ಬಿಗ್ ಬಾಸ್ ಸ್ಫರ್ಧಿಯಾಗಿದ್ದ ಹಾಗೂ ಚಂದನವನದಲ್ಲಿ ಜಿಮ್ ರವಿ ಎಂದೇ ಖ್ಯಾತವಾಗಿರುವ ಎ.ವಿ ರವಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗಾಗಲೇ ಬಾಡಿ ಬಿಲ್ಡರ್ ಮತ್ತು ಪೋಷಕ ನಟ ಹಾಗೂ ನೈಸರ್ಗಿಕ ಬಾಡಿ ಬಿಲ್ಡಿಂಗ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಸುಮಾರು 30 ವರ್ಷಗಳ ಕಾಲ ಸಿನಿಮಾ ಮತ್ತು ಬಾಡಿ ಬಿಲ್ಟರ್ ಆಗಿರುವ ಎ.ವಿ ರವಿಯವರು ಈಗಾಗಲೇ 100ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಇವರು ಸದ್ಯಕ್ಕೆ ‘ತಾಜ್ ಮಹಲ್ 2’, ‘ನಾನು ಮತ್ತು ಗುಂಡ’ ಹಾಗೂ ‘ಮಾಸ್ಟರ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಂತಹ ಎ.ವಿ ರವಿ ಅವರಿಗೆ ಪೀಸ್ ಆಫ್ ವರ್ಲ್ಡ್ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ಜಿಮ್ ರವಿ ಮೂಲತಃ ಕೋಲಾರದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು. ಪ್ರೋಟೀನ್ ಇಂಜೆಕ್ಷನ್ ಗಳನ್ನು ಪಡೆಯದೆ, ಮನೆ ಊಟ ಮಾಡಿ ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಿ ಖ್ಯಾತಿ ಗಳಿಸಿರುವವರು. 38 ವರ್ಷಗಳಿಂದ ಜಿಮ್, ವರ್ಕೌಟ್ ಮಾಡುತ್ತಿರುವ ಎ.ವಿ.ರವಿ ಅವರಿಗೆ ಸದ್ಯ 53 ವರ್ಷ ವಯಸ್ಸು.
ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಎ.ವಿ.ರವಿ ಅನೇಕ ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಭಾರತ ಶ್ರೀ’, ‘ಭಾರತ ಶ್ರೇಷ್ಠ’, ‘ಕರ್ನಾಟಕ ಶ್ರೀ’, ‘ಕರ್ನಾಟಕ ಶ್ರೇಷ್ಠ’ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹಾಗೂ 90ಕ್ಕೂ ಹೆಚ್ಚು ಚಿನ್ನದ ಪದಕಗಳನ್ನ ಪಡೆದಿದ್ದಾರೆ.
ದೇಹದಾರ್ಢ್ಯ ವಿಭಾಗದಲ್ಲಿ 15 ಬಾರಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರವಿ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಭಾರತ ತಂಡದ ನಾಯಕನಾಗಿ, ಎರಡು ಬಾರಿ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಇಂಡೋ-ಪಾಕಿಸ್ತಾನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ – ಗೋಲ್ಡ್ ಮೆಡಲ್ ಪಡೆದಿದ್ದಾರೆ. ಇವರು ಮಾಡಿರುವ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನೀಡಿದೆ.