ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ: ಬಿಜೆಪಿ ಪಾಳಯದಲ್ಲಿ ಬಂಡಾಯ ಬಿಸಿ

0
211

ಬೆಂಗಳೂರು: ಸುಪ್ರೀಂ ಕೋರ್ಟ್ ನಿಂದ ತೀರ್ಪು ಬಂದದ್ದೇ ತಡ ಆರ್ ಆರ್ ನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿ ಗಳ ಹೆಸರನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆರ್ ಆರ್ ನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ನ್ನು ಮುನಿರತ್ನಗೆ ನೀಡಿದರೆ, ಶಿರಾ ವಿಧಾನಸಭೆ ಕ್ಷೇತ್ರದ ಟಿಕೆಟ್ ನ್ನು ರಾಜೇಶ್ ಗೌಡಗೆ ನೀಡಿ ಆದೇಶ ಹೊರಡಿಸಲಾಗಿದೆ. ನಿಗದಿಯಂತೇ ಮುನಿರತ್ನಗೆ ಗೆ ಟಿಕೆಟ್ ನೀಡಲಾಗಿದೆ. ಆರ್ ಆರ್ ನಗರದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕಿದ್ದು ಆಕಸ್ಮಿಕ ಎಂದು ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ಎಸ್ ಎ ಬೋಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಚುನಾವಣೆ ಗೆ ತಡೆ ನೀಡಲು ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ಆರ್ ಆರ್ ನಗರ ಆಕಾಂಕ್ಷಿ ಮುನಿರತ್ನಗೆ ಗೆ ಟಿಕೆಟ್ ನೀಡಿ ಆದೇಶಿಸಲಾಗಿದೆ.

ಶಾಸಕ ಸತ್ಯ ನಾರಾಯಣ ಅವರ ನಿಧನದ ಹಿನ್ನಲೆಯಲ್ಲಿ ಶಿರಾ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಜೆಡಿಎಸ್ ತೊರೆದು ಬಿಜೆಪಿ ಗೆ ಸೇರಿದ್ದ ರಾಜೇಶ್ ಗೌಡ ಅವರಿಗೆ ಶಿರಾ ವಿಧಾನಸಭೆ ಟಿಕೆಟ್ ನ್ನು ಘೋಷಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿರ್ದೇಶನದ ಮೆರೆಗೆ ಅಭ್ಯರ್ಥಿ ಗಳನ್ನ ಘೋಷಿಸಲಾಗಿದೆ.

ಅಕ್ಟೋಬರ್ 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನವಾಗಿದ್ದು, ಅಕ್ಟೋಬರ್ 17 ಕ್ಕೆ ಕೊನೆ ದಿನವಾಗಲಿದೆ. ನವೆಂಬರ್ 3 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ಆರ್ ಆರ್ ನಗರದಲ್ಲಿ ಬಿಜೆಪಿ ಗೆ ಬಂಡಾಯದ ಬಿಸಿ..?

ಆರ್ ಆರ್ ನಗರದಲ್ಲಿ ಬಿಜೆಪಿ ಗೆ ಸ್ವಪಕ್ಷದಲ್ಲೇ ಬಂಡಾಯದ ಬಿಸಿ ಏಳಲಿದೆ ಎನ್ನಲಾಗಿದೆ. ಮುನಿರತ್ನಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೇ ಮೂಲ ಬಿಜೆಪಿಗರು ಗರಂ ಆಗಿದ್ದಾರೆ ಎನ್ನಲಾಗಿದೆ. ತುಳಸಿ ಮುನಿರಾಜು ಗೌಡಗೆ ಟಿಕೆಟ್ ತಪ್ಪಿರುವುದರಿಂದ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ. ಇದಕ್ಕೆ ತೇಪೆ ಹಾಕಲು ಪ್ರಯತ್ನಿಸಿದ ಮುನಿರತ್ನ,  ತುಳಸಿ ಮೇಲೆ ವೈಯಕ್ತಿಕ ದ್ವೇಷ ಇಲ್ಲ ಎಂದು ತಿಳಿಸಿದ್ದರು.

ತಂದೆ ಮಗ, ಅಣ್ಣ ತಂಮ್ಮಂದಿರು, ಸ್ನೇಹಿತರು ಕೆಲವು ಸಲ ಜಗಳ ಆಡ್ತಾರೆ. ಮತ್ತೆ ಒಂದಾಗ್ತಾರೆ. ಹಾಗೆ ನಾವು ಒಂದೇ ಪಕ್ಷದಲ್ಲಿ ಇದ್ದೇವೆ ಒಟ್ಟಾಗಿ ಕೆಲಸ ಮಾಡ್ತೀವಿ. ಮುನಿರಾಜು ಗೌಡ ಅವರು ಆ ಸಂದರ್ಭದಲ್ಲಿ ಆ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜ. ವೈಯಕ್ತಿಕ ದ್ವೇಷ ಏನು ಇಲ್ಲ, ಅವರಿಗೂ ಮುಂದೆ ಒಳ್ಳೆಯದಾಗಲಿ ಎಂದು ತಿಳಿಸಿದರು. ಆದ್ರೆ ಇದೆಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

LEAVE A REPLY

Please enter your comment!
Please enter your name here