“ಅತಿ ಹೆಚ್ಚು ಗೋ ಮಾಂಸ ರಪ್ತು ಮಾಡ್ತಿರೋದೇ ಬಿಜೆಪಿಯವ್ರು”

0
12

ಬೆಂಗಳೂರು: ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಆ ವ್ಯವಹಾರದಲ್ಲಿ ತೊಡಗಿರುವ ಅನೇಕ ವ್ಯಾಪಾರಿಗಳು ಕೂಡಾ ಬಿಜೆಪಿಯವರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು,  ಗೋಹತ್ಯೆಯ ಬಗ್ಗೆ ಬಿಜೆಪಿ ನಾಯಕರದ್ದು ದಂದ್ವ ನಿಲುವು. ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತೀ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ. ಆ ವ್ಯವಹಾರದಲ್ಲಿ ತೊಡಗಿರುವ ಅನೇಕ ವ್ಯಾಪಾರಿಗಳು ಕೂಡಾ ಬಿಜೆಪಿಯವರು. ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಈ ಲವ್ ಜೆಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮದುವೆಗೆ ಜಾತಿ-ಧರ್ಮಗಳ ನಿರ್ಬಂಧ ಕಾನೂನಿನಲ್ಲಿ ಇಲ್ಲ. ದೇಶದ ಯಾವ ಕಾನೂನು ಕೂಡಾ ಲವ್ ಜೆಹಾದ್ ಎಂದರೆ ಏನು ಎಂದು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವರೇ ಸಂಸತ್ ನಲ್ಲಿ ಹೇಳಿದ್ದಾರೆ. ಸಿ.ಟಿ.ರವಿಯವರು ಗೃಹಸಚಿವರನ್ನು ಕೇಳಿಕೊಂಡು ಬಂದು ಮಾತನಾಡಲಿ ಎಂದರು.

“ಗೂಂಡಾರಾಜ್ಯ ಉತ್ತರಪ್ರದೇಶ ನಮಗೆ ಮಾದರಿ ಅಲ್ಲ”

ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಂತರಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಮೊದಲು ಅದನ್ನು ಓದಿಕೊಳ್ಳಲಿ. ಗೂಂಡಾರಾಜ್ಯವಾದ ಉತ್ತರಪ್ರದೇಶ ನಮಗೆ ಮಾದರಿ ಅಲ್ಲ. ಆರ್ ಎಸ್ ಎಸ್ ಶಾಖೆಗೆ ಹೋಗಿ ನಾನು ಕಲಿಯಬೇಕಾಗಿಲ್ಲ, ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತಿದ್ದೇನೆ, ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕು, ಆರ್ ಎಸ್ ಎಸ್ ಅಲ್ಲ. ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಸಂವಿಧಾನದ ಪಾಠ ಮಾಡ್ತೇನೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿ. ಅದು ಮೀಸಲಾತಿ,ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತದೆ. ಅವರು ಮಿಲ್ಲರ್ ವರದಿಯಿಂದ ಮಂಡಲ್ ವರದಿ ವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು ಎಂದರು.

“ವೈಯುಕ್ತಿಕವಾಗಿ ನನಗೂ ಮೋದಿಗೂ, ನನಗು ಯಡಿಯೂರಪ್ಪಗು, ಸಿಟಿ ರವಿಗು ಏನು ಇಲ್ಲಾ”

ವೈಯುಕ್ತಿಕವಾಗಿ ನನಗೂ ಮೋದಿಗೂ, ನನಗು ಯಡಿಯೂರಪ್ಪಗು, ಸಿಟಿ ರವಿಗು ಏನು ಇಲ್ಲಾ. ಆದರೆ ಅವರು ಮಾನವೀಯವಾಗಿ ನಡೆದುಕೊಳ್ಳಬೇಕು
ರಾಜಕೀಯವಾಗಿ ನನಗೆ ಶತ್ರು ಅಂತ ಇದ್ದರೆ ಅದು ಆರ್ ಎಸ್ಎಸ್ ಮಾತ್ರ.‌ ನನಗೆ ವೈಯುಕ್ತಿಕವಾಗಿ ಯಾರು ಎನಿಮಿ ಇಲ್ಲ. ಪೊಲಿಟಿಕಲಿ ಆರ್ ಎಸ್ ಎಸ್ ನನ್ನ ಎನಿಮಿ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here