ಹೌದು ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ಮರಿಯಾ ಮಂಡಲ್ ದ ಭವಿಷ್ಯ ಬದಲಾಗಿದೆ .. ರೈಲು ಚಲಿಸುವಾಗ ಬೆಂಚ್ ಮೇಲೆ ಕುಳಿತು ಲತಾ ಮಂಗೇಶ್ಕರ್ ಅವರ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ಹಾಡನ್ನು ಹಾಡುತ್ತಿರುವುದನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಲು ಬಿಟ್ಟಿದ್ದ .. ಈ ವಿಡಿಯೋ ದೇಶಾದ್ಯಂತ ಸಖತ್ ವೈರಲ್ ಆಗಿತ್ತು ..ಈ ವಿಡಿಯೋವನ್ನು ನೋಡಿದ ಗಾಯಕಿಯರು ಮತ್ತು ಸಿನಿಮಾ ರಂಗದವರು ಬೆರಗಾಗಿದ್ದರು..

ಸಾಮಾಜಿಕ ಜಾಲತಾಣಗಳು ಎಷ್ಟು ಮುಖ್ಯ ಹಾಗೂ ಯಾವ ಮಟ್ಟಿಗೆ ಪಾತ್ರ ನಿರ್ವಹಿಸುತ್ತದೆ ಎಂಬುದು ಈ ಭಿಕ್ಷುಕಿ ಯಿಂದ ಗೊತ್ತಾಗುತ್ತದೆ.ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಮಂಡಲ್ ಅವರು ಈಗ ರಾಣು ಸೂಪರ್ಸ್ಟಾರ್ ಸಿಂಗರ್ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೂ ಇವರ ಮೊದಲ ಹಾಡು ರೆಕಾರ್ಡ್ ಮಾಡಲಾಗಿದ್ದು ಆ ಶೋ ನ ತೀರ್ಪುಗಾರರಾದ ಸಂಗೀತ ನಿರ್ದೇಶಕ ಹಾಗೂ ಗಾಯಕ ಹಿಮೇಶ್ ರೆಶಮಿಯಾ ಅವರ ಮನ ಸೆಳೆದಿದೆ!
ತಮ್ಮ ಮುಂದಿನ ಚಿತ್ರವಾದ ‘ಹ್ಯಾಪಿ ಹಾರ್ಡಿ ಅಂಡ್ ಹೀರ್’ಚಿತ್ರದಲ್ಲಿ ಅವಕಾಶ ನೀಡಿದ್ದಾರೆ.
ಇನ್ನು ಮಂಡಲ್ ರವರು ರಾಣು ಸೂಪರ್ಸ್ಟಾರ್ ಸಿಂಗರ್ ಶೋ ನಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಾಡಿಗಾರ್ಡ್ ಸಿನಿಮಾದ ‘ತೇರಿ ಮೇರಿ ಕಹಾನಿ’ ಹಾಡನ್ನು ಹಾಡಿದ್ದರು ! ಇನ್ನು ಇವರ ಸಾಧನೆಗೆ ಮತ್ತು ಹಾಡಿದ ವೈಖರಿಗೆ ತೀರ್ಪುಗಾರರು ಮತ್ತು ಸಂಗೀತ ಪ್ರಿಯರು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ .
ಹಿಮೇಶ್ ರೆಶಮಿಯಾ ಅವರು ನೀಡಿರುವ ಅವಕಾಶದ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