ಜೀವಸೆಲೆಯ ಆಗರ ನೋಡಬೇಕು ಇಲ್ಲಿಂದ..!

0
242

ಚಾರಣ ಪ್ರಿಯರಿಗೆ ಹೇಳಿಮಾಡಿಸಿದ ಪ್ರದೇಶವೊಂದು ಪ್ರವಾಸಿಗರಿಗೆ ಯಾವಾಗಲೂ ಹಾಟ್ ಫೇವರಿಟ್. ಅತ್ಮ ಮಲೆನಾಡು ಅಲ್ಲ ಇತ್ತ ಬಯಲು ಸಿಮೆಯೂ ಅಲ್ಲದ ಹಾಸನ ಜಿಲ್ಲೆಯಲ್ಲಿಯೇ ಇದೇ ಈ ಗಿರಿ ಶ್ರೇಣಿ.

ಪ್ರಕೃತಿಯ ಮಡಿಲಿನಲ್ಲಿರುವ ಈ ಪ್ರದೇಶ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಮತ್ತು ಸಕಲೇಶಪುರಕ್ಕೆ ಸಮೀಪವೇ ಇದೆ. ಇದು ಮನಮೋಹಕ ಬಿಸಿಲೆ ಘಾಟ್. ಪ್ರತಿ ವರ್ಷದ ಬೇಸಿಗೆಯಲ್ಲಿ ಮತ್ತು ತಮಪು ಹವೆಯ ಅನುಭವ ಪಡೆಯಲು ಹಸುರಿನ ವನರಾಶಿ ನೋಡಲು ಪ್ರವಾಇಗರು ಬಿಸಿಲೆಗೆ ಮುಗಿಬೀಳುತ್ತಾರೆ.

ಬೆಂಗಳೂರು ಮತ್ತು ಮೈಸೂರಿನಿಂದ ಪ್ರಯಾಣಿಸುವವರು ಸಕಲೇಶಪುರಕ್ಕೆ ಬಂದರೆ ಅಲ್ಲಿಂದ 50 ಕಿಲೋಮೀಟರ್ ಅಂತರದಲ್ಲೇ ಇದೆ ಬಿಸಿಲೆಘಾಟ್. ಜಗತ್ತಿನ ಜೀವರಾಶಿಯ ಶ್ರೀಮಂತ ನೆಲೆ ಪಶ್ಚಿಮ ಘಟ್ಟಗಳ ಸಾಲು ಇಲ್ಲಿಂದ ನೋಡಿದ್ರೆ ಸಿಗುವ ಆನಂದ ಮತ್ತು ಹೆಚ್ಚಿಸುವ ಕುತೂಹಲ ಕಾಡಿನ ಬಗೆಗಿನ ಹೊಸ ಚಿಂತನೆಗಳಿಗೆ ತೆರೆದಿಡುತ್ತದೆ. ದಟ್ಟಡವಿಯ ನಡುವಿನ ಅಂಕುಡೊಂಕಿನ ಹಾದಿ ಯುವ ಪ್ರವಾಸಿ ಉತ್ಸಾಹಿಗಳಿಗೆ ಥ್ರಿಲ್ ಕೊಡುತ್ತದೆ.

ಹೇಳಿ ಕೇಳಿ ಇದು ಘಾಟ್ ಇಲ್ಲಿ ಬೆಟ್ಟ ಗುಡ್ಡಗಳು ಮತ್ತು ಪ್ರಪಾತಗಳಿಗೇನು ಕಡಿಮೆಯಿಲ್ಲ. ಹಾದಿಯುದ್ದಕ್ಕೂ ಕಣ್ಣು ಬಿಟ್ಟಲ್ಲೆಲ್ಲ ಕಾಣಸಿಗೋದು ಹಸಿರು ಮತ್ತು ಪ್ರಪಾತಗಳು. ಎಚ್ಚರಿಕೆಯ ಹೆಜ್ಜೆ ಇಟ್ಟು ಕಿವಿ ಕಣ್ಣುಗಳನ್ನು ಸೂಕ್ಷ್ಮ ಮಾಡಿಕೊಂಡರೆ ಕಾಡಿನ ಮಾತುಗಳನ್ನು ಕೇಳಬಹುದು ಅಂತಾರೆ ಕೆಲವರು. ದಟ್ಟ ಕಾನನದ ಮಧ್ಯೆ ಅರಣ್ಯ ಇಲಾಖೆ ನಿರ್ಮಿಸಿರುವ ವಾಚ್ ಟವರ್ ಎರಡು ಅಂತಸ್ಥಿನ ಕಟ್ಟಡದಲ್ಲಿ 360 ಡಿಗ್ರಿಗೂ ಕಣ್ಣು ಹಾಯಿಸಬಹುದು ಅಲ್ಲಿ ಗೋಚರವಾಗುವ ಅರಣ್ಯದ ಅಗಾದತೆ ಅಧ್ಬುತ. ಇಲ್ಲಿಂದ ನೋಡಿದ್ರೆ ಕಾಣಬಹುದಾಗಿದೆ ಮೂರು ಜಿಲ್ಲೆಗಳ ನಿಸರ್ಗ ಸೃಷ್ಠಿಸಿದ ಹಸಿರ ಸಿರಿ. ಇಲ್ಲಿಂದ ಕಾಣುವ ಪುಷ್ಪಗಿರಿ ಬೆಟ್ಟ, ಕುಮಾರ ಪರ್ವತ ಮತ್ತು ಪಟ್ಟ ಬೆಟ್ಟ ಸೋಜಿಗಲ್ಲಿನಂತೆ ಸೆಳೆಯುತ್ತದೆ.
ಕಾಡಿನ ಮಡಿಲಲ್ಲಿ ಹರಿಯುವ ನೀರಿನ ತೊರೆಗಲು ಮತ್ತು ಕಿವಿಯನ್ನೇ ಸೀಳಿ ಬೀಸುವ ಗಾಳಿ ವನ್ಯ ಮೃಗಗಳ ಶಬ್ದ ಹಕ್ಕಿ ಪಕ್ಷಿಗಳ ಚಿಲಿಪಿಲಿ ಎಲ್ಲವೂ ಇಲ್ಲಿನ ನಿಸರ್ಗ ಸೃಷ್ಠಿಸಿದ ಸಂಗೀತಗೋಷ್ಠಿಯೇ ಆಗಿದೆ.

ಬಿಸಿಲೆ ದಟ್ಟಾರಣ್ಯದ ನಡುವಿನ ಚಲುವು, ಆ ಕಾರಣಕ್ಕೆ ಇಲ್ಲಿಗೆ ಹೋಗಲು ಅರಣ್ಯ ಇಲಾಖೆ ಅನುಮತಿ ಬೇಕಿದೆ. ಕಗ್ಗತ್ತಲ ರಾತ್ರಿಯಲ್ಲಿ ಸಂಚಾರ ನಿರ್ಬಂಧ. ಆದರೆ ನಿಗದಿತ ಸಮಯದಲ್ಲೇ ಹೋದ್ರೆ ಸುಂದರ ಕ್ಷಣಗಳನ್ನು ಕಳೆಯಬಹುದಾಗಿದೆ. ಬಿಸಿಲೆ ನಿಸರ್ಗದ ಬಹುವರ್ಣಗಳನ್ನು ತೋರಿಸುವುದರಲ್ಲಿ ಸಂಶಯವಿಲ್ಲ.

LEAVE A REPLY

Please enter your comment!
Please enter your name here