ಬಿಲ್ ಗೇಟ್ಸ್ ಪ್ರಪಂಚದ ಅತಿ ದೊಡ್ಡ ಶ್ರೀಮಂತನಾದ ಕಥೆ…!

0
377

ಬಿಲ್ ಗೇಟ್ಸ್ ಪ್ರಪಂಚದ ಅತಿ ದೊಡ್ಡ ಧನವಂತರು
ಸಾಫ್ಟ್ ವೇರ್ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿರುವ ರಾಜ ಒಂದಲ್ಲ ಎರಡಲ್ಲ ಹದಿನೆಂಟು ವರ್ಷಗಳಿಂದ ಪ್ರಪಂಚದ ಅತಿ ದೊಡ್ಡ ಧನವಂತದಲ್ಲಿ ಮೊದಲನೆ ಸ್ಥಾನವನ್ನು ಪಡೆದಿರುವ ವ್ಯಕ್ತಿ. ಅವರು ಒಂದು ದಿನಕ್ಕೆ 6 ಕೋಟಿಯನ್ನು ಖರ್ಚು ಮಾಡೋದಕ್ಕೆ ಸ್ಟಾರ್ಟ್ ಮಾಡಿದರೆ ಅವರ ಆಸ್ತಿಯನ್ನು ಖಾಲಿ ಮಾಡೋದಿಕ್ಕೆ ನಿನ್ನೂರ 218 ವರ್ಷ ಬೇಕಾಗುತ್ತಂತೆ.5 ಲಕ್ಷ 76 ಸಾವಿರ ಕೋಟಿ ಆಸ್ತಿಯಿಂದ ಈಗಲೂ ಅವರು ನಮ್ಮ ಪ್ರಪಂಚದ ಅತಿ ದೊಡ್ಡ ಧನವಂತರಲ್ಲಿ ನಂಬರ್ ವನ್ ಆಗಿದ್ದಾರೆ. ಇಂತಹ ವ್ಯಕ್ತಿಯ ಜೀವನ ಚರಿತ್ರೆ ಬಗ್ಗೆ ಹೇಳ್ತೀವಿ ಬನ್ನಿ..

ಬಿಲ್ ಗೇಟ್ಸ್ 28 ಅಕ್ಟೋಬರ್ 1955 ಅಮೆರಿಕಾದ ವಾಷಿಂಗ್ಟನ್ನಲ್ಲಿ ಹುಟ್ಟುತ್ತಾರೆ. ಚಿಕ್ಕಂದಿನಿಂದ ಬಿಲ್ ಗೇಟ್ಸ್ ಗೆ ಮ್ಯಾಕ್ಸ್ ಮತ್ತು ಕಂಪ್ಯೂಟರ್ ಅಂದ್ರೆ ತುಂಬಾ ಇಷ್ಟ. ಆತ 13 ವರ್ಷದ ವಯಸ್ಸಿನಲ್ಲಿ ಒಂದು ಗೇಮ್’ಗೆ ಪೋಗ್ರಾಂ ಬರೀತಾರೆ. ಆತ ಹೈಸ್ಕೂಲ್ ಓದುತ್ತಿರುವಾಗ ಪಾಲ್ ಅಲೆನ್ ಅನ್ನುವ ವ್ಯಕ್ತಿ ಜೊತೆ ಸ್ನೇಹ ಆಗುತ್ತೆ. ಈತನಿಗೂ ಕೂಡ ಕಂಪ್ಯೂಟರ್ ಅಂದ್ರೆ ತುಂಬಾ ಇಷ್ಟ ಇರುತ್ತೆ, ಇಬ್ಬರು ಕೂಡ ಕಂಪ್ಯೂಟರ್ ಬಗ್ಗೆ ಹೆಚ್ಚಿಗೆ ಆಲೋಚನೆ ಮಾಡುತ್ತಿರುತ್ತಾರೆ, ಕೆಲವು ಕಂಪ್ಯೂಟರಿಗೆ ಸಂಬಂಧಪಟ್ಟ ಪೋಗ್ರಾಮ್ ಕೂಡ ಬರೀತಿರುತ್ತಾರೆ.

