ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುವ ಆರ್ ಜೆ ಧ್ವನಿ ಇವರದ್ದೇ ಕಣ್ರಿ !

0
308

ಕಿರುತರೆಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹೊಸದಾಗಿ ಒಂದು ಧ್ವನಿ ಕೇಳಿ ಬರುತ್ತಿದೆ. ಹೌದು, ಸಾಮಾನ್ಯವಾಗಿ ಬಿಬಿ ಮನೆಯಲ್ಲಿ ಪ್ರತಿದಿನ ಬೆಳ್ಳಂಬೆಳಿಗ್ಗೆ ಒಂದು ಹಾಡು ಶುರುವಾಗುತ್ತದೆ. ಆಗ ಎಲ್ಲಾ ಸ್ಪರ್ಧಿಗಳು ನಿದ್ದೆಯಿಂದ ಏಳುತ್ತಾರೆ. ಇದೇ ಟೈಂಗೆ ಇದು ಬಿಗ್ ಬಾಸ್ ರೇಡಿಯೋ ಎನ್ನುತ್ತ ಆರ್‌ಜೆ ಒಬ್ಬರ ಧ್ವನಿ ಪ್ರಸಾರವಾಗುತ್ತಿರುವುದು ನಮಗೆ ಗೊತ್ತಿದೆ. ಅರಳು ಹುರಿದಂತೆ ಆರ್‌ಜೆಯ ಹಾಗೇ ಮಾತನಾಡುವ ಆ ಧ್ವನಿ ಯಾರದ್ದು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

 

ಆ ಧ್ವನಿ ಆರ್‌.ಜೆ ಶ್ರದ್ಧಾರವರದ್ದು. ಇಂಜಿನಿಯರಿಂಗ್ ಆಗಿ ೩ ವರ್ಷ ಕೆಲಸ ಮಾಡಿದ ಶ್ರದ್ಧಾಗೆ ರೇಡಿಯೋ ಜಾಕಿ ಕೆಲಸ ಕೈಬೀಸಿ ಕರೆಯಿತು. ಇದರೊಟ್ಟಿಗೆ ಹಲವು ಹೊಸ ಪ್ರಯೋಗ ಮಾಡುತ್ತ, ಸವಾಲುಗಳನ್ನು ಎದುರಿಸುತ್ತ ಅವರು ರೆಡಿಯೋ ಜಾಕಿಯಾಗಿ ಕೆಲಸ ಮಾಡಿದ್ದಾರೆ.

 

ಇವರ ಫೇಮಸ್ ಬ್ರೆಕ್‌ಫಾಸ್ಟ್‌ ನ್ಯೂಸ್, ಇವನಿಂಗ್ ಶೋ, ಆಫ್ಟರ್‌ನೂನ್ ಶೋದ ನಿರೂಪಣೆ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮೇಲೆ ಗಟ್ಟಿ ಹಿಡಿತವಿರುವುದರಿಂದ, ಈ ಎರಡೂ ಭಾಷೆಗಳಲ್ಲಿ ನಿರೂಪಣೆ ಮಾಡಿದ ಖ್ಯಾತಿ ಶ್ರದ್ಧಾಗೆ ಸಲ್ಲುತ್ತದೆ.

 

ಕಲರ್ಸ್ ವಾಹಿನಿ ತಂಡ ‘ಡ್ಯಾನ್ಸಿಂಗ್ ಸ್ಟಾರ್‌’ ಕಾರ್ಯಕ್ರಮ ನಿರೂಪಣೆ ಸಹ ಇವರು ಮಾಡಿದ್ದಾರೆ. ಸದ್ಯ ಕಲರ್ಸ್ ವಾಹಿನಿಯಲ್ಲಿ ಫಿಕ್ಷನ್‌ ಟೀಂನ ಪ್ರೊಗ್ರಾಮಿಂಗ್ ಹೆಡ್ ಆಗಿ ಶ್ರದ್ಧಾ ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here