ಬಿಜೆಪಿ ನಾಯಕರು ‘ಉತ್ತರ ಕುಮಾರರು’..! ಒಲೆ ಮುಂದೆ ಮಾತ್ರ ಪೌರುಷ..

0
322

ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸಂತ್ರಸ್ಥರಿಗೆ ಕನಿಷ್ಠ ಸೂರು ಕಲ್ಪಿಸಿಕೊಡುವುದಕ್ಕೂ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸಿಎಂ ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಇದೀಗ ಮತ್ತೊಮ್ಮೆ ರಾಜ್ಯ ಬಿಜೆಪಿ ನಾಯಕರನ್ನು ಉತ್ತರಕುಮಾರರು ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಟ್ವೀಟರ್ ನಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ನೀಡಿರು ಹೇಳಿಕೆಗಳಿಗೆ ಅವರ ಹೆಸರನ್ನು ಟ್ಯಾಗ್ ಮಾಡಿ ಬಿಜೆಪಿ ನಾಯಕರ ಕಾಲೆಳೆದಿದೆ. “ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥನೆ, ಸಂವೇದನೆಯನ್ನು ತೋರಿರುವ ಇವರುಗಳು ಕರ್ನಾಟಕದ ಉತ್ತರ ಕುಮಾರರೇ ಸರಿ..
ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ @BSYBJP
10,000 ಕೊಟ್ಟಿದ್ದೇ ಹೆಚ್ಚಾಯ್ತು @ikseshwarappa
ಶಾಲಾ ಮಕ್ಕಳು ದೇಣಿಗೆ ಸಂಗ್ರಹಿಸಬೇಕು @drashwathcn
ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ @Tejasvi_Surya ಎಂದು ಟ್ವೀಟ್ ಮಾಡಿ ಕಾಲೆಳೆದಿದೆ.

ಇನ್ನು ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗ ಮನೆ-ಮಠ ಕಳೆದುಕೊಂಡು ಜನರು ಸೂಕ್ತ ನೆಲೆ ಇಲ್ಲದೇ ಪರದಾಡುತ್ತಿದ್ದಾರೆ. ಆದರು ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಪರಿಹಾರವನ್ನು ನೀಡಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಗೂ ಪ್ರಧಾನಿಗಳು ಸಮಯ ನೀಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ‘ಉತ್ತರನ ಪೌರುಷ ಒಲೆ ಮುಂದೆ..’ ಎನ್ನುವ ಹಾಗೇ ರಾಜ್ಯದಲ್ಲಿ ಮಾತನಾಡುತ್ತಾರೆ ಆದರೆ ಪ್ರಧಾನಿ ಮೋದಿ ಮುಂದೆ ನಿಂತು ಮಾತನಾಡುವ ಧೈರ್ಯ ತೋರುತ್ತಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ.

LEAVE A REPLY

Please enter your comment!
Please enter your name here