ಬಿಲ್ ಗೇಟ್ಸ್ ತಂದೆ ತಾಯಿಗೆ ಅವರನ್ನು ವಕೀಲರು ಮಾಡುವ ಆಸೆ ಆದರೆ ಬಿಲ್ ಗೇಟ್ಸ್ ಗೆ ಕಂಪ್ಯೂಟರ್ ಅಂದ್ರೆ ತುಂಬಾ ಇಷ್ಟ
ಆದರೆ ತಂದೆ ತಾಯಿಯ ಆಸೆಯ ಮೇರೆಗೆ ಹಾರ್ವರ್ಡ್ ಯುನಿವರ್ಸಿಟಿ ನಲ್ಲಿ ಸೇರಿಕೊಳ್ಳುತ್ತಾರೆ. ಒಂದು ದಿನ ಆಕಸ್ಮಿಕವಾಗಿ ಪಾಪುಲರ್ ಎಲೆಕ್ಟ್ರಾನಿಕ್ಸ್ ಎನ್ನುವ ಮ್ಯಾಗ್ಜಿನ್ ನೋಡುತ್ತಾರೆ ಅದರ ಮೇಲೆ ALTAIR 8800 ಎನ್ನುವ ಒಂದು ಕಂಪ್ಯೂಟರ್ ಜಾಹೀರಾತನ್ನು ನೋಡ್ತಾರೆ
ಆ ಕಂಪ್ಯೂಟರ್ ಗೋಸ್ಕರ ಸಾಫ್ಟ್ವೇರ್ ಹುಡುಕುತ್ತಿದ್ದಾರೆ ಅಂತ ಬಿಲ್ ಗೇಟ್ಸ್’ಗೆ
ಗೊತ್ತಾಗುತ್ತೆ ಆಗ ಪಾಲ್ ಅಲೆನ್ ಮತ್ತು ಬಿಲ್ ಗೇಟ್ಸ್ ಸೇರಿ ALTAIR ಕಂಪನಿಯನ್ನು ಭೇಟಿಯಾಗಿ ಆ ಸಾಫ್ಟ್ವೇರನ್ನು ಕೊಡುವುದಾಗಿ ತಿಳಿಸುತ್ತಾರೆ ಆಗ ಸ್ನೇಹಿತರಿಬ್ಬರು ಸೇರಿ ಹಾರ್ವರ್ಡ್ ಯುನಿವರ್ಸಿಟಿ ಕಂಪ್ಯೂಟರ್ ಸೆಂಟರ್ನಲ್ಲಿ ಎರಡು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಶ್ರಮಿಸಿ ಸಾಫ್ಟ್’ವೇರನ್ನು ರೆಡಿ ಮಾಡ್ತಾರೆ. ಅದು ALTAIR ಅನ್ನುವ ಕಂಪ್ಯೂಟರ್ನಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತೆ ಅಂದಿನ ಕಾಲದಲ್ಲಿ ಅದು ತುಂಬಾ ಫೇಮಸ್ ಕೂಡ ಆಗುತ್ತೆ ಆ ಇಬ್ಬರು ಸ್ನೇಹಿತರಿಗೆ ಒಳ್ಳೆಯ ಹೆಸರು ಕೂಡ ಬರುತ್ತೆ ಆಗ ಇಬ್ಬರು ಸೇರಿ 1975ನೇ ಇಸವಿಯಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಸ್ಟಾರ್ಟ್ ಮಾಡ್ತಾರೆ, ಆಗ ಬಿಲ್ ಗೇಟ್ಸ್ ನ ವಯಸ್ಸು ಕೇವಲ 19 ವರ್ಷ ಆಗಿನ ಕಾಲದಲ್ಲಿ ಹೆಚ್ಚು ಕಂಪ್ಯೂಟರ್ ಸೇಲ್ ಮಾಡುವ ಐಬಿಎಂ ಕಂಪನಿ ಅವರು ಬಿಡುಗಡೆ ಮಾಡುವ ಪರ್ಸನಲ್ ಕಂಪ್ಯೂಟರ್ ಗೆ ಒಂದು ಆಪರೇಟಿಂಗ್ ಸಿಸ್ಟಮ್ ಬೇಕೆಂದು ಬಿಲ್ ಗೇಟ್ಸ್’ಗೆ ಹೇಳ್ತಾರೆ ಆಗ ಬಿಲ್ ಗೇಟ್ಸ್ ಆಗ ರನ್ನಿಂಗ್’ನ್ನಲ್ಲಿ ಇರೋ ಆಪರೇಟಿಂಗ್ ಸಿಸ್ಟಮನ್ನು 50 ಸಾವಿರ ಡಾಲರ್ ಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿ ಮಾಡಿ MICROSOFT MS-DOS OPERATING SYSTEM ಎನ್ನುವ ಹೆಸರಿನಲ್ಲಿ ಐಬಿಎಂ ಕಂಪನಿಗೆ ಕೊಡ್ತಾರೆ.

