‘ಪಾಕಿಸ್ತಾನದ ಬಾಲಾಕೋಟ್ ಉಗ್ರರು’ ರೂಪಿಸಿರುವ ಸಂಚು ಕುರಿತು ಬಿಪಿನ್ ರಾವತ್ ಅವರು ಹೇಳಿದ್ದೇನು ಗೊತ್ತಾ.?

0
175

ಪಾಕಿಸ್ತಾನದ ಬಾಲಕೋಟ್ ಉಗ್ರರು ಷಡ್ಯಂತ್ರ ರೂಪಿಸುವ ಪ್ರಮುಖ ಸ್ಥಳ. ಈ ಹಿಂದೆ ಯಾವ ರೀತಿಯಲ್ಲೂ ಅಷ್ಟು ಕೆಲಸ ಮಾಡದ ಉಗ್ರರು ಈಗ ಬಾಲಕೋಟ್ನಲ್ಲಿ ಉಗ್ರರ ಕಾರ್ಖಾನೆಯನ್ನು ಮತ್ತೆ ಪ್ರಾರಂಭ ಮಾಡಿದ್ದಾರೆ. ಭಾರತದ ಮೇಲೆ ಪ್ರತಿ ಬಾರಿ ಏನಾದರೂ ಒಂದು ಸಂಚನ್ನು ರೂಪಿಸುವ ಪಾಕಿಸ್ತಾನವು ಈ ಬಾರಿ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗಿದೆ ಉಗ್ರರ ನೆಲೆಗಳು ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಭಾರತ ಭೂಸೇನೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರು ತಿಳಿಸಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಅವರು ಉಗ್ರರು ಹಲವು ಷಡ್ಯಂತ್ರಗಳನ್ನು ರೂಪಿಸಿಕೊಂಡು ಭಾರತವನ್ನು ಪ್ರವೇಶಿಸಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ದೊರೆತಿದೆ ಎಂದು ಹೇಳಿದ್ದಾರೆ.

೫೦೦ರಕ್ಕೂ ಹೆಚ್ಚು ಪಾಕಿಸ್ತಾನದ ಉಗ್ರರು ಜಮ್ಮು ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳಲು ಸಜ್ಜಾಗಿದ್ದಾರೆ ಉಗ್ರರು ಮಾಡುತ್ತಿರುವ ಪ್ರತಿಯೊಂದು ವಿಷಯವೂ ನಮಗೆ ಸ್ಪಷ್ಟವಾಗಿ ತಿಳಿದಿದೆ ಅವರು ಭಾರತದ ಮೇಲೆ ಯಾವ ರೀತಿಯಲ್ಲಿ ಪ್ಲಾನ್ ಮಾಡುತ್ತಿದ್ದಾರೆ ಹಾಗೂ ಅವರು ಸಕ್ರಿಯವಾಗಿರುವ ವಿಚಾರಗಳ ಮಾಹಿತಿ ಭಾರತೀಯ ಸೇನೆಗೆ ಲಭಿಸಿದೆ ಈ ಪ್ರಾಂತ್ಯಗಳಲ್ಲಿ ನಾವು ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಿದ್ದೇವೆ ದೇಶದ ವಿಷಯಕ್ಕೆ ಬಂದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಮತ್ತೊಮ್ಮೆ ಬಾಲ ಕೋಟೆಗೆ ನುಗ್ಗಿ ಹೊಡೆಯಲು ಯಾವುದೇ ಹಿಂಜರಿಕೆಯೂ ನಮಗಿಲ್ಲ.! ಉಗ್ರರು ಭಾರತ ನುಸುಳುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ ಹಾಗಾಗಿ ಪ್ರತಿಯೊಂದು ಭಾಗಕ್ಕೂ ನಮ್ಮ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here