ಡಿಕೆಶಿ ಪರ ಪ್ರತಿಭಟನೆಗೆ ಬಿಜೆಪಿಯ ಒಕ್ಕಲಿಗ ನಾಯಕರು ಬೆಂಬಲ ನೀಡಿದ್ರು..!

0
585

ರಾಜ್ಯ ರಾಜಕೀಯದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಬಂಧನ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ರಾಜಕೀಯವಾಗಿ ಈ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ವಿಪಕ್ಷ ಕಾಂಗ್ರೆಸ್ ಇದನ್ನು ಹೊಸ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಡಿಕೆಶಿ ಬಂಧನವನ್ನು ‘ಒಕ್ಕಲಿಗರ ದಮನ’ ಎಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಡಿಕೆಶಿ ಪ್ರಕರಣ ಇದೀಗ ಅಕ್ಷರಶಃ ಜಾತಿ ರಾಜಕಾರಣಕ್ಕೆ ಸಾಕ್ಷಿಯಾಗಿದೆ.

ಇನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ನೀಡಿರುವ ಹೇಳಿಕೆ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಡೆಸಿದ ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಫೋನ್ ಕರೆ ಮಾಡಿ ಬೆಂಬಲ ನೀಡಿದರು. ‘ನಿಮ್ಮ ಹೋರಾಟ ಸರಿ ಇದೆ, ಆದರೆ ನಾವು ಪ್ರತಿಭಟನೆಗೆ ಬರಲ್ಲ. ಆದರು ನಮ್ಮ ಬೆಂಬಲ ನಿಮಗಿರಲಿದೆ’ ಎಂದು ಹೇಳಿದ್ದಾರೆ ಎಂದು ಕರವೇ ನಾರಾಯಣಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರನ್ನು ಮಾನಸಿಕವಾಗಿ ಕುಗ್ಗೋಕೆ ಬಿಡಲ್ಲ. ಒಕ್ಕಲಿಗ ಸಮುದಾಯ ಮೈಕೊಡವಿ ನಿಂತರೆ ಯಾರು ಎದುರಿಗೆ ನಿಲ್ಲೋಕೆ ಆಗಲ್ಲ. ಡಿಕೆಶಿಯವರಿಗೆ ನೈತಿಕ ಬೆಂಬಲಕ್ಕಾಗಿ ಪಕ್ಷಾತೀತವಾಗಿ ಈ ಹೋರಾಟ ನಡೆದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇದೇ ರೀತಿ ಒಕ್ಕಲಿಗರ ದಮನಕ್ಕಾಗಿ ಪ್ರಯತ್ನಿಸಿದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ರಾಜಕೀಯವಾಗಿ ನಮ್ಮ ಸಮುದಾಯವನ್ನು ತುಳಿಯಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಕರವೇ ನಾರಾಯಣಗೌಡ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here