ಹೀಗೆ ಮೈಕ್ರೋಸಾಫ್ಟ್ ಬೆಳಿತ ಬೆಳಿತ ಕೆಲವು ದಿನಗಳಲ್ಲಿ ಮಿಲಿಯನ್ ಡಾಲರ್ ಕಂಪನಿಯಾಗುತ್ತೆ. ಮೈಕ್ರೋಸಾಫ್ಟ್ ಕಂಪನಿಯ ಅಭಿವೃದ್ಧಿಗಾಗಿ ಹಾರ್ವರ್ಡ್ ಯೂನಿವರ್ಸಿಟಿ ವಿದ್ಯಾಭ್ಯಾಸವನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯ್ತು ಬಿಲ್ ಗೇಟ್ಸ್ ನಂತರ 1986 ರಲ್ಲಿ ಬಿಲ್ ಗೇಟ್ಸ್ ಅವರು ಮೈಕ್ರೋಸಾಫ್ಟ್ ವಿಂಡೋಸ್ ಅನ್ನು ಮಾರ್ಕೆಟ್ಗೆ ತರ್ತಾರೆ, ವಿಂಡೋಸ್ ಬಿಡುಗಡೆಯ ನಂತರ ಸಾಫ್ಟ್’ವೇರ್ ಸಾಮ್ರಾಜ್ಯವನ್ನು ಅವರ ಸ್ವಂತ ಮಾಡಿಕೊಳ್ತಾರೆ.

ಬಿಲ್ ಗೇಟ್ಸ್’ಗೆ 30 ವರ್ಷಗಳ ಒಳಗೆ ಮಿಲಿಯನಿರ್ ಆಗುವ ಆಸೆ ಆದರೆ ಅವರು 31 ನೇ ವರ್ಷಕ್ಕೆ ಬಿಲಿಯನೇರ್ ಆಗ್ತಾರೆ. ಆಗಿನ ದಿನಗಳಲ್ಲಿ 95% ಪರ್ಸೆಂಟ್ ಆಪರೇಟಿಂಗ್ ಸಿಸ್ಟಮ್ ಮಾರ್ಕೆಟ್ ಮೈಕ್ರೋಸಾಫ್ಟ್ ಕೈಯಲ್ಲಿತ್ತು. ಬಿಲ್ ಗೇಟ್ಸ್ ಮಾರ್ಕೆಟ್ಗೆ ಮೈಕ್ರೋಸಾಫ್ಟ್ ಬಿಟ್ಟು ಬೇರೆ ಯಾವ ಆಪರೇಟಿಂಗ್ ಸಿಸ್ಟಮನ್ನು ಬರದ ಹಾಗೇ ಮಾಡ್ತಿದ್ದಾರೆ ಅಂತ ತುಂಬಾ ಕಂಪನಿಗಳು ಕೋರ್ಟ್ ಮೆಟ್ಟಿಲೇರುತ್ತದೆ ತುಂಬಾ ದಿನಗಳ ಕಾಲ ಕೇಸ್ ಕೂಡ ನಡೆಯುತ್ತದೆ ಆದರೆ ಇದಕ್ಕೆಲ್ಲಾ ಬಿಲ್ ಗೇಟ್ಸ್ ಭಯ ಬೀಳುವುದಿಲ್ಲ.

ಆಗ ಇಂಟರ್ನೆಟ್ ಹೊಸದಾಗಿ ಜನಗಳಿಗೆ ಪರಿಚಯ ಆಗುವ ದಿನಗಳು ಆ ಸಮಯದಲ್ಲಿ ಇಂಟರ್ನೆಟ್ ಎಕ್ಸ್’ಫ್ಲೋರರ್ ಅನ್ನುವ ಸರ್ಚ್ ಇಂಜಿನ್ ಮತ್ತು ಬ್ರೌಸರನ್ನು ಸ್ಟಾಕ್ ಮಾಡ್ತಾರೆ. ಈ ರೀತಿ ಕಾಲಕ್ಕೆ ತಕ್ಕಂತೆ ಮೈಕ್ರೋಸಾಫ್ಟ್ ಕಂಪನಿಯನ್ನು ಅಭಿವೃದ್ಧಿ ಮಾಡ್ತಾ ಬರ್ತಾರೆ. ಹೀಗೆ 1994 ರಲ್ಲಿ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡೋ ಮಿಲಿಂಡ ರನ್ನು ಮದುವೆ ಆಗ್ತಾರೆ. ಕಾಲಕ್ಕೆ ತಕ್ಕಂತೆ ಮಾಡೋ ಅವರ ಕೆಲಸದ ಜೊತೆ ಅವರ ಆಸ್ತಿ ಕೂಡ ಬೆಳೆಯುತ್ತಾ ಬರುತ್ತೆ. ಎಷ್ಟು ಅಂದ್ರೆ ಇಂದಿನ 23 ವರ್ಷಗಳಲ್ಲಿ 18 ಬಾರಿ ಪ್ರಪಂಚದ ಅತಿ ದೊಡ್ಡ ಧನವಂತರಾಗುವಷ್ಟು. ಈ ವರ್ಷ ಕೂಡ 88.9 ಬಿಲಿಯನ್ ಡಾಲರ್ ಆಸ್ತಿಯಿಂದ ಪ್ರಪಂಚದ ನಂಬರ್ ವನ್ ಧನವಂತರಾಗಿದ್ದಾರೆ.

