಿ ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದರೆ, ಅದನ್ನು ಸಾಬೀತುಪಡಿಸಲಿ. ಅವರು ಸಾಬೀತುಪಡಿಸಿದರೆ ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದರು.

10 ವರ್ಷದ ಹಿಂದೆ ಯಾವುದೋ ಮದುವೆಗೆ ಹೋದಾಗ ನಾವು ಖಾಸಗಿ ವಿಮಾನದಲ್ಲಿ ಇಬ್ಬರೂ ಜತೆಯಾಗಿ ವಾಪಸ್ ಬಂದೆವು. ಮರುದಿನ ವಿಧಾನಸೌಧದಲ್ಲಿ ದೊಡ್ಡ ಗಲಾಟೆ ನಡೆಯಿತು. ಆಗ ಯಡಿಯೂರಪ್ಪನವರು, ಶಿವಕುಮಾರ್ ಅವರೇ ಈ ಬಗ್ಗೆ ನನಗೆ ಹೇಳಲೇ ಇಲ್ಲ ಎಂದಿದ್ದರು. ಅನೇಕ ಸಂದರ್ಭದಲ್ಲಿ ನಾವು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಭೇಟಿ ಮಾಡಿರುತ್ತೇವೆ. ಆದರೆ ಎಂದಿಗೂ ನೀಚ ರಾಜಕಾರಣ ಮಾಡಿಲ್ಲ. ಆ ರಕ್ತ ಈ ಡಿ.ಕೆ. ಶಿವಕುಮಾರ್ ದೇಹದಲ್ಲಿ ಇಲ್ಲ. ಕುಮಾರಸ್ವಾಮಿ ಅವರೇ, ಕಳೆದ 30 ವರ್ಷಗಳಿಂದ ನಾನು ಯಾವ ರೀತಿ ಹೋರಾಟ ಮಾಡಿಕೊಂಡು ಬಂದಿದ್ದೀನಿ ಎಂದು ನೋಡಿದ್ದೀರಿ. ಯಾಕೋ ನಿಮಗೆ ಟೆನ್ಷನ್ ಇರಬಹುದು, ನಿಮಗೆ ನಿಮ್ಮದೇ ಆದ ರಾಜಕೀಯ ಸಮಸ್ಯೆಗಳು ಇರಬಹುದು. ನನಗೆ ಆ ಸಮಸ್ಯೆ ಇಲ್ಲ. ನಿಮ್ಮ ಕೆಳಗೆ ನಾನು ಕೆಲಸ ಮಾಡಿದ್ದೆ. ನಿಮಗೆ ನಾನು ಗೌರವ ನೀಡಿದ್ದೆ. ಇವತ್ತೂ ನೀಡುತ್ತೇನೆ, ನಾಳೆಯೂ ನೀಡುತ್ತೇನೆ. ನೀವು ನಿಮ್ಮ ಪಕ್ಷದ ಸಂಘಟನೆ ಮಾಡಿ, ಆದರೆ ನಮ್ಮ ಪಕ್ಷದ ಹಾಗೂ ವೈಯಕ್ತಿಕ ಸ್ವಾಭಿಮಾನ ಮಾರಿಕೊಳ್ಳುವುದಕ್ಕೆ ಸಿದ್ಧನಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ವಿರುದ್ಧ ರೈತರ ಆಕ್ರೋಶ: ರೈತರ ಪರ ಕೆಲಸ ಮಾಡ್ದಾ ನನ್ನನ್ನ ಯಾರೂ ಬೆಂಬಲಿಸಲಿಲ್ಲ ಎಂದ ಹೆಚ್ ಡಿಕೆ..!

0

ಬೆಂಗಳೂರು: ವಿವಾದಾತ್ಮಕ ಭೂ ಸುಧಾರಣಾ ಕಾಯ್ದೆ ಪರವಾಗಿ ಸದನದಲ್ಲಿ ಧ್ವನಿ ಎತ್ತಿದ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಧಾನ ಭುಗಿಲೇಳುತ್ತಿದ್ದಂತೆ ರೈತರ ಪರವಾಗಿ ಕೆಲಸ ಮಾಡ್ದಾಗ ಯಾರೂ ನನ್ನನ್ನ ಬೆಂಬಲಿಸಲಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ..!

ಈ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ. ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್‌ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್‌ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್‌ ಮಾಡಿದೆ.ಬಿಜೆಪಿ ಪ್ರಸ್ತಾಪಿಸಿದ ಭೂ ಸುಧಾರಣಾ ತಿದ್ದುಪಡಿ ಮಸೂದೆಯಲ್ಲಿ ಕೆಲ ಅಂಶಗಳನ್ನು ಜೆಡಿಎಸ್‌ ಆರಂಭದಲ್ಲಿ ವಿರೋಧಿಸಿತ್ತು. ಅದರಲ್ಲಿ ಏನೇನು ಬದಲಾವಣೆಗಳು ಆಗಬೇಕು ಎಂಬುದನ್ನು ಹೇಳಿತ್ತು. ಕಾಂಗ್ರೆಸ್‌ ಕೂಡ ಮಸೂದೆ ವಿರೋಧಿಸಿತ್ತಾದರೂ, ಏನು ಬದಲಾವಣೆ ಆಗಬೇಕು ಎಂಬುದನ್ನು ಹೇಳಿರಲಿಲ್ಲ. ಅದು ವಿರೋಧಕ್ಕೆ ಮಾತ್ರ ಸೀಮಿತವಾಗಿತ್ತು. ಜೆಡಿಎಸ್‌ ಸೂಚಿಸಿದಂತೆ ಕಾಯ್ದೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಮೊದಲು ಪ್ರಸ್ತಾಪಿಸಿದ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 248 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ, ಈಗ ಅದನ್ನು ತೆಗೆದು ಹಾಕಲಾಗಿದೆ. ಕಲಂ 80ರ ಅಡಿಯ ನೀರಾವರಿ ಜಮೀನನ್ನು ಕೃಷಿ ಉದ್ದೇಶಕ್ಕೆ ಮಾತ್ರವೇ ಬಳಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ ಎಂದು ವಿವರಿಸಿದರು.

ಉಳುವವನೇ ಭೂಮಿ ಒಡೆಯ ಎಂಬ ತತ್ವದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸಲಾಗಿತ್ತು. ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ದೇವರಾಜ ಅರಸರ ಆಶಯವನ್ನು ಕಾಪಾಡಿಕೊಂಡಿದ್ದು ಜೆಡಿಎಸ್‌ನ ಹೆಗ್ಗಳಿಕೆಯಲ್ಲವೇ? ಎಸ್‌ಸಿ/ಎಸ್‌ಟಿ ಜನರ ಭೂಮಿ ವಿಚಾರದಲ್ಲಿ ಯಾವುದೇ ವಿನಾಯಿತಿಯೂ ನೀಡದಂತೆ ನೋಡಿಕೋಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕಾಯ್ದೆಯಲ್ಲಿನ 79(ಎ, ಬಿ) ಕಲಂಗಳ ಔಚಿತ್ಯದ ಬಗ್ಗೆ ಈ ವರೆಗೆ ಶಾಸನಸಭೆಗಳ ಒಳ, ಹೊರಗೆ ಸಾಕಷ್ಟು ಚರ್ಚೆಗಳಾಗಿವೆ. ಪ್ರೊ. ನಂಜುಂಡಸ್ವಾಮಿ ಅವರೇ, ‘ಇದು ಜನರ ಸ್ವಾತಂತ್ರ್ಯ ಹರಣ ಮಾಡುತ್ತದೆ’ ಎಂದು ಪ್ರತಿಪಾದಿಸಿದ್ದರು. ಕೃಷಿ ಮಾಡುವ ಇಚ್ಛೆ ಇದ್ದೂ, ಕೃಷಿಕರಲ್ಲದಿದ್ದರೆ ಕೃಷಿ ಭೂಮಿ ಹೊಂದಂತೆ ಮಾಡುತ್ತಿದ್ದ ಈ ನಿಯಮವನ್ನು ತೆಗೆದುಹಾಕಲಾಗಿದೆ. 79(ಎ, ಬಿ) ಕಲಂ ಅಗತ್ಯತೆ, ಸಾಧಕ-ಬಾಧಕಗಳ ಪರಾಮರ್ಶೆಗೆ ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ ಶ್ರೀನಿವಾಸ ಪ್ರಸಾದ್‌ರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದ್ದರು. ಆದರೆ, ಈ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರದ್ದು ಈಗ ದಿವ್ಯ ಮೌನ. ಈ ಕಲಂ ತೆಗೆದು ಹಾಕಿ ಕೃಷಿ ಮಾಡುವ ಮನಸ್ಸುಗಳಿಗೆ ಕೃಷಿ ಸಾಧ್ಯವಾಗಿಸುತ್ತಿರುವುದು ಜೆಡಿಎಸ್‌ ನಿಂದ ಎಂದು ಬರೆದುಕೊಂಡಿದ್ದಾರೆ.

“ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್‌”..!

