ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮತ್ತೊಬ್ಬ ಗೆಸ್ಟ್…!

0
422

ಪ್ರತಿರಾತ್ರಿ ಒಂಬತ್ತು ಗಂಟೆಯಾದರೆ ಸಾಕು ಪ್ರತಿ ಮನೆಯ ಟಿವಿಗಳಲ್ಲಿ, ಪ್ರತಿಯೊಬ್ಬರ ಮೊಬೈಲ್ ಗಳಲ್ಲಿ ಕೇಳಿಸುವ ಧ್ವನಿ ಬಿಗ್ ಬಾಸ್ ಬಿಗ್ ಬಾಸ್.. ಹೌದು ಈಗಾಗಲೇ ಎಪ್ಪತ್ತು ದಿನಗಳನ್ನು ಮುಗಿಸಿರುವ ಬಿಗ್ ಬಾಸ್, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.. ಅಂತೆಯೇ ಶನಿವಾರ ಭಾನುವಾರ ಬಂದರೆ ಸಾಕು ಕಿಚ್ಚ ಸುದೀಪ್ ಅವರನ್ನು ನೋಡಲು ಅದೆಷ್ಟು ಜನ ಕಾದು ಕುಳಿತಿರುತ್ತಾರೆ, ಅವರು ಸದಸ್ಯರಿಗೆ ನೀಡುವ ಸಲಹೆಗಳು ಅವರ ಮಾತು ಮತ್ತು ವ್ಯಕ್ತಿತ್ವಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಎರಡು ದಿನಗಳ ಹಿಂದೆಯಷ್ಟೇ ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ಅವರು ಜೋಕರ್ ವೇಷವನ್ನು ಧರಿಸಿ ಮನೆಯ ಸದಸ್ಯರಿಗೆ ಸರ್ಫ್ರಾಜ್ ನೀಡಿದ್ದರು.. ಎಂದಿನಂತೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿಶೇಷ ಚಟುವಟಿಕೆ ಯೊಂದನ್ನು ನೀಡಿದ್ದು , ಮನೆಯ ಹೊರಗೆ ಕಲಾವಿದರಾಗಿದ್ದಾರೆ ಅವರೊಂದಿಗೆ ನೀವು ಆಟವಾಡಿ ಹಣವನ್ನು ಗೆದ್ದು ಮಳಿಗೆಯಲ್ಲಿರುವ ಗೋಲ್ಗಪ್ಪ, ಬೀಡ ಮತ್ತು ಕಬ್ಬಿನ ಹಾಲುಗಳನ್ನು ಕುಡಿಯಬಹುದು ಎಂದು ಹೇಳಿದ್ದರು ಹಾಗೆ ಅಲ್ಲಿ ಬಂದಿದ್ದ ಜೋಕರ್ ಕಲಾವಿದರುಗಳು ಸದಸ್ಯರಿಗೆ ಆಟವನ್ನು ಆಡಿಸಿ ಅವರಿಗೆ ಹಣವನ್ನು ನೀಡಿ ಎಲ್ಲರಿಗೂ ಸಂತಸ ಪಡಿಸಿದರು.(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಆದರೆ ಆ ಜೋಕರ್ ವೇಷವನ್ನು ಹಾಕಿರುವವರು ಕಿಚ್ಚ ಸುದೀಪ ಎಂದು ಯಾರಿಗೂ ತಿಳಿಯಲೇ ಇಲ್ಲ , ಸುದೀಪ್ ಅವರು ಕೂಡ ಅವರಿಗೆ ಗೊತ್ತಾಗದಂತೆ ಅಭಿನಯಿಸಿದರು.. ನಂತರ ಚಟುವಟಿಕೆಯಲ್ಲ ಮುಗಿದ ಮೇಲೆ ಬಿಗ್ ಬಾಸ್ ತಮ್ಮ ವೇಷವನ್ನು ಬಿಚ್ಚಿಟ್ಟು ಪತ್ರದಲ್ಲಿ ತಾನೇ ಜೋಕರ್ ವೇಷಧಾರಿ ಎಂದು ಹೇಳಿದ್ದರು.. ವಿಚಾರ ಸದಸ್ಯರಿಗೆ ಗೊತ್ತಾಗುತ್ತಿದ್ದಂತೆ ಖುಷಿಯಿಂದ ಕಿರುಚಾಡಿ ಆಶ್ಚರ್ಯ ಚಕಿತರಾಗಿದ್ದರು.(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

 

 

ಇನ್ನೂ ಸುದೀಪ್ ಜೊತೆಗೆ ಇನ್ನೊಬ್ಬರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು. ಈಗ ಆ ವ್ಯಕ್ತಿಯ ಬಗ್ಗೆ ಕೂಡ ಭಾರಿ ಚರ್ಚೆಯಾಗುತ್ತಿದೆ… ಹೌದು ಕಿರಣ್ ರಾಜ್ ಕೂಡ ಸುದೀಪ್ ಜೊತೆ ಜೋಕರ್ ವೇಶದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಕಿರಣ್ ರಾಜ್ ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯ ಅತಿಥಿಯಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲೇ ತೆರೆ ಕಾಣಲಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ಕಿರಣ್ ರಾಜ್ ನಟಿಸಲಿದ್ದಾರೆ.(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

ಈಗಾಗಲೇ ಈ ಸೀರಿಯಲ್ ನ ಪ್ರೋಮೋ ಕೂಡ ಹೊರಬಂದಿದ್ದು, ಇದರ ಫ್ರಮೋಷನ್ ಗೆ ಕಿರಣ್ ರಾಜ್ ಬಂದಿದ್ರಾ ಎಂಬ ಪ್ರಶ್ನೆ ಕೂಡ ಎಲ್ಲರನ್ನೂ ಕಾಡುತ್ತಿದೆ. ಅಲ್ಲದೇ ಸದ್ಯದಲ್ಲೇ ಕಿರಣ್ ರಾಜ್ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.(ಚಿತ್ರ ಕೃಪೆ: ಕಲರ್ಸ್ ಕನ್ನಡ/ವೂಟ್ )

LEAVE A REPLY

Please enter your comment!
Please enter your name here