ಇವರಿಗೆ ಸಂಪಾದ್ನೆ ಮಾಡೋದು ಒಂದು ದಾರಿಯಾದರೆ ಜನರ ಸೇವೆ ಮಾಡೋದು ಕೂಡ ಒಂದು ದಾರಿ ತಾನು ಮಾಡುವ ಸಂಪಾದನೆ ಪ್ರಪಂಚದ ಅಭಿವೃದ್ಧಿಗೆ ಬಳಸಿದರೇನೆ ತಾನು ಮಾಡುವ ಸಂಪಾದನೆಗೆ ಒಂದು ಅರ್ಥ ಇರುತ್ತೆ ಅಂತ ಭಾವಿಸಿ ಬಿಲ್ಲ ಅಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ ಅನ್ನುವ ಸೇವಾ ಸಂಸ್ಥೆಯನ್ನು ಸ್ಟಾರ್ಟ್ ಮಾಡ್ತಾರೆ. ಪ್ರಪಂಚದಾದ್ಯಂತ ವಿದ್ಯಾಭ್ಯಾಸ, ಬಡತನ , ಹಸಿವು , ವ್ಯವಸಾಯ ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ. ಇವರು ಈ ಫೌಂಡೇಶನ್ ಗೆ 28 ಬಿಲಿಯನ್ ಡಾಲರ್ಸ್ ಅಂದ್ರೆ 1 ಲಕ್ಷ 80 ಸಾವಿರ ಕೋಟಿ ಆಸ್ತಿಯನ್ನು ದಾನ ಮಾದಿದ್ದಾರೆ ಈ ರೀತಿ ಪ್ರಪಂಚದ ಎಷ್ಟೋ ಜನರ ಬಾಳಿನಲ್ಲಿ ಬೆಳಕಾಗ್ತಾರೆ.

2035 ರ ಒಳಗೆ ಪ್ರಪಂಚದ ಎಲ್ಲ ದೇಶಗಳಲ್ಲಿ ಬಡತನವನ್ನು ನಿರ್ಮೂಲನೆ ಮಾಡಬೇಕೆಂಬುದೇ ಅವರ ಆಸೆ. ನಮ್ಮಲ್ಲಿ ತುಂಬಾ ಜನ ಮಕ್ಕಳಿಗೆ ಮೊಮ್ಮಕ್ಕಳಿಗೆ ಅವರ ಮಕ್ಕಳಿಗೆ ಆಗುವಷ್ಟು ಆಸ್ತಿಯನ್ನು ಮಾಡಬೇಕು ಅಂದು ಕೊಳ್ತಾರೆ. ಆದ್ರೆ ಬಿಲ್ ಗೇಟ್ಸ್ ಹಾಗಲ್ಲ ಅವರ ಹತ್ತಿರ ಲಕ್ಷಾಂತರ ಕೋಟಿ ಆಸ್ತಿ ಇದ್ದರೂ ತನ್ನ ಮೂರು ಮಕ್ಕಳಿಗೆ ಒಬ್ಬೊಬ್ಬರಿಗೆ 10 ಮಿಲಿಯನ್ ಡಾಲರ್ ಮಾತ್ರ ಸಿಗುವಷ್ಟು ವಿಲ್ ಬರೀತಾರೆ.