79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು.
ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್‌. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್‌ ಅನ್ನು ದೂರಲಾಗುತ್ತಿದೆ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್‌ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲೇ ಶಾಲಾರಂಭ ಚಿಂತನೆ: ಸಿಎಂ ಜೊತೆ ಚರ್ಚಿಸಿ ನಿರ್ಧಾರ ಎಂದ ಸುರೇಶ್ ಕುಮಾರ್

0

ಬೆಂಗಳೂರು: ಬಹಳ ದಿನ ಮಕ್ಕಳನ್ನು ಶಾಲೆಯಿಂದ ಹೊರಗಿಡುವುದು ಸರಿಯಲ್ಲ. ಹಾಗಾಗಿ ಸುರಕ್ಷತಾ ಕ್ರಮಗಳೊಂದಿಗೆ ತರಗತಿಗಳನ್ನು ಆರಂಭಿಸಲು ಸರ್ಕಾರ ಸೂಕ್ತ ಚರ್ಚೆಯ ನಂತರ ನಿರ್ಣಯಕ್ಕೆ ಬರಲಿದೆ ಎಂದು
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.‌ ಈ ವೇಳೆ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಕುರಿತು ಆರೋಗ್ಯ ಇಲಾಖೆಯ ತಜ್ಞ ಸಮಿತಿಯೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಾಗುವುದು ಎಂದರು.

ಹಲವು ರೀತಿಯಲ್ಲಿ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲಾಗಿದೆಯಾದರೂ  ಅದು ತರಗತಿ ಪಾಠಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಬಹು ದಿನಗಳ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿಯುವುದರಿಂದ ಆಗುತ್ತಿರುವ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸುವುದು ಉಚಿತವೆಂದು ಇತ್ತೀಚಿಗೆ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ಬಹುಕಾಲ ಶಾಲೆಯಿಂದ ಹೊರಗುಳಿಯುವುದರಿಂದ ಸಮಾಜದ ಮೇಲೆ ಆಗಿರುವ ಪರಿಣಾಮಗಳು ಸರ್ಕಾರದ ಗಮನಕ್ಕೂ ಬಂದಿದೆ. ಮಕ್ಕಳ ಭವಿಷ್ಯವೂ ಇದರಲ್ಲಿ ಅಡಗಿರುವುದರಿಂದ ಬಹುಕಾಲ ಮಕ್ಕಳನ್ನು ಶಾಲೆಯಿಂದ ಹೊರಗಿಡುವುದು ಸರಿಯಲ್ಲ. ಹಾಗಾಗಿ ಮೇಲಿನ ತರಗತಿಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ತರಗತಿಗಳನ್ನು ಆರಂಭಿಸಲು ಸರ್ಕಾರ ಸೂಕ್ತ ಚರ್ಚೆಯ ನಂತರ   ನಿರ್ಣಯಕ್ಕೆ ಬರಲಿದೆ ಎಂದು ಸಚಿವರು ಹೇಳಿದರು.

ಶಾಲಾ-ಕಾಲೇಜುಗಳು ಆರಂಭವಾಗದೇ ಇರುವುದರಿಂದ ಪೋಷಕರ ಕಳವಳ, ಮುಂದಿನ ವ್ಯಾಸಂಗಕ್ಕಾಗಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ  ಭವಿಷ್ಯ ಕುರಿತ ವಿಚಾರಗಳು ಸರ್ಕಾರದ ಗಮನದಲ್ಲಿವೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರಾಜ್ಯದಲ್ಲೂ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳ ತರಗತಿಗಳನ್ನು ಆರಂಭಿಸಲಾಗಿದೆ. ಶಾಲಾ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಂಗಳೂರಿನ ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಎಕ್ಸ್‍ಪರ್ಟ್ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಶಕ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಸಿ. ನಾಯಕ್, ದಾವಣಗೆರೆ ವಿಶ್ವೇಶ್ವರಯ್ಯ ಶಿಕ್ಷಣ  ಸಂಸ್ಥೆ ಅಧ್ಯಕ್ಷ ಶ್ರೀಧರ, ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ ಸಂಚಾಲಕ ವಸಂತ ಮಾಧವ, ಹೆಬ್ರಿ ಎಸ್.ಆರ್. ಪಿಯು  ಕಾಲೇಜು ಸಂಸ್ಥೆಯ ಅಧ್ಯಕ್ಷ ನಾಗರಾಜಶೆಟ್ಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ 20ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿಶೇಷವಾಗಿ ಪದವಿ ಪೂರ್ವ ತರಗತಿಗಳನ್ನು ಆರಂಭಿಸಬೇಕಾದ ಅನಿವಾರ್ಯತೆಯನ್ನು ಮತ್ತು ಶಾಲೆಗಳ ಬಂದ್‍ನಿಂದಾಗಿ ಉದ್ಭವಿಸಿರುವ  ಗ್ರಾಮೀಣ ಪ್ರದೇಶದ ಪರಿಸ್ಥಿತಿ  ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಸಭೆಯ ವಿವರಿಸಿದರು.

ಈ ಕಾಯಿಲೆಗೆ ತುತ್ತಾದವರಿಗೆ ೫ ಲಕ್ಷ ರೂ.ವರೆಗೆ ಉಚಿತ ಔಷಧಿ…!

0

ಜಾಗತಿಕ ಒಗ್ಗಟ್ಟು, ಜವಾಬ್ದಾರಿಯ ಹಂಚಿಕೆಯೊಂದಿಗೆ ಏಡ್ಸ್ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂದು ಈ ಬಾರಿ ವಿಶ್ವಸಂಸ್ಥೆಯಲ್ಲಿ ಘೋಷಿಸಲಾಗಿದೆ. ಎಚ್‌ಐವಿಗೆ ಒಳಗಾದವರು ಮಾನಸಿಕ ಖಿನ್ನತೆಗೆ ಸಿಲುಕಿ ನೋವನ್ನು ಅನುಭವಿಸುತ್ತಾರೆ. ಕೋವಿಡ್-೧೯ ವೈರಸ್ ಹರಡಿದಾಗ ‘ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ’ ಎಂಬ ಸಂದೇಶವನ್ನು ನೀಡಲಾಯಿತು. ಅಂತೆಯೇ ಈ ಸಂದೇಶ ಎಲ್ಲ ರೋಗಗಳಿಗೂ, ಎಲ್ಲಾ ರೋಗಕ್ಕೂ ಅನ್ವಯವಾಗುತ್ತದೆ. ಏಡ್ಸ್ ರೋಗಿಗಳನ್ನು ಯಾರೊಬ್ಬರೂ ಅವಮಾನಕಾರಿಯಾಗಿ ನೋಡಬಾರದು. ಅಲ್ಲದೇ ಮುನ್ನೆಚ್ಚರಿಕೆ ಕ್ರಮ, ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್‍ಐವಿ ಸೋಂಕು ಹರಡುವುದನ್ನು ತಡೆಗಟ್ಟಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು
ಇಂದಿನ ಆಧುನಿಕ ಸೌಲಭ್ಯಗಳಿಂದಾಗಿ ಏಡ್ಸ್ ಪೀಡಿತರು ಉತ್ತಮ ಆರೋಗ್ಯ ಸೌಲಭ್ಯಗಳಿಂದಾಗಿ ಆರಾಮವಾಗಿದ್ದಾರೆ. ಈ ಪ್ರಕರಣಗಳಲ್ಲಿ ಆಗುತ್ತಿದ್ದ ಸಾವಿನ ಪ್ರಮಾಣವು ಕೂಡ ಸುಧಾರಿಸಿದೆ ಎಂದರು. ಅಲ್ಲದೇ ೯೯ ವರ್ಷದ ಎಚ್‌ಐವಿ ಸೋಂಕಿತರು ಇಂದಿಗೂ ಕೂಡ ಆರೋಗ್ಯವಾಗಿ ಜೀವಿಸುತ್ತಿದ್ದಾರೆ. ಸರ್ಕಾರಗಳು ಕೂಡ ಆ ಮಟ್ಟಿನ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳ ಮುಖಾಂತರ ಉಚಿತ ಆರೋಗ್ಯ ಸೌಲಭ್ಯಗಳನ್ನು ಬಡವರಿಗೆ ನೀಡಲಾಗುತ್ತಿದೆ. ಎಚ್‌ಐವಿ ಸೋಂಕಿತರಿಗೆ ಕೋವಿಡ್ ವೈರಸ್ ಬಂದರೆ ತುಂಬಾ ಕಷ್ಟ ಎಂದು ತಿಳಿಯಲಾಗಿತ್ತು. ರಾಜ್ಯದಲ್ಲಿ ೨೮೦ ಎಚ್‌ಐವಿ ಸೋಂಕಿತರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಈ ಪೈಕಿ ೨೭೫ ಮಂದಿ ಜೀವಂತವಾಗಿದ್ದು, ಅವರ ಆರೋಗ್ಯ ಸುರಕ್ಷಿತವಾಗಿದೆ ಎಂದರು.

ಇನ್ನು ಎಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುದಾನ ನೀಡಲಾಗುತ್ತಿದೆ. ಅವರಿಗೆ ವಾರ್ಷಿಕ ೫ ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಬೇಕು ಎಂದು ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ. ಎಪಿಎಲ್ ಹಾಗೂ ಬಿಪಿಎಲ್ ರೋಗಿಗಳಿಗೆ ಇದು ಅನ್ವಯವಾಗಲಿದೆ ಎಂದು ತಿಳಿಸಿದರು.

