ಬಿಜೆಪಿಯಲ್ಲಿ ಹರಡುತ್ತಿದೆ `ಸಾಂಕ್ರಾಮಿಕ ರೋಗ’..!?

0
1281

ರಾಜ್ಯ ಸರ್ಕಾರ ಸಂಪುಟ ರಚನೆ ಮಾಡಿದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಕರ್ತವ್ಯವನ್ನು ಯಶಸ್ವಿಗೊಳಿಸುವಲ್ಲಿ ಸಫಲವಾದರು. ಬಿಜೆಪಿಯ 17 ಶಾಸಕರು ಸಂಪುಟ ರಚನೆಯಲ್ಲಿ ತಮ್ಮ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲ ಮುಗಿಯಿತು ಅಂದುಕೊಂಡರೆ, ಇತ್ತ ರಮೇಶ್ ಜಾರಕಿಹೊಳಿ ಅವರ ತಮ್ಮ ಯಡಿಯೂರಪ್ಪನರ ವಿರುದ್ಧ ಕಿಡಿಕಾರಿದರು. ನಮ್ಮ ಅಣ್ಣನಿಗೆ ಯಾವ ಖಾತೆಯನ್ನು ನೀಡಿಲ್ಲ, ಅವರಿಗೆ ಪ್ರತಿಷ್ಟಿತ ಹುದ್ದೆ ಮತ್ತು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಬೇಕು ಎಂದು ಅಗ್ರಹಿಸಿದರು. ಇದಕ್ಕೆ ಯಡಿಯೂರಪ್ಪನವರು ಸಮಾಧಾನವಾಗಿ ನೋಡೋಣ ಎಂದು ಮಾತನ್ನು ಮುಂದೂಡಿದರು.

ಆದರೆ ಈಗ ಬಿಎಸ್‍ವೈ ವಿರುದ್ಧ ತಿರುಗಿ ಬಿದ್ದಿದ್ದಾರೆ `ಈ 5 ಶಾಸಕರು’. ಈಗ ತಾನೆ ಕಮಲ ಅರಳುತ್ತಿದ್ದು, ಇಂಥ ಸಮಯದಲ್ಲಿ ಕಮಲವನ್ನು ಚಿವುಟಿ ಹಾಕುವ ಯೋಚನೆಯಲ್ಲಿದ್ದಾರೆ ಈ ಶಾಸಕರು. ಬಿಎಸ್‍ವೈ ವಿರುದ್ದ ರೊಚ್ಚಿಗೆದ್ದು ನಿಂತಿದ್ದಾರೆ ಮಂತ್ರಿ ಸ್ಥಾನ ವಂಚಿತರು. ಬಿಜೆಪಿಯಲ್ಲಿ ಹಬ್ಬುತ್ತಿದೆ ಅತೃಪ್ತ ಶಾಸಕರ ಗುಂಪು. ಹೇಗೆ ಮೈತ್ರಿ ಸರಕಾರ ಪತನವಾಗಲು ಅತೃಪ್ತರ ಕಾರಣಗಳು ಸೃಷ್ಟಿಯಾಯಿತೋ,ಅದೇ ರೀತಿಯಲ್ಲಿ ಕಮಲ ಪಕ್ಷಕ್ಕೂ ಕಂಟಕ ಕಾದಿದೆ. ಕಮಲದಲ್ಲಿ ಇರುವ ಈ ಐದು ಶಾಸಕರ ಬಗ್ಗೆ ಬಿಎಸ್‍ವೈ ನಿರ್ಲಕ್ಷಿಸಿದರೆ ಸರ್ಕಾರಕ್ಕೆ ದೊಡ್ಡ ಕಂಟಕ ಎದುರಾಗಲಿದೆ.

ಈ ಐವರನ್ನು ಬಿಎಸ್‍ವೈ ಸೂಕ್ಷ್ಮತೆಯಿಂದ ಜೊತೆಯಲ್ಲಿಟ್ಟುಕೊಂಡರೆ ಪಕ್ಷಕ್ಕೆ ಉತ್ತಮ. ಆ ಐದು ಶಾಸಕರು ಯಾರು ಎಂಬ ಕೂತೂಹಲ ಎಲ್ಲರಲ್ಲೂ ಮೂಡಿರುವುದು ಸಹಜ, ಯಾರು ಆ ಶಾಸಕರು ಇಲ್ಲಿದೆ ನೋಡಿ ಅವರ ಕಂಪ್ಲೀಟ್ ಡಿಟೇಲ್ಸ್..

  1. ಉಮೇಶ್ ಕತ್ತಿ
  2. ಬಾಲಚಂದ್ರ ಜಾರಕಿಹೊಳಿ
  3. ಎಂ.ಪಿ.ರೇಣುಕಾಚಾರ್ಯ
  4. ಅರವಿಂದ್ ಲಿಂಬಾವಳಿ
  5. ರಾಜು ಗೌಡ.

LEAVE A REPLY

Please enter your comment!
Please enter your name here