ಬಿಹಾರದಲ್ಲಿ ೨ನೇ ಹಂತದ ಮತದಾನ : ಮತ್ತೆ ಗೆಲ್ಲುತ್ತಾ ಮೋದಿ-ನಿತೀಶ್ ಜೋಡಿ…!

0
60

ದೇಶದ ರಾಜಕೀಯದಲ್ಲಿ ತೀವ್ರ ಚರ್ಚೆಯಲ್ಲಿದ್ದ ಬಿಹಾರ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು ಗೆಲುವಿನ ಮಾಲೆ ಯಾವ ಪಕ್ಷಗಳ ಕೊರಳಿಗೆ ಬೀಳಲಿದೆ ಎಂದು ಮತದಾರರು ನಿರ್ಧರಿಸಲಿದ್ದಾರೆ. ದೇಶದ 10 ರಾಜ್ಯಗಳ ಸುಮಾರು 54 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದ್ದು ಮತದಾರರು ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ.
ಬಿಹಾರದ 17 ಜಿಲ್ಲೆಯ 94 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು ಬಿಹಾರದಲ್ಲಿ ಯಾವ ಸರ್ಕಾರ ಗೆಲುವಿನ ನಗೆ ಬೀರಿ ಸರ್ಕಾರ ರಚನೆ ಮಾಡಲಿದೆ ಎನ್ನುವುದು ಈ ಚುನಾವಣೆಯಿಂದ ನಿರ್ಧಾರವಾಗಲಿದ್ದು 2.86 ಕೋಟಿ ಮತದಾರರು 1483 ಅಭ್ಯರ್ಥಿಗಳ ಅಧಿಕಾರದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪ್ರತಿಬಾರಿ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತಿದ್ದ ಮತದಾನ ಪ್ರಕ್ರಿಯೇ ಈ ಬಾರಿ ಕೊರೋನಾ ಕಾರಣದಿಂದಾಗಿ 1 ಗಂಟೆ ಮತದಾನದ ಸಮಯವನ್ನು ಹೆಚ್ಚಿಸಲಾಗಿದೆ. ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೊರೊನಾ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಮಾಡಿರುವ ಕಾರಣ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.


ಇನ್ನು ಕೊರೊನಾ ಸೋಂಕಿನ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದ್ದು ಅದರ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. 80ವರ್ಷಕ್ಕೂ ಹೆಚ್ಚಿನ ವಯಸ್ಸಿನ ಮತದಾರರಿಗೆ ಅಂಚೆ ಮೂಲಕ ಮತಚಲಾಯಿಸುವ ವ್ಯವಸ್ಥೆ ರೂಪಿಸಲಾಗಿದೆ. ಬಿಹಾರದ ಕೆಲವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಬಿಗಿ ಭದ್ರತೆ ರೂಪಿಸಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲಾಗಿದೆ.

ಬಿಜೆಪಿ 46 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಭವಿಷ್ಯ ನಿರ್ಧರವಾಗಲಿದ್ದು, ಮಿತ್ರ ಪಕ್ಷ ಜೆಡಿಯು 43 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದೆ. ವಿಐಪಿ 5 ಕ್ಷೇತ್ರಗಳಲ್ಲಿ ಸ್ಪರ್ಥಿಸಲಿದ್ದು, ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಆರ್‍ಜೆಡಿ 56 ಹಾಗೂ ಸಿಪಿಐಎಂಎಲ್ 6 ಸಿಪಿಐ 4 ಮತ್ತು ಸಿಪಿಎಂ4 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಈ ಚುನಾವಣೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದೆ.

ಆರ್‍ಜೆಡಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಘೋಪುರ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ಯಾದವ್ 1995 ಹಾಗೂ 2000ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2005ರಲ್ಲಿ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ಡಿ ದೇವಿ ಗೆಲುವು ಪಡೆದಿದ್ದರು. ಈ ಬಾರಿ ಕ್ಷೇತ್ರದಲ್ಲಿ ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಸ್ವಿ ಯಾದವ್ ಸ್ಪರ್ಧಿಸುತ್ತಿರುವುದು ಮತದಾನ ಕ್ಷೇತ್ರ ಮತ್ತಷ್ಟು ರಂಗು ಪಡೆದಿದೆ. ಕಳೆದ ಬಾರಿ 2015ರ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ಕ್ಷೇತ್ರದಿಂದ ಸ್ಪರ್ಥಿಸಿ ಆಯ್ಕೆಯಾಗಿದ್ದರು.

ಕಳೆದ 6 ಬಾರಿ ಪಾಟ್ನಾ ಸಾಹೀಬ್ ಕ್ಷೇತ್ರದಿಂದ ಭಾಗವಹಿಸಿ ಗೆಲುಪು ಪಡೆದಿದ್ದ ವಿಜೆಪಿ ಅಭ್ಯರ್ಥಿ ಮಂತ್ರಿ ನಂದ ಕಿಶೋರ್ ಯಾದವ್ ಈ ಬಾರಿಯು ತಮ್ಮದೇ ಕ್ಷೇತ್ರದಲ್ಲಿ ಭಾಗವಹಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಮೂರನೇ ಹಂತದ ಮತದಾನ ನವೆಂಬರ್ 7ರಂದು ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದ್ದು ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದೆ.

LEAVE A REPLY

Please enter your comment!
Please enter your name here