ಸಧ್ಯಕ್ಕಿಲ್ಲ ಸಂಪುಟ ವಿಸ್ತರಣೆ: ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆ

0

ಬೆಂಗಳೂರು: ಒಂದು ದಿನದಲ್ಲಿ ಸಂಪುಟ ವಿಸ್ತರಣೆ ಆಗುತ್ತೆ.. ಇನ್ನೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗುತ್ತೆ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವಾಕಾಂಕ್ಷಿಗಳನ್ನ ಸಮಾಧಾನ ಪಡಿಸುತ್ತಾ ಬರುತ್ತಿರುವಾಗಲೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದು, ಸಚಿವ ಸ್ಥಾನಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.

“ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಪ್ರಶ್ನೆಯೇ ಇಲ್ಲ”

ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ
ಕಂದಾಯ ಸಚಿವ ಆರ್.ಅಶೋಕ್, ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿಲ್ಲ. ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಪ್ರಶ್ನೆಯೇ ಇಲ್ಲ. ಯಾವಾಗ ವಿಸ್ತರಣೆ ಮಾಡಬೇಕು ಎಂಬುದರ ಬಗ್ಗೆ ಇಂದು ಅರುಣ್ ಸಿಂಗ್ ಜೊತೆ ಸಿಎಂ ಚರ್ಚೆ ನಡೆಸುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದಾರೆ. ಅದಕ್ಕೆ ನಾನು ಬಿಜೆಪಿ ಕಚೇರಿಗೆ ಬಂದಿದ್ದೇನೆ. ಸಂಪುಟದ ಬಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ಇದೆ. ಅವರು ಆಕಾಂಕ್ಷಿ ಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿ ಕೊಟ್ಟಿದ್ದಾರೆ. ಅದಕ್ಕೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಕ್ಕ ಬಳಿಕ ಸಿಎಂ ಆ ಬಗ್ಗೆ ಘೋಷಣೆ ಮಾಡ್ತಾರೆ ಎಂದು ಆರ್ ಅಶೋಕ್ ತಿಳಿಸಿದರು.

“ರಾಜ್ಯದಲ್ಲಿ ಪ್ರತಿಪಕ್ಷ ಇದ್ದರೆ ತಾನೇ ಅದನ್ನು ಎದುರಿಸಲು ನಾವು ಸಜ್ಜಾಗೋದು”

ನಾಳೆಯಿಂದ ಚಳಿಗಾಲದ ಅಧಿವೇಶನದ ತಯಾರಿ ಕುರಿತು ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ನ ನಂಬ ಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಇಬ್ಬರು ಕೂಡ ಜಗಳ ಮಾಡ್ತಿದ್ದಾರೆ.ಕಾಂಗ್ರೆಸ್ ಈಗ ಒಂಟಿಯಾಗಿದೆ. ಹೀಗಾಗಿ ಕಾಂಗ್ರೆಸ್ ನ್ನು ಎದುರಿಸಲು ನಾವು ಸಜ್ಜಾಗುವ ಅವಶ್ಯಕತೆ ಇಲ್ಲ. ಇಡೀ ದೇಶದಲ್ಲಿ ಇನ್ನೂ ಕಾಂಗ್ರೆಸ್ ಇರೋದಿಲ್ಲ. ಇನ್ನೂ ಏನು ಇದ್ರೂ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯ ಆಳ್ವಿಕೆಯೇ. ಇನ್ನೂ ೨೦ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ. ಇನ್ನೂ ಬಾಕಿ ಉಳಿದ ಕಾಂಗ್ರೆಸ್ ಗಿಡಗಳನ್ನು ಕಿತ್ತು, ಬಿಜೆಪಿ ಗಿಡಗಳನ್ನು ನೆಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಕಾಂಗ್ರೆಸ್ ನ‌ ನಂಬಿದರೆ ಗೋವಿಂದ, ಗೋವಿಂದ”

ಮುಂದುವರೆದು ಮಾತನಾಡಿದ ಆರ್ ಅಶೋಕ್,
ಬಿಜೆಪಿ ಕೊಟ್ಟ ಮಾತಿಗೆ ತಪ್ಪದ ಪಾರ್ಟಿ. ಈ ಹಿಂದೆ ಮಾತು ಕೊಟ್ಟಂತೆ ಕುಮಾರಸ್ವಾಮಿ ಯವರಿಗೆ ೨೦ ತಿಂಗಳು ಅಧಿಕಾರ ಕೊಟ್ಟಿದ್ವಿ. ಅದರಂತೆ ೨೦ ದಿನಗಳಿಗೆ ಒಂದು ದಿನವೂ ಕಡಿಮೆ ಇಲ್ಲದಂತೆ ಅವರಿಗೆ ಅಧಿಕಾರ ಕೊಟ್ಟು
ಆ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಾಂಗ್ರೆಸ್ ನವರು ಅವರಿಗೆ ೫ ವರ್ಷ ನೀವೇ ಸಿಎಂ ಎಂದು ಕೊನೆಗೆ ೧ ವರ್ಷಕ್ಕೆ ಕೆಳಗೆ ಇಳಿಸಿದ್ರು. ಕಾಂಗ್ರೆಸ್ ಪಕ್ಷ ಎಂಬುದು ಒಂದು ವಿಷ ಕಕ್ಕುವ ಪಾರ್ಟಿ. ಹೀಗಾಗಿ ಕಾಂಗ್ರೆಸ್ ನ‌ ನಂಬಿದರೆ ಗೋವಿಂದ, ಗೋವಿಂದ ಎಂದ ಆರ್ ಅಶೋಕ್ ವ್ಯಂಗ್ಯ ಮಾಡಿದರು

ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಸ್ತಾರಾ ರಜನಿಕಾಂತ್…?

0

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಮೂರು ವರ್ಷಗಳಿಂದ ಭಾರೀ ಚರ್ಚೆ ನಡೆಯುತ್ತಲೇ ಇತ್ತು. 2017ರಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶಿಸುವ ನಿಟ್ಟಿನಲ್ಲಿ ರಜನಿ ಮಕ್ಕಳ್ ಮಂಡ್ರಂ ಸಂಘಟನೆ ಮೂಲಕ ರಾಜಕೀಯ ಚಟುವಟಿಕೆ ಆರಂಭಿಸಿದ್ದರು. ಅಂದಿನಿಂದ ರಜನೀಕಾಂತ್ ಯಾವಾಗ ರಾಜಕೀಯ ರಂಗಕ್ಕೆ ಎಂಟ್ರಿ ಕೊಡ್ತಾರೆ? ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ? ಜಯಲಲಿತಾ, ಎಂಜಿಆರ್ ರೀತಿ ರಜನಿಕಾಂತ್ ಕೂಡ ತಮಿಳುನಾಡು ಮುಖ್ಯಮಂತ್ರಿಯಾಗಲಿದ್ದಾರಾ? ಹೀಗೆ ಹಲವಾರು ಪ್ರಶ್ನೆ ಕುತೂಹಲಗಳ ಜೊತೆಗೆ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಸ್ವತ: ರಜನಿಕಾಂತ್ ಅವರೇ ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ.

ಜನವರಿಯಿಂದ ತಮ್ಮ ಹೊಸ ರಾಜಕೀಯ ಪಕ್ಷದ ಕಾರ್ಯಾರಂಭ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ಮೂಲಕ ತಮಿಳುನಾಡು ಚುನಾವಣೆಗೆ ಐದು ತಿಂಗಳು ಬಾಕಿಯಿರುವಾಗ ನಟ ರಜನಿಕಾಂತ್ ತಮ್ಮ ಸಕ್ರಿಯ ರಾಜಕಾರಣದ ಎಂಟ್ರಿ ಘೋಷಿಸಿದ್ದಾರೆ. ತಮ್ಮ ಹೊಸ ಪಕ್ಷದಿಂದ ಆಧ್ಯಾತ್ಮದ ಜಾತ್ಯಾತೀತ ರಾಜಕೀಯ ನಡೆಸುವುದಾಗಿ ಹೇಳಿರುವ ರಜನಿಕಾಂತ್, ತಮಿಳುನಾಡಿಗಾಗಿ ತಾವು ಪ್ರಾಣತ್ಯಾಗಕ್ಕೂ ಸಿದ್ಧ. ಚುನಾವಣೆಯಲ್ಲಿ ತಾವು ಗೆದ್ದರೆ ಅದು ಜನರ ಗೆಲುವು, ತಾವು ಸೋತರೆ ಅದು ಜನರ ಸೋಲು ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತಾ, ಎಂಜಿ ಆರ್ ನಿಧನದಿಂದ ದೊಡ್ದ ನಾಯಕತ್ವದ ಕೊರತೆ ಎದುರಾಗಿದೆ. ಈ ನಾಯಕತ್ವದ ಕೊರತೆ ನೀಗಿಸಲು ರಜನಿಕಾಂತ್ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಅಷ್ಟು ಸುಲಭದ ಮಾತಲ್ಲ, ಈಗಾಗಲೇ ರಾಜ್ಯದಲ್ಲಿ ಡಿಎಂಕೆ ಎಐಎಡಿಎಂಕೆ ಪಕ್ಷಗಳು ಪ್ರಬಲವಾಗಿವೆ. ಬಿಜೆಪಿ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹವಣಿಸುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಹೊಸ ಪಕ್ಷ ಸ್ಥಾಪಿಸಿ ರಾಜಕಾರಣ ಹೇಗೆ ನಡೆಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಜನಿಕಾಂತ್ ಅವರ ಹೇಳಿಕೆಗಳು ತಮಿಳುನಾಡಿನ ರಾಜಕೀಯದಲ್ಲಿ ಹಿಂದೆ ಸಂಚಲನ ಮೂಡಿಸಿತ್ತು. 1995ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಎಐಐಎಡಿಎಂಕೆ ಹಿರಿಯ ಸದಸ್ಯ, ಸಿನಿಮಾ ನಿರ್ಮಾಪಕ ಆರ್.ಎಂ ವೀರಪ್ಪನ್ ಅವರನ್ನು ಸಚಿವ ಸ್ಥಾನದಿಂದ ಜಯಲಲಿತಾ ವಜಾ ಮಾಡಿದ್ದರು. ಈ ಸಂದರ್ಭದಲ್ಲಿ ನಟ ರಜನಿಕಾಂತ್, ಮುಂದಿನ ಚುನಾವಣೆಯಲ್ಲಿ ಜಯಲಲಿತಾ ಗೆಲುವು ಸಾಧಿಸಿದರೆ ತಮಿಳುನಾಡನ್ನು ಆ ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ ಎಂದು ಕರೆ ನೀಡಿದ್ದರು. ಈ ವೇಳೆಗಾಗಲೇ ಜಯಲಲಿತಾ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೂಡ ಕೇಳಿಬಂದಿದ್ದವು. ಇಂತಹ ಸಂದರ್ಭದಲ್ಲಿ ರಜನಿಕಾಂತ್ ನೀಡಿದ್ದ ಕರೆಗೆ ತಮಿಳುನಾಡು ಜನರು ಕೂಡ ಸ್ವಾಗತಿಸಿದ್ದರು. ಹಾಗಾಗಿ ರಜನಿಕಾಂತ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೂಡಿ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ. ಇನ್ನೊಂದು ವಿಚಾರವೆಂದರೆ ರಜನಿಕಾಂತ್ ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಾರೆ. ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಜನಿಕಾಂತ್ ಬಿಜೆಪಿ ಜತೆ ಮೈತ್ರಿ ಅಥವಾ ಬೆಂಬಲದ ನಿರ್ಧಾರ ಕೈಗೊಂಡರೂ ಅಚ್ಚರಿಲ್ಲ.

