‘ಶಾ’ ಕುತಂತ್ರದ ಪ್ರಕಾರ ಬಿಜೆಪಿಯ ನೆಕ್ಸ್ಟ್ ಟಾರ್ಗೆಟ್ ಕುಮಾರಸ್ವಾಮಿ..! ಯಾಕೆ ಗೊತ್ತಾ..?!

0
1709

‘ಕನಕಪುರದ ಬಂಡೆ’, ‘ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್’, ‘ಮೈತ್ರಿ ಸರ್ಕಾರದ ರಕ್ಷಕ’, ‘ಒಕ್ಕಲಿಗರ ಪ್ರಭಾವಿ ನಾಯಕ’ ಎಂದೇ ಗುರುತಿಸಿಕೊಂಡಿದ್ದ ಡಿಕೆ ಶಿವಕುಮಾರ್ ಇದೀಗ ಇಡಿ ಕುಣಿಕೆಗೆ ಸಿಲುಕಿದ್ದಾರೆ. ಡಿಕೆಶಿ ಬಂಧನ ರಾಷ್ಟ್ರ ರಾಜಕೀಯವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ಆದರೆ ಈ ಬಂಧನದ ಹಿಂದೆ ರಾಜಕೀಯ ಪಿತೂರಿ ಅಡಗಿದೆಯಾ..? ಎಂಬ ಅನುಮಾನವನ್ನು ವಿಪಕ್ಷಗಳು ವ್ಯಕ್ತಪಡಿಸಿವೆ. ಅದಕ್ಕೆ ಕಾರಣ ಅಮಿತ್ ಶಾ ಹೆಣೆದಿರುವ ಕುತಂತ್ರದ ತಂತ್ರ.

ಹೌದು, ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಮೋದಿ ಮತ್ತು ಅಮಿತ್ ಶಾ ಜೋಡಿಗೆ ದೇಶದಲ್ಲಿ ವಿರೋಧ ಪಕ್ಷಗಳು ಬಲಿಷ್ಠವಾಗಿ ಬೆಳೆಯಬಾರದು. ಪ್ರಾದೇಶಿಕ ನೇತಾರರು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣದಿಂದ ದೇಶದಾದ್ಯಂತ ಬಲಿಷ್ಠ ನಾಯಕರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ನಡೆದಿದೆ ಎನ್ನುವ ಅನುಮಾನ ಮೂಡುತ್ತಿದೆ. ಈ ಅನುಮಾನಕ್ಕೆ ಅನೇಕ ಕಾರಣಗಳಿವೆ, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಅನೇಕ ರಾಜಕೀಯ ನಾಯಕರು ಬಿಜೆಪಿ ರಕ್ಷಿಸಿದೆ. ಅದಕ್ಕೆ ಉದಾಹರಣೆ ಎಂದರೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕನಾಗಿದ್ದ ಮುಕುಲ್‍ರಾಯ್.

ಹೌದು, ಈ ಹಿಂದೆ ತೃಣಮೂಲ ಕಾಂಗ್ರೆಸ್‍ನಲ್ಲಿದ್ದಾಗ ಮುಕಲ್‍ರಾಯ್ ಶಾರದಾ ಚೀಟ್‍ಫಂಡ್ ಹಗರಣದ ಆರೋಪಿಯಾಗಿದ್ದರು. ನಂತರ ನಡೆದ ರಾಜಕೀಯ ವಿಪ್ಲವದಿಂದ ಮುಕುಲ್‍ರಾಯ್ ಬಿಜೆಪಿ ಸೇರಿಕೊಂಡರು. ಮುಕುಲ್‍ರಾಯ್ ಬಿಜೆಪಿ ಸೇರಿದ್ದೆ ತಡ ಅವರ ಮೇಲಿದ್ದ ಎಲ್ಲ ಕೇಸುಗಳು ಖುಲಾಸೆಗೊಳ್ಳಲು ಆರಂಭವಾದವು. ಅನೇಕ ವಿಚಾರಣೆಗಳಿಗೆ ತಡೆ ನೀಡಲಾಯಿತು. ಇದೇ ರೀತಿ ದೇಶದ ಅನೇಕ ಭಾಗಗಳಲ್ಲಿ ನಡೆದಿದೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅವರನ್ನು ರಕ್ಷಣೆ ಮಾಡಲಾಗುತ್ತದೆ. ಇಲ್ಲದಿದ್ರೆ ವ್ಯವಸ್ಥಿತವಾಗಿ ತುಳಿಯಲಾಗುತ್ತದೆ. ಡಿಕೆಶಿ ಬಿಜೆಪಿ ವಿರುದ್ದ ಮಾಡಿದ ಹೋರಾಟವೇ ಅವರಿಗೆ ಮುಳ್ಳಾಗಿರುವ ಸಾಧ್ಯತೆ ಇದೆ.
ಇನ್ನು ಡಿಕೆ ಶಿವಕುಮಾರ್ ಅವರ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಹೆಣೆಯಲು ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಜಂತಕಲ್ ಗಣಿ ಹಗರಣದಲ್ಲಿ ಕುಮಾರಸ್ವಾಮಿ ಅವರಿಗೆ ಎಸ್‍ಐಟಿ ಕ್ಲೀನ್‍ಚೀಟ್ ನೀಡಿದ ಹಿನ್ನಲೆ ಇದೀಗ ಫೋನ್ ಕದ್ದಾಲಿಕೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಂಧಿಸುವ ಪಿತೂರಿ ನಡೆದಿದೆ ಎನ್ನಲಾಗಿದೆ. ಡಿಕೆಶಿ ಮತ್ತು ಕುಮಾರಸ್ವಾಮಿ ಹಳೆ ಮೈಸೂರು ಭಾಗದ ಅತ್ಯಂತ ಪ್ರಭಾವಿ ಒಕ್ಕಲಿಗ ನಾಯಕರು.

ಹೀಗಾಗಿ ಇವರನ್ನೇ ಟಾರ್ಗೆಟ್ ಮಾಡಲಾಗಿದ್ದು, ಈ ಇಬ್ಬರನ್ನು ರಾಜಕೀಯವಾಗಿ ಮುಗಿಸಿದರೆ ಹಳೆ ಮೈಸೂರು ಭಾಗದಲ್ಲಿಯೂ ಬಿಜೆಪಿಯನ್ನು ಬಲಿಷ್ಠಗೊಳಿಸಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು ಎನ್ನುವ ಮಾತು ಕೇಳಿ ಬಂದಿದೆ. ಆದರೆ ವಿಪಕ್ಷಗಳ ಈ ಅನುಮಾನ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಇನ್ನು ನಿಗೂಢ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here