ಉಳಿದ ಹಣವನ್ನು ಬಿಲ್ಲ್ ಅಂಡ್ ಮಿಲಿಂಡಾ ಫೌಂಡೇಶನ್ ಗೆ ಬರೀತಾರೆ. ಯಾಕೆ ಅಂದ್ರೆ ಅವರ ಮಕ್ಕಳು ಅವರ ಸ್ವಂತ ಬುದ್ಧಿಯಿಂದ ಆಸ್ತಿ ಮಾಡ್ಬೇಕು ಅಂದ್ರೆ ಅವರ ಕಾಲ ಮೇಲೆ ಅವರೇ ನಿಲ್ಲಬೇಕು ಎಂಬುದೇ ಅವರ ಆಸೆ ಅಷ್ಟೇ ಅಲ್ಲ ಬಿಲ್ ಗೇಟ್ಸ್ ತನ್ನ ಸ್ನೇಹಿತನಾದ ಪ್ರಪಂಚದ ಎರಡನೇ ಅತಿ ದೊಡ್ಡ ಧನವಂತರಾದ ವಾರೆನ್ ಬಫೆಟ್ ಜೊತೆ ಸೇರಿ ದ ಗಿವಿಂಗ್ ಪ್ಲೆಡ್ಜ್ ಆರ್ಗಾನೈಸೇಷನ್ ಅನ್ನು ಸ್ಟಾರ್ಟ್ ಮಾಡ್ತಾರೆ ಈ ರೀತಿ ಪ್ರಪಂಚದಲ್ಲಿರುವ ಎಲ್ಲಾ ಧನವಂತರನ್ನು ಈ ಸೇವಾ ಸಂಸ್ಥೆಗೆ ಸಹಾಯ ಮಾಡಿ ಅಂತ ಕರಿತಾರೆ ಆಗ 170 ಮಂದಿಗಿಂತ ಹೆಚ್ಚು ಧನವಂತರು ಈ ಸೇವಾ ಸಂಸ್ಥೆಗೆ ಸಹಾಯ ಮಾಡೋದಕ್ಕೆ ಮುಂದೆ ಬರ್ತಾರೆ.

ಈ ರೀತಿ ಹಾರ್ವರ್ಡ್ ಯೂನಿವರ್ಸಿಟಿ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ಬಿಟ್ಟ ಬಿಲ್ ಗೇಟ್ಸ್ ಮೈಕ್ರೊಸಾಫ್ಟ್ ಅನ್ನು ಸಾಮ್ರಾಜ್ಯವನ್ನು ಸೃಷ್ಟಿ ಮಾಡಿ ಪ್ರಪಂಚದ ಅತಿ ದೊಡ್ಡ ಧನವಂತರಾಗ್ತಾರೆ. ನಾವು ಮಾಡೋ ಕೆಲ್ಸನಾ ಇಷ್ಟಪಟ್ಟು ಮಾಡ್ಬೇಕು ಇಷ್ಟಪಟ್ಟು ಮಾಡುವ ಕೆಲಸ ಎಷ್ಟೇ ಕಷ್ಟ ಇದ್ದರೂ ಅದರಲ್ಲಿರುವ ಶ್ರಮ ನಮಗೆ ಗೊತ್ತಾಗುವುದಿಲ್ಲ ಇಷ್ಟ ಇಲ್ಲದಿರುವ ಕೆಲ್ಸನಾ ಎಷ್ಟೇ ಕಷ್ಟಪಟ್ಟು ಮಾಡಿದರೂ ಕೂಡ ಆ ಒಂದು ಪ್ರತಿಫಲ ನಮಗೆ ಸಿಗುವುದಿಲ್ಲ

ತುಂಬಾ ಜನ ತಂದೆ ತಾಯಿ ಅವರ ಮಕ್ಕಳನ್ನು ಡಾಕ್ಟರ್ ಮಾಡ್ಬೇಕು , ಇಂಜಿನಿಯರ್ ಮಾಡ್ಬೇಕು , ಲಾಯರು ಮಾಡ್ಬೇಕು ಅಂದು ಕೊಳ್ತಾರೆ. ಆದ್ರೆ ಅದು ಮಕ್ಕಳಿಗೆ ಇಷ್ಟ ಇರೋದಿಲ್ಲ ಅವರಿಗೆ ಇಷ್ಟ ಇರುವ ಕೆಲಸಾನ ಮಾಡೋದಕ್ಕೆ ನೀವು ಪ್ರೋತ್ಸಾಹ ಕೊಟ್ಟರೆ ಖಂಡಿತಾ ಅವರು ಒಂದಲ್ಲ ಒಂದು ದಿನ ಸಾಧನೆಯನ್ನು ಫಲಕಾನ ನಿಮ್ಮ ಕಣ್ಮುಂದೆ ತರ್ತಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here