ಅಂದಹಾಗೆ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಶೈಲಿಯ ನಟನೆ, ಡೈಲಾಗ್ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. 1949 ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ಕರ್ನಾಟಕದ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ವಿದ್ಯಾಭಾಸಮಾಡಿದ್ದ ಶಿವಾಜಿ ರಾವ್, 1968ರಿಂದ 73 ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಓಡಾಡುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿದರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಶಿವಾಜಿಗೆ ಸಿನಿಮಾ ಹುಚ್ಚು, ಅಭಿನಯದಲ್ಲಿ ಅತಿಯಾದ ಆಸಕ್ತಿ. ಇದನ್ನು ಕಂಡ ರಾಜ್ ಬಹದ್ದೂರ್ ಎಂಬ ಗೆಳೆಯ ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡೆಯಲು ಸೂಚಿಸಿದರು. ಚೆನ್ನೈಗೆ ತೆರಳಿದ ಶಿವಾಜಿಗೆ ಎರಡು ವರ್ಷ ಬೆಂಗಾವಲಾಗಿ ನಿಂತರು. ರಜನಿಕಾಂತ್ ಅವರ ಮೊದಲ ಚಿತ್ರ “ಅಪೂರ್ವ ರಾಗಂಗಳ್”. ಚಿತ್ರರಂಗ ಪ್ರವೇಶಿಸುವ ಮೂಲಕ ಶಿವಾಜಿ ರಾವ್ ಹೆಸರು ರಜನಿಕಾಂತ್ ಆಗಿ ಬದಲಾಯಿತು. ರಜನಿಕಾಂತ್ ಆರಂಭದಲ್ಲಿ ಹಲವು ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ “ಸೂಪರ್ ಸ್ಟಾರ್” ಎಂದು ಕರೆಯಲಾಯಿತು.

ಹೊಸ ಸಂಸತ್ ಭವನಕ್ಕೆ ಮೋದಿ ಶಿಲಾನ್ಯಾಸ..! ಹೇಗಿರಲಿದೆ ಗೊತ್ತಾ ನೂತನ ಸಂಸತ್ ಭವನ..?

0

ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ದೇಶವಾಗಿರುವ ಭಾರತವು ಅತಿದೊಡ್ಡ ಶಕ್ತಿಕೇಂದ್ರವನ್ನು ಮರು ನಿರ್ಮಿಸುವ ನಿಟ್ಟಿನಲ್ಲಿ ಹೊಸ ಸಂಸತ್ ಭವನಕ್ಕೆ ಮುಂದಿನ ಗುರುವಾರ ಮಧ್ಯಾಹ್ನ ೧ ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಶಿಲಾನ್ಯಾಸವನ್ನು ನೆರವೇರಿಸಲಿದ್ದು ಭೂಮಿ ಪೂಜೆಯನ್ನು ಸಹ ಮಾಡಲಿದ್ದಾರೆ. ಈ ಕಾರ್ಯಕ್ರಮದ ಆಹ್ವಾನಕ್ಕಾಗಿ ಲೋಕಸಭೆಯ ಸ್ಪೀಕರ್ ಆದ ಓಂಪ್ರಕಾಶ್ ಬಿರ್ಲಾ ಅವರು ಪ್ರಧಾನಿ ಮೋದಿಯವರನ್ನು ಶನಿವಾರ ಭೇಟಿ ಮಾಡಿ ಆಮಂತ್ರಣ ನೀಡಿದ್ದಾರೆ. ೭೫ನೇ ಸ್ವಾತಂತ್ರೊತ್ಸವದ ನೆನಪಿನಲ್ಲಿ ನಿರ್ಮಿಸುತ್ತಿರುವ ಹೊಸ ಸಂಸತ್ ಭವನ ಹಾಲಿ ಸಂಸತ್ ಭವನದ ಸಮೀಪದಲ್ಲಿರುವ ಶ್ರಮಶಕ್ತಿ ಭವನದ ಜಾಗದಲ್ಲಿ ಸುಮಾರು ೬೪,೫೦೦ ಸಾವಿರ ಚದರ ಮೀ ಸುತ್ತಳತೆಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಈ ಕಟ್ಟಡದ ವಿಶೇಷತೆಯೆಂದರೆ ಎರಡು ಅಂತಸ್ತಿನ ಕಟ್ಟಡವು ಭೂಕಂಪನ ನಿರೋಧಕವಾಗಿರಲಿದೆ.

ಇನ್ನು ಹೊಸ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದ್ದು, ಕಾಗದ ರಹಿತ ಸಂವಹನಕ್ಕಾಗಿ ಡಿಜಿಟಲ್ ಮೂಲಸೌಕರ್ಯ ಒಳಗೊಂಡಿರಲಿದೆ. ಮೊಗಸಾಲೆ, ಕಾನ್‌ಸ್ಟಿಟ್ಯೂಷನ್ ಹಾಲ್, ಗ್ರಂಥಾಲಯ, ಸಂಸದೀಯ ಸಮಿತಿ ಕೋಣೆಗಳು, ಭೋಜನದ ಹಾಲ್, ಹೊರ ಆವರಣದಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದೆ. ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವಂತಹ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಈ ಕಟ್ಟಡವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ದೇಶದ ಪ್ರಜಾತಂತ್ರ ಪರಂಪರೆಯ ದ್ಯೋತಕವಾದ ಕಾನ್‌ಸ್ಟಿಟ್ಯೂಷನ್ ಹಾಲ್ ವಿಸ್ತಾರವಾಗಿರಲಿದ್ದು, ಸಂವಿಧಾನದ ಮೂಲಪ್ರತಿಯ ಡಿಜಿಟಲ್‌ರೂಪವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಹಾಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಭವಿಷ್ಯದ ದೃಷ್ಟಿಯಿಂದ ೮೮೮ ಸದಸ್ಯರಿಗೆ ಆಸನ ಕಲ್ಪಿಸುವಷ್ಟು ವಿಶಾಲತೆಯನ್ನು ಲೋಕಸಭೆಯ ಹಾಲ್ ಹೊಂದಿರಲಿದೆ. ರಾಜ್ಯಸಭೆ ೩೮೪ ಸದಸ್ಯರಿಗೆ ಆಸೀನರಾಗುವಷ್ಟು ದೊಡ್ಡದಾಗಿರಲಿದೆ. ಹಾಲಿ ಲೋಕಸಭೆಯಲ್ಲಿ ೫೪೩ ಸದಸ್ಯರಿದ್ದು, ರಾಜ್ಯಸಭೆ ೨೪೫ ಸದಸ್ಯ ಬಲ ಇದೆ.

