ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಈಗ ಹೀರೋ.!

0
285

ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತರಾದ ಕೃಷಿಕ ಶಶಿಕುಮಾರ್, ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. ಮೆಹಬೂಬಾ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಲಿರುವ ಶಶಿ ಕುಮಾರ್ ಅವರ ಈ ಚಿತ್ರಕ್ಕೆ ಅನೂಪ್ ಆಂಟನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವೆಂದರೆ ಆಂಟನಿ ಪಾಲಿಗೆ ಸಹ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿರಲಿದೆ.

 

ರೋಮ್ಯಾಂಟಿಕ್ ಪ್ರೇಮಕಥೆ ಎಂದು ಹೇಳಲಾಗುವ ಈ ಚಿತ್ರವನ್ನು “ನೀರ್ ದೋಸೆ” ಖ್ಯಾತಿಯ ಪ್ರಸನ್ನ ಶ್ರೀನಿವಾಸ್ ನಿರ್ಮಿಸಲಿದ್ದಾರೆ. ಸ್ಕಂದ್ದಾ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಮೆಹಬೂಬಾ” ದಲ್ಲಿ ಪಾವನಾ ನಾಯಕಿಯಾಗಿದ್ದಾರೆ.ಈ ಹಿಂದೆ “ಗೊಂಬೆಗಳ ಲವ್” ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ಪಾವನಾ ಅವರೊಡನೆ ಈ ಚಿತ್ರದಲ್ಲಿ ಹಿರಿಯ ನಟ ಜೈಜಗದೀಶ್, ಕಲ್ಯಾಣಿ ರಾಜು ಮತ್ತು ಸಲ್ಮಾನ್ ಅಹಮದ್ ಸಹ ಅಭಿನಯಿಸಿದ್ದಾರೆ.

 

ಚಿತ್ರದ ಮಹೂರ್ತದ ಬಳಿಕ ಡಿಸೆಂಬರ್ 11 ರಂದು ಶೂಟಿಂಗ್ ಪ್ರಾರಂಭಿಸಲು ತಂಡ ಯೋಜಿಸಿದೆ. ಚಿತ್ರಕ್ಕೆ ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ಮಾಡುತ್ತಿದ್ದು ಕೆ ಎಂ ಪ್ರಕಾಶ್ ಸಂಕಲನ ಕಿರಣ್ ಹಂಪಾಪುರ್ ಛಾಯಾಗ್ರಹಣವಿರಲಿದೆ.

LEAVE A REPLY

Please enter your comment!
Please enter your name here