ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ಆಸ್ತಿ ಇದೀಗ 1,213 ಕೋಟಿ ರೂ.ಗಳಿಂದ 1,483 ಕೋಟಿ ರೂಗೆ ಏರಿಕೆಯಾಗಿದೆ. 2017-18ರಲ್ಲಿ ಬಿಜೆಪಿಯ ಸಂಸತ್ತು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯ ವರದಿ ತಿಳಿಸಿದೆ.
2017-18ನೇ ಸಾಲಿಗೆ ಆಸ್ತಿ ವಿವರವನ್ನು ದೇಶದೆ ಎಲ್ಲ ರಾಜಕೀಯ ಪಕ್ಷಗಳು ಘೋಷಿಸಿವೆ. ಏಳೂ ಪಕ್ಷಗಳ ಆಸ್ತಿ 3,456 ಕೋಟಿ ರು.ಗಳಿಂದ 3,260 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಿಜೆಪಿಯ ಆಸ್ತಿ 1,213 ಕೋಟಿ ರು.ಗಳಿಂದ 1,483 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಅಚ್ಚರಿ ಎಂದರೆ ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳ ಆಸ್ತಿ ಇಳಿಕೆ ಕಂಡಿದೆ. ಕಾಂಗ್ರೆಸ್ ಪಕ್ಷದ ಆಸ್ತಿ 854 ಕೋಟಿ ರು.ಗಳಿಂದ 724 ಕೋಟಿ ರು.ಗಳಿಗೆ ಇಳಿಕೆಯಾಗಿದೆ.