ಹೊಸ ಸಂಸತ್ ಭವನವನ್ನು ಟಾಟಾ ಪ್ರೊಜೆಕ್ಟ್ ಲಿಮಿಟೆಡ್ ೮೬೧.೯೦ ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲಿದೆ. ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯಲ್ಲಿ ೩ ಕಿ.ಮೀ. ಉದ್ದದ ರಾಜಪಥ ಮತ್ತು ಅದರ ಅಕ್ಕಪಕ್ಕದಲ್ಲಿ ಅಭಿವೃದ್ಧಿಯನ್ನು ೨೦೧೯ರಲ್ಲಿ ಸರ್ಕಾರ ಘೋಷಿಸಿತು. ಗುಜರಾತ್‌ನ ಎಚ್‌ಸಿಪಿ ಡಿಸೈನ್ಸ್ ಸಂಸ್ಥೆ ಇದರ ವಿನ್ಯಾಸ ಮಾಡಿದೆ. ಇದರ ಪ್ರಕಾರ, ಪ್ರಧಾನಿ ಹೊಸ ನಿವಾಸ ಸೌಥ್ ಬ್ಲಾಕ್‌ನಲ್ಲಿ ಮತ್ತು ಉಪರಾಷ್ಟ್ರಪತಿಯ ನೂತನ ನಿವಾಸ ನಾರ್ಥ್ ಬ್ಲಾಕ್‌ನಲ್ಲಿ ಇರಲಿದೆ. ಸಚಿವಾಲಯಗಳ ನಿರ್ಮಾಣವು ಕೂಡ ಯೋಜನೆಯಲ್ಲಿ ಸೇರಿವೆ.

ಜೆಡಿಎಸ್ ನವರಿಗೆ ರಾಜಕೀಯ ವಿರೋಧಿ ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ”

0

ಬೆಂಗಳೂರು: ಜೆಡಿಎಸ್ ನವರಿಗೆ ರಾಜಕೀಯ ವಿರೋಧಿ ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಇದೇ ಕಾರಣಕ್ಕೆ ಜೆಡಿಎಸ್ ನ್ನು ಬಿಜೆಪಿಯವರ ಬಿ ಟೀಂ ಎಂದು ನಾನು ಕರೆಯೋದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.

ವಿಧಾನ ಮಂಡಲದ ಉಭಯ ಸದನಗಳ ಹಿರಿಯ ಸದಸ್ಯರ ಸಭೆ ಇಂದು ನಡೆಸಲಾಯಿತು. ಸಭೆ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಬಂದಮೇಲೆ ತನ್ನ ಗೌರವ ಹಾಳಾಯ್ತು ಎಂಬ ಕುಮಾರಸ್ವಾಮಿಯವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕುಮಾರಸ್ವಾಮಿಗೆ ಒಳ್ಳೆ ಇಮೇಜ್ ಇದ್ದದ್ದೇ ಆದರೆ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆ ಏರಿಕೆಯಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಿರಲಿಲ್ಲ. 2004ರಲ್ಲಿ ನಾನು ಜೆಡಿಎಸ್ ನಲ್ಲಿದ್ದಾಗ ಜಿಡಿಎಸ್ 59 ಸ್ಥಾನಗಳನ್ನು ಗೆದ್ದಿತ್ತು, ನನ್ನನ್ನು ಪಕ್ಷದಿಂದ ವಜಾಗೊಳಿಸಿದ ನಂತರದ ಚುನಾವಣೆಯಲ್ಲಿ 28 ಸ್ಥಾನ, 2013 ರ ಚುನಾವಣೆಯಲ್ಲಿ 40 ಸ್ಥಾನ, ಕಳೆದ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿತ್ತು. ಕುಮಾರಸ್ವಾಮಿ ಜನರ ಬಳಿ ಗೌರವ ಉಳಿಸಿಕೊಂಡಿದ್ದರೆ 59 ರಿಂದ 28 ಸ್ಥಾನಕ್ಕೆ ಬರುತ್ತಿತ್ತೇ?.

ಅವರು ಬಿಜೆಪಿ ಬಗ್ಗೆ ಸದಾಕಾಲ ಮೃದು ಧೋರಣೆ ಹೊಂದಿದ್ದಾರೆ. ನಿನ್ನೆ ಕುಮಾರಸ್ವಾಮಿ ಅವರು ತಾವು ಬಿಜೆಪಿಗೆ ಹೋಗಿದ್ದರೆ 5 ವರ್ಷ ಮುಖ್ಯಮಂತ್ರಿ ಆಗಿರುತ್ತಿದ್ದೆ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ. ಇದೇ ಕಾರಣಕ್ಕೆ ನಾನು ಜೆಡಿಎಸ್ ಅನ್ನು ಬಿಜೆಪಿಯ ‘ಬಿ ಟೀಮ್’ ಎನ್ನುವುದು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಸರ್ಕಾರ ರಚನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದು, ಅವರೊಂದಿಗೆ ಮೊದಲ ಸುತ್ತಿನ ಮಾತುಕತೆ ಮಾಡಿದ್ದು ಕಾಂಗ್ರೆಸ್ ಹೈಕಮಾಂಡ್, ನಾನಲ್ಲ. 37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರು, ಇದರಲ್ಲಿ ಟ್ರ್ಯಾಪಿಂಗ್ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.

“ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಸಿದ್ದತೆ”

ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಪ್ರಕಟಿಸುವಂತೆ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು. ಮುಂದುವರೆದು ಮಾತನಾಡಿದ ಅವರು, “ರಾಜ್ಯದ ವಿವಿಧ ಜಿಲ್ಲೆಗಳು ಈ ವರ್ಷ ಮೂರು ಬಾರಿ ಪ್ರವಾಹದಿಂದ ಹಾನಿಗೀಡಾಗಿವೆ, ಈ ವರೆಗೂ ನಷ್ಟಕ್ಕೊಳಗಾದ ಜನರಿಗೆ ಸೂಕ್ತ ಪರಿಹಾರ ನೀಡಿಲ್ಲ. ಜೊತೆಗೆ ಅನೇಕ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿಲ್ಲ, ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು.
ಗೃಹ ನಿರ್ಮಾಣ ಯೋಜನೆಗಳಿಗೆ ಅಗತ್ಯ ಹಣ ಬಿಡುಗಡೆ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ತಮ್ಮ ಪಕ್ಷದ ಅರ್ಜಿದಾರರನ್ನು ಗುರುತಿಸಿ ಹಣ ಬಿಡುಗಡೆ ಮಾಡುತ್ತಿದೆ. ಇತರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರ ಅರ್ಜಿಗಳನ್ನು ಬಾಕಿ ಇಡಲಾಗಿದೆ. ಇದು ಬಡಜನರಿಗೆ ಮಾಡುತ್ತಿರುವ ದ್ರೋಹ ಎಂದರು.

ರಾಜ್ಯ ಸರ್ಕಾರ ಮತ್ತೆ ಈ ಬಾರಿಯ ಅಧಿವೇಶನದಲ್ಲಿ ಕಾರ್ಮಿಕ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯಿದೆಗಳ ಮಂಡನೆ ಮಾಡಲಿದ್ದು, ಅವುಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಗುವುದು. ಯಾವುದೇ ಕಾರಣಕ್ಕೂ ಇಂತಹ ಜನವಿರೋಧಿ, ರೈತವಿರೋಧಿ ಕಾಯ್ದೆಗಳ ಜಾರಿಗೆ ನಾವು ಅವಕಾಶ ನೀಡುವುದಿಲ್ಲ. ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ. ನೌಕರರ ಸಂಬಳ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿ ನೀಡಲು ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.‌

ಸದ್ಯ ನೀತಿಸಂಹಿತೆ ಜಾರಿಯಲ್ಲಿದ್ದು, ನಾಳೆಯಿಂದ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈ ವೇಳೆ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ತಡೆ ಕಾಯ್ದೆಗಳನ್ನು ಜಾರಿಗೆ ತಂದರೆ ಮತದಾರರ ಮೇಲೆ ಪರಿಣಾಮ ಬೀರಲಿದ್ದು, ನೀತಿಸಂಹಿತೆಯ ಉಲ್ಲಂಘನೆಯಾಗಲಿದೆ.”
ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ನಮ್ಮದು ಜಾತ್ಯಾತೀತ ಪಕ್ಷ ಎನ್ನುವ ಜೆಡಿಎಸ್ ಕೋಮುವಾದಿಗಳ ಪರವಾಗಿ ಮತ ಚಲಾಯಿಸುತ್ತದೋ, ವಿರುದ್ಧವಾಗಿ ಮತ ಚಲಾಯಿಸುತ್ತದೋ ಎಂಬುದನ್ನು ನೋಡಲು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಈಗಲೇ ರಾಜೀನಾಮೆ ನೀಡದಂತೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಬಿ.ಎಸ್ ಯಡಿಯೂರಪ್ಪ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ: ಸಿದ್ದರಾಮಯ್ಯ

0

ಮೈಸೂರು: ಸರ್ಕಾರ ರಚನೆಯಾಗಿ ಒಂದೂ ವರೆ ವರ್ಷ ಕಳೆದರೂ ಒಂದೇ ಒಂದು ಜನಪರ ಯೋಜನೆ ಈ ವರೆಗೆ ಜಾರಿಗೆ ಬಂದಿಲ್ಲ. ಯಡಿಯೂರಪ್ಪ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದರು.

ಮೈಸೂರಿನ ತಮ್ಮ ನಿವಾಸದ ಬಳಿ ಗೋಷ್ಠಿ ಕರೆದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿಲ್ಲ, ಒಂದೇ ಒಂದು ಜನಪರ ಯೋಜನೆ ಈ ವರೆಗೆ ಜಾರಿಗೆ ಬಂದಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತ ಪರಿಸ್ಥಿತಿಯಿದೆ. ಬಿ.ಎಸ್ ಯಡಿಯೂರಪ್ಪ ಇದುವರೆಗೆ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಎನ್.ಆರ್ ಸಂತೋಷ್ ಹಾಗೂ ಸಿ.ಪಿ ಯೋಗೀಶ್ವರ್ ಲಪಟಾಯಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ನೀಡಿದವರು ಯಾರು? ಎಷ್ಟು ಹಣ ನೀಡಿದ್ದರು? ಅದು ಬ್ಲಾಕ್ ಮನಿಯೋ? ವೈಟ್ ಮನಿಯೋ? ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

“ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತ ಹರಿಸುವವರು ಬಿಜೆಪಿಯವರು”

ಮುಂದುವರೆದು ಮಾತನಾಡಿದ ಅವರು, ಇಂದು ಮೈಸೂರಿನಲ್ಲಿ ಪ್ರಗತಿಪರ ಚಿಂತಕರು, ಸಮಾಜವಾದಿ, ಜಾತ್ಯಾತೀತ ಚಿಂತನೆಯ ಬರಹಗಾರರ ಜೊತೆ ಚರ್ಚೆ ಮಾಡಿದ್ದೇನೆ. ದೇಶದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬಂದಿರುವುದರಿಂದ ಕೆಳವರ್ಗದ ಜನರು ಜೀವನ ನಡೆಸಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಶಯ ವ್ಯಕ್ತವಾಗಿದೆ. ಸಂವಿಧಾನದ ಆಶಯಗಳಾದ ಸಹಬಾಳ್ವೆ ಹಾಗೂ ಸೋದರತ್ವಗಳನ್ನು ಪಾಲಿಸುವವರು ನಾವು, ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತ ಹರಿಸುವವರು ಬಿಜೆಪಿಯವರು. ಯಾರದ್ದು ಐಸಿಸ್ ಉಗ್ರರ ಮನಸ್ಥಿತಿ ಎಂದು ಜನರೇ ನಿರ್ಧರಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ಬಿಜೆಪಿಗೆ ನೈಜ ಕಾಳಜಿಯಿದ್ದರೆ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಾಕು. ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವಾಗ ಸಮಾವೇಶ, ಪಾದಯಾತ್ರೆಗಳನ್ನು ಮಾಡುವ ಅಗತ್ಯವೇ ಬೀಳುವುದಿಲ್ಲ. ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಈಶ್ವರಪ್ಪ ಅವರು ಒತ್ತಡ ಹೇರಿದರೆ ಸಾಕು ಎಂದು ವಿವರಿಸಿದರು.

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿರುವುದು ಖಂಡನೀಯ. ರೈತರು ಸ್ವಾಭಿಮಾನಿಗಳು. ಅವರನ್ನು ಸಂಕಷ್ಟಕ್ಕೆ ನೂಕಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದರು.

ಸಂಭ್ರಮಾಚರಣೆ ಅಗತ್ಯ ಏನಿದೆ?: ಡಾ. ಕೆ. ಸುಧಾಕರ್

0

ಬೆಂಗಳೂರು: ಹೊಸ ವರ್ಷ ಮತ್ತು ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಬಿಗಿ ಕ್ರಮ ಜಾರಿಗೊಳಿಸುವ ಬಗ್ಗೆ ತಜ್ಞರ ಜತೆ ಚರ್ಚಿಸಲಾಗುವುದು ಎಂದು ಸಚಿವ ಡಾ. ಕೆ ಸುಧಾಕರ್ ಹೇಳಿದರು.

ರಾಜ್ಯದಲ್ಲಿ ಕೋವಿಡ್‌ನ 2ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ವರದಿ ಕುರಿತಂತೆ ತಜ್ಞರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಬಳಿಕ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌, ಇದು ಭಾರತೀಯ ಕ್ಯಾಲೆಂಡರ್‌ನ ಹೊಸ ವರ್ಷ ಅಲ್ಲ. ಯುಗಾದಿ ನಮ್ಮ ಹೊಸ ವರ್ಷ. ಎಲ್ಲಕ್ಕಿಂತ ಮಿಗಿಲಾಗಿ ಕೋವಿಡ್‌ನ ಸಂಕಷ್ಟ ಸ್ಥಿತಿಯಲ್ಲಿ ಸಂಭ್ರಮಾಚರಣೆ ಅಗತ್ಯವಾದರೂ ಏನಿದೆ? ನೂರಾರು ಜನರನ್ನು ಕಳೆದುಕೊಂಡಿದ್ದೇವೆ. ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ, ನೂರಾರು ಜನ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಇನ್ನೂ ಪರಿಸ್ಥಿತಿ ಸುಧಾರಣೆ ಆಗಿಲ್ಲ, ಇಂಥ ಸನ್ನಿವೇಶದಲ್ಲಿ ಸಂಭ್ರಮದ ಅಗತ್ಯವಾದರು ಏಕೆ ಬೇಕು ಹೇಳಿ ಎಂದು ಪ್ರಶ್ನಿಸಿದರು.

ಮುಂದುವರೆದು ಮಾತನಾಡಿದ ಅವರು, ಸಣ್ಣ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುವುದಿಲ್ಲ. ಜತೆಗೆ ಜನವರಿಯಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ಏನು ಹೇಳುತ್ತಾರೋ ಗೊತ್ತಿಲ್ಲ. ಹೀಗಾಗಿ ಎಲ್ಲಾ ವಿಷಯಗಳನ್ನು ಅವಲೋಕಿಸಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸವರ್ಷ ಮತ್ತು ಕ್ರಿಸ್ಮಸ್‌ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಕೆಲ ನಿರ್ಬಂಧಗಳ ಅವಶ್ಯಕತೆ ಇದೆ. ಆ ಬಗ್ಗೆ ಸಿಎಂ ಜತೆ ಚರ್ಚಿಸಿ ಪ್ರಕಟಿಸಲಾಗುವುದು. ಆದರೆ ಕರ್ಫ್ಯೂ ಜಾರಿ ಅಗತ್ಯ ಇದೆ ಅನ್ನಿಸುತ್ತಿಲ್ಲ. ಆದರೂ ತಜ್ಞರ ಜೊತೆ ಚರ್ಚಿಸಿದ ಬಳಿಕವಷ್ಟೇ ಈ ಕುರಿತು ನಿರ್ಧರಿಸಲಾಗುವುದು ಎಂದರು.

“ವಿಶ್ವನಾಥ್‌ ಒಂಟಿಯಲ್ಲ”

ವಿಶ್ವನಾಥ್‌ ಅವರು ಒಂಟಿಯಲ್ಲ. ಮುಖ್ಯಮಂತ್ರಿ ಸಹಿತ ನಾವು 17 ಮಂದಿಯೂ ಅವರ ಜತೆಗಿದ್ದೇವೆ. ನಾವೆಲ್ಲರೂ ಈಗ ಬಿಜೆಪಿ ಕಾರ್ಯಕರ್ತರೇ ಆಗಿದ್ದೇವೆ. ಅವರನ್ನು ಏಕಾಂಗಿಯಾಗಿಸುವ ಪ್ರಶ್ನೆಯೇ ಇಲ್ಲ.
ವೈಯಕ್ತಿಕವಾಗಿ ನೋವು ಆದಾಗ ಕೆಲವರು ಭಾವಾವೇಶದಲ್ಲಿ ಮಾತನಾಡುವುದು ಸಹಜ. ವಿಶ್ವನಾಥ್‌ ಅವರು ಅದೇ ರೀತಿ ಮಾತನಾಡಿರಬಹುದು. ಅವರು ಹಿರಿಯರು, ಮೇಲಾಗಿ ಬರಹಗಾರರು. ಅವರೊಂದಿಗೆ ನಾವೆಲ್ಲಾ ಇದ್ದೇವೆ ಎಂದು ವಿನಂತಿ ಮಾಡಿದ್ದೇನೆ. ಹೈಕೋರ್ಟ್‌ ತೀರ್ಪು ಅಂತಿಮವೇನಲ್ಲ. ಸುಪ್ರೀಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಲಾಗುವುದು ಎಂದರು.

ಕೋವಿಡ್‌ನ ಎರಡನೇ ಅಲೆ ಸಿದ್ದತೆ

ತಜ್ಞರು ನೀಡಿರುವ ವರದಿ ಇನ್ನೂ ಕೈಸೇರಿಲ್ಲ, ಅದು ಅಧಿಕಾರಿಗಳ ಮಟ್ಟದಲ್ಲಿದೆ. ಆ ವರದಿ ಮತ್ತು ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಸಲಾಗುವುದು. ಸಭೆ ತೀರ್ಮಾನಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಹೋದ್ಯೋಗಿಗಳ ಜತೆ ಸಮಾಲೋಚಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು. ಕೋವಿಡ್‌ನ ಎರಡನೇ ಅಲೆ ಪರಿಣಾಮಕಾರಿಯಾಗಿರುತ್ತದೆ ಎಂದು ವೈಯಕ್ತಿಕವಾಗಿ ಅನ್ನಿಸುತ್ತಿಲ್ಲ. ಆದರೂ ತಜ್ಞರು ನಡೆಸಿರುವ ಅಧ್ಯಯನ ವರದಿಯಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಯಾವ ಮಟ್ಟದ ಪರಿಣಾಮ? ಯಾವ್ಯಾವ ಪ್ರದೇಶಗಳಲ್ಲಿ ಹೇಗಿರುತ್ತದೆ? ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಈ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಚರ್ಚೆ ಮಾಡಲಾಯಿತು ಎಂದು ವಿವರಿಸಿದರು.

ಜೀವ ಬೆದರಿಕೆ ಹಿನ್ನೆಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆ ರಕ್ಷಣೆ: ಮೂರು ಹಂತದಲ್ಲಿ ತನಿಖೆ ಶುರು

0

ಬೆಂಗಳೂರು: ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಬೇಕು ಅಂತ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ.. ನನ್ನ ಮುಂದೆಯೇ ಕಮಿಷನರ್ ಹತ್ತಿರ ಗೃಹ ಸಚಿವರು ಮಾತಾಡಿದ್ದಾರೆ. ಆರೋಪಿಗಳನ್ನ ಬೇಗ ಹಿಡಿಯುತ್ತಾರೆ ಅನ್ನೋ ಭರವಸೆ ಇದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಸ್ ಮಾಹಿತಿ ನೀಡಿದರು.

ಕಿಡ್ನ್ಯಾಪ್ ಸಂಬಂಧ ಮಾಜಿ ಸಚಿವ ವರ್ತೂರು ಪ್ರಕಾಶ್
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಅವರು, ನಡೆದ ಎಲ್ಲಾ ಘಟನೆ ಬಗ್ಗೆ ವಿವರಿಸಿದ್ದೇನೆ. ನನಗೆ ನನ್ನ ಮಕ್ಕಳಿಗೆ ರಕ್ಷಣೆ ಬೇಕು ಅಂತ ಕೇಳಿದ್ದೇನೆ.. ಕೊಡುತ್ತತೇನೆ ಅನ್ನೋ. ಭರವಸೆ ಕೊಟ್ಟಿದ್ದಾರೆ.ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ವಿವರಿಸಿದರು.

ಬಳಿಕ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಮತ್ತು ಹಲ್ಲೆ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವರ್ತೂರು ಪ್ರಕಾಶ್ ಬಂದಿದ್ದರು. ಪೊಲೀಸರಿಗೆ ಗೊತ್ತಾದ್ರೆ ಜೀವ ಬೆದರಿಕೆ ಇದೆ ಅಂದರು. ಅವನಿಗೆ ಹಲ್ಲೆ ಮಾಡಿದ್ದಾರೆ ಅಂದ್ರು. ಕಳೆದ ಬುಧವಾರ ಕಿಡ್ನ್ಯಾಪ್ ಅಂತ ಹೇಳಿದ್ರು. ಕೋಲಾರ ಎಸ್ಪಿ ಹಾಗೂ ಬೆಂಗಳೂರು ಕಮಿಷನರ್ ಗೆ ರಕ್ಷಣೆ ಕೊಡಲು ತಿಳಿಸಿದ್ದೇನೆ. ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲು ತಿಳಿಸಿದ್ದೇನೆ. ಕೋಲಾರ ಪೊಲೀಸರು ಹಾಗೂ ಬೆಂಗಳೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಇನ್ನು ಸಚಿವ ಸಂಪುಟ ಪುನರ್ಚನೆ ವಿಚಾರ ಕುರಿತು
ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಅದು ಹೈಕಾಮಾಂಡ್ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ. ಅದನ್ನು ಸಿಎಂ ನಿರ್ಧಾರ ಮಾಡ್ತಾರೆ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. You asking wrong person ಎಂದು ಹೇಳಿ ಹೊರಟರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣವನ್ನು ಬೆಳ್ಳಂದೂರು ಠಾಣಾ ಇನ್ಸಪೆಕ್ಟರ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಪ್ರಕಾಶ್ ನೀಡಿರುವ ದೂರಿನನ್ವಯ ಮೂರು ಕಡೆಯಿಂದ ತನಿಖೆ ಶುರು ಮಾಡಲು ಪೊಲೀಸರು ಮುಂದಾಗಿದ್ದಾರೆ.

1. ಕಿಡ್ನಾಪ್ ಆದ ಸ್ಥಳದ ಪರಿಶೀಲನೆ ಫಾರ್ಮ್ ಹೌಸ್ ನಿಂದ ಬರುವಾಗ ಕಿಡ್ನಾಪ್ ಎಂದು ದೂರಿನಲ್ಲಿ ಉಲ್ಲೇಖ..

2. ಅವರನ್ನ ಕಡೆಯದಾಗಿ ಕಿಡ್ನಾಪರ್ಸ್ ಇಳಿಸಿದ ಸ್ಥಳ ಹೊಸಕೋಟೆಯ ಶಿವನಾಪುರ ಇಲ್ಲಿ ಪರೀಶಿಲನೆ..

3. ಮತ್ತು ಕಾರು ಪತ್ತೆಯಾದ ಬೆಳ್ಳಂದೂರು ಠಾಣಾ ವ್ಯಾಪ್ತಿಯ‌ ಸ್ಥಳ

ಈ ಮೂರು ಕಡೆಯ ಸಿಗಬಹುದಾದ ಸಿಸಿಟಿವಿ ಹಾಗೂ ಸುಳಿವುಗಳಿಗಾಗಿ ಪೊಲೀಸ್ರಿಂದ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಇತ್ತೀಚಿಗೆ ವರ್ತೂರು ಪ್ರಕಾಶ್ ಮೊಬೈಲ್ ಗೆ ಬಂದಿರುವ ಕರೆಗಳ ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಬಿದ್ದರೆ ವರ್ತೂರು ಪ್ರಕಾಶರಿಂದ‌ ಮತ್ತೆ ಮಾಹಿತಿ ಪಡೆಯುವ ಸಾಧ್ಯತೆ ಎನ್ನಲಾಗಿದೆ.

ನಾಲ್ಕು ಗಂಟೆ ಕಾರ್ ನಲ್ಲೇ ಹರಾಸ್ ಮಾಡಿದ್ರು ನನ್ನ: ವರ್ತೂರ್ ಪ್ರಕಾಶ್

0

ಹಣಕ್ಕಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, 3 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿ 30 ಕೋಟಿ ಡಿಮ್ಯಾಂಡ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ಅವರು, ಗೃಹ ಸಚಿವರಿಗೂ ನಡೆದ ಎಲ್ಲಾ ಘಟನೆ ವಿವರಿಸಿದ್ದೇನೆ. ನನಗೆ ನನ್ನ ಮಕ್ಕಳಿಗೆ ರಕ್ಷಣೆ ಬೇಕು ಅಂತ ಕೇಳಿದ್ದೇನೆ. ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ತಿಳಿಸಿದರು.

ಕಿಡ್ನ್ಯಾಪ್ ಆದ 6 ದಿನದ ಬಳಿಕ ದೂರು..?

ನ.25 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಕೋಲಾರದ ಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್ನಿಂದ ನಾನು ನನ್ನ ಚಾಲಕನಾದ ಸುನೀಲ್ ರವರ ಜೊತೆ ಕೋಲಾರ ನಗರಕ್ಕೆ ಬರಲು, ನನ್ನ ಫಾರ್ಚೂನರ್ ವಾಹನ ಸಂಖ್ಯೆ ಕೆಎ-05-ಎಂ.ವಿ-8775 ರಲ್ಲಿ ಬರುತ್ತಿರಬೇಕಾದರೆ, ಫಾರಂ ಹೌಸ್ನಿಂದ ಒಂದು ಕಿಲೋಮೀಟರ್ ದೂರ ಬಂದ ನಂತರ ಯಾರೋ ಕೆಲ ಅಪರಿಚಿತ ವ್ಯಕ್ತಿಗಳು ಏಕಾಏಕಿ ನನ್ನ ಕಾರನ್ನು ತಡೆಗಟ್ಟಿದ್ದಾರೆ. ಸುಮಾರು 8 ಜನರು ಬಂದು ನನ್ನ ಕಾರಿನ ಗ್ಲಾಸ್ ಗಳನ್ನು ಒಡೆದುಹಾಕಿ ಲಾಂಗ್ ಹಿಡಿದು ನನ್ನನ್ನು ಇಳಿ ಇಳಿ ಎಂದರು. ನಾನು ಇಳಿಯೋಕೆ ಹೋಗಿಲ್ಲ. ನನ್ನ ಕಾರಿನಲ್ಲೇ ನನ್ನನ್ನು ಒಳಗೆ ಹಾಕೊಂಡು ಮಂಕಿ ಕ್ಯಾಪ್ ಹಾಕಿದ್ರು. ನಮ್ಮ ಡ್ರೈವರ್ ಓಡಲು ಹೋದ ಮೊಚ್ಚಲ್ಲಿ ಕೈಗೆ ಏಟಿ ಹಾಕಿದರು ಅವ್ನಿಗೆ. ಅವನನ್ನೂ ಎತ್ತಿ ನನ್ನ ಕಾರಿನ ಒಳಗೆ ಹಾಕಿದರು. ಇಬ್ಬರನ್ನೂ ಕೂಡಿ ಹಾಕಿದರು. 4 ಗಂಟೆ ನಾವು ಕಾರ್ ನಲ್ಲೇ ಇದ್ವಿ. ನಾಲ್ಕು ಗಂಟೆ ಕಾರ್ ನಲ್ಲೇ ಹರಾಸ್ ಮಾಡಿದ್ರು ನನ್ನ. ತಲೆಗೆ ರಾಡ್ ನಲ್ಲಿ ಒಡೆಯೋದು. ಗನ್ ತೋರಿಸೋದು. 30 ಕೋಟಿ ಕೊಟ್ರೆ ನಿನ್ನನ್ನು ಬಿಡ್ತೀವಿ ಇಲ್ಲಾಂದ್ರೆ ಇಲ್ಲ. ಕಡೆಗೆ 11 ಗಂಟೆಗೆ ಜನ ಇಲ್ಲ. ಬರೀ ಮರಗಳು ಇರೋ ಜಾಗಕ್ಕೆ ಕರೆದುಕೊಂಡು ಹೋದರು. ಕಾಡಿಗೆ ಕರೆದುಕೊಂಡು ಹೋದರು ಅನಿಸುತ್ತೆ. ಅಲ್ಲಿ ಹೋದ ನಂತರ ನನ್ನ ಕಾಲು ಕೈ ಎರಡೂ ಕಟ್ಟಿ ಹಾಕಿ. ಬೆಳಗ್ಗಿನ ಜಾವ 3 ಗಂಟೆವರೆಗೂ ಹೊಡೆದರು. ಹಣ ಎಲ್ಲಿದೆ. ಒಡವೆ ಎಲ್ಲಿಟ್ಟಿದ್ದೀಯಾ ಹೇಳು ಎಂದು ಹೊಡೆದರು. ನನ್ನ ಬಳಿ ಹಣ ಇಲ್ಲ ಎಂದು ಎಷ್ಟು ಹೇಳಿದರೂ ಅವರು ಕೇಳಲಿಲ್ಲ. ನಿನ್ನ ಸ್ನೇಹಿತರಿಗೆ ಹೇಳು ಎಂಎಲ್ ಎ ಗಳಿಗೆ ಹೇಳು. ಮಿನಿಸ್ಟರ್ ಗೆ ಯಾರಿಗಾದರೂ ಹೇಳಿ ತರಿಸು ಎಂದರು. 3.30 ಕ್ಕೆ ಅವರೆಲ್ಲಾ ಮಲಗಿಬಿಟ್ಟರು. ಮತ್ತೇ 6.30 ಕ್ಕೆ ಎದ್ದು ಅದನ್ನೇ ಪ್ರಾರಂಭ ಮಾಡಿದರು. ನನ್ನನ್ನ ಆ ಜಾಗದಿಂದ ಮತ್ತೇ ಇನ್ನೊಂದು ಜಾಗಕ್ಕೆ ಕರೆದುಕೊಂಡು ಹೋದರು. ನಾಲ್ಕು ತಾಸು. ಅಂದ್ರೆ 10 ರಿಂದ 12 ಗಂಟೆ ವರೆಗೆ ಬೇರೆ ಕಡೆ ಕರೆದುಕೊಂಡು ಹೋದರು ಎಂದು ವಿವರಿಸಿದ್ದಾರೆ.

ನ.26ರಂದು ಅಪಹರಣಕಾರರ ಹಿಂಸೆ ತಾಳಲಾರದೇ, ನಯಾಜ್ ಅನ್ನೋ ಹುಡುಗನ ಮೂಲಕ ಕೊಲಾರದ ಕಾಫಿ ಡೇ ಶಾಪ್ ಬಳಿ 48 ಲಕ್ಷ ರೂ. ತರಿಸಿಕೊಂಡು ಹಣವನ್ನು ಅಪಹರಣಕಾರರಿಗೆ ಕೊಟ್ಟಿದ್ದೇನೆ. ಹಣ ನೀಡದಿದ್ದರೂ ಪರಿಪರಿಯಾಗಿ ಚಿತ್ರ ಹಿಂಸೆ ನೀಡಿ ಹೆಚ್ಚಿನ ಹಣಕ್ಕಾಗಿ ಪ್ರತಿಕ್ಷಣ ಪೀಡಿಸಿ ಹಿಂಸೆ ಮಾಡಿ ಮತ್ತೆ ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ನ.28 ಮುಂಜಾನೆವರೆಗೂ ಅಪಕಾರರ ಕಪಿಮುಷ್ಠಿಯಲ್ಲಿದ್ದೇನೆ.. ನನಗೆ ಹಣ ನೀಡಲು ಸಾಧ್ಯವಾಗದೇ ಇದ್ದಾಗ, ನನ್ನ ಚಾಲಕನಿಗೆ ಚಿತ್ರಹಿಂಸೆ ನೀಡಿ ರಾಡ್ ಮತ್ತು ಮಚ್ಚಿನಿಂದ ತಲೆಗೆ ಹೊಡೆದಿದ್ದರಿಂದ ಮೂರ್ಚೆ ತಪ್ಪಿ ಬಿದ್ದಿದ್ದಾರೆ. ಚಾಲಕ ಮೃತಪಟ್ಟಿದ್ದಾನೆಂದು ಭಾವಿಸಿ ಸ್ವಲ್ಪ ದೂರದಲ್ಲಿ ತಿಳಿದು ಸ್ವಲ್ಪ ದೂರದಲ್ಲಿ ಡ್ರಿಂಕ್ಸ್ ಮಾಡುತ್ತಿರುವಾಗ ನನ್ನ ಚಾಲಕ ಜ್ಞಾನ ಬಂದು ಆ ಸ್ಥಳದಿಂದ ಪರಾರಿಯಾಗಿದ್ದ.
ಇದನ್ನ ಅರಿತ ಅಪರಿಚಿತರು ಚಾಲಕನು ಪೊಲೀಸರಿಗೆ ಮಾಹಿತಿ ನೀಡಬಹುದಂದು ಭಯಗೊಂಡು ನನ್ನನ್ನು ಹೊಸಕೋಟೆ ಬಳಿ ಇರುವ ಶಿವನಾಪುರ ಗ್ರಾಮದ ಬಳಿ ಇರುವ ಖಾಲಿ ಮೈದಾನದಲ್ಲಿ ಬೆಳಗಿನ ಜಾವ ಸುಮಾರು 4 ಗಂಟೆ ಕಾರಿನಿಂದ ತಳ್ಳಿ ಹೋದರು ಎಂದು ಘಟನೆ ಕುರಿತು ವಿವರಿಸಿದರು.

ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ಆತಂಕ ಪಡೋದಿಲ್ಲ: ಡಿಕೆ ಶಿವಕುಮಾರ್

0

ದೇವನಹಳ್ಳಿ : ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ದೇವನಹಳ್ಳಿಯ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು,
ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ. ನಾವು ಭವಿಷ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶದಿಂದ ನಾವು ನಮ್ಮ ಪಕ್ಷದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ಸಿದ್ಧಾಂತಗಳೇ ಮುಖ್ಯ ಎಂದರು.

“ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ”

‘ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ನಾವು ಮುಸಲ್ಮಾನರಿಗೆ ಟಿಕೆಟ್ ನೀಡುವುದಿಲ್ಲ ಎಂದಿರುವ ಈಶ್ವರಪ್ಪನವರು, ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಎಂದು ತಿಳಿದುಕೊಳ್ಳಬೇಕು. ಬಿಜೆಪಿಯವರ ಸಿದ್ಧಾಂತವೇ ಅದು. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ. ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸುವುದು ಉತ್ತಮ’ ಎಂದು ಟೀಕಿಸಿದರು.

ಮುಂದುವರೆದು ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಚುನಾವಣೆ ಘೋಷಣೆಯಾಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಇದು. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ. ಬೆಂಗಳೂರು ಪಾಲಿಕೆ ಚುನಾವಣೆಯೂ ನಡೆಯಬೇಕು ಎಂಬುದು ನಮ್ಮ ಬಯಕೆ. ಈಗಾಗಲೇ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿವೆ. ಹೀಗಾಗಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವುದರಲ್ಲಿ ಅಭ್ಯಂತರವಿಲ್ಲ. ಕೋವಿಡ್ ನಿಯಮ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ರಾಜ್ಯದ ಸಮಸ್ಯೆ ಹಾಗೂ ಸರ್ಕಾರದ ಕೆಲವು ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರವಾಗಿ ನಾನೊಬ್ಬ ತೀರ್ಮಾನ ಮಾಡುವುದಿಲ್ಲ. ಎಲ್ಲ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಇಂದು ಹಿರಿಯ ನಾಯಕರೆಲ್ಲ ಸೇರಿ ಚರ್ಚಿಸಿ, ಅವರ ಸಲಹೆ ಪಡೆಯುತ್ತೇನೆ ಎಂದರು.

“ಸಂತೋಷ್ ಹತ್ಯೆ ಯತ್ನ ತನಿಖೆ ಆಗಬೇಕು”

ಸಂತೋಷ್ ಅವರು ಈಗ ಯಾವ ಹೇಳಿಕೆ ಬೇಕಾದರೂ ನೀಡಲಿ. ತಮ್ಮ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನಾದರೂ ಹೇಳಲಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಈ ಹೇಳಿಕೆ ಕೊಡಿಸಲಾಗಿದೆ. ಸಂತೋಷ ಅವರು ಯಾಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬುದರ ಬಗ್ಗೆಯೇ ಅವರ ಧರ್ಮಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕಾದರೂ ತನಿಖೆ ನಡೆಯಬೇಕೋ ಬೇಡವೋ? ಅವರು ಯಾವುದೋ ಸಾಮಾನ್ಯ ಹುದ್ದೆಯಲ್ಲಿ ಇರುವವರಲ್ಲ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇವರ ಆತ್ಮಹತ್ಯೆ ಯತ್ನ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

For more reading