ಕನ್ನಡದ ಬಿಗ್‍ಬಾಸ್ 7ರ ಅವೃತ್ತಿಗೆ ಹೋಗಬಹುದಾದ ಸೆಲೆಬ್ರಿಟಿಗಳು ಯಾರು ಗೊತ್ತಾ..? ಇಲ್ಲಿದೆ ನೋಡಿ..!

0
655

ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ಇರುವ ವೀಕ್ಷಕರ ಬಳಗ ಬಹಳ ಆಪಾರ ಎಂದೇ ಹೇಳಬಹುದು. ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗುವ ಬಿಗ್‍ಬಾಸ್ ಕನ್ನಡ ರಿಯಾಲಿಟಿ ಶೋ ಪ್ರೇಕ್ಷಕರಲ್ಲಿ ಸಾಕಷ್ಟು ಕೂತೂಹಲ ಮೂಡಿಸುವಲ್ಲಿ ನಂಬರ್ ಒನ್ ಕಾರ್ಯಕ್ರಮವಾಗಿದೆ ಎನ್ನಬಹುದು. ಕಳೆದ 6 ವರ್ಷಗಳಿಂದ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್‍ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ಆಪಾರ ಸಂಖ್ಯೆಯಲ್ಲಿ ವೀಕ್ಷಕರು ಇದ್ದಾರೆ. ಸೀಸನ್ 1 ರಿಂದ ಸೀಸನ್ 6 ರವರೆಗೂ ಕಾರ್ಯಕ್ರಮವನ್ನು ತಮ್ಮ ಅದ್ಬುತ ಮಾತಿನ ವೈಖರಿಯಿಂದಲೇ ಅಭಿಮಾನಿಗಳನ್ನು ಹಾಗೂ ಸ್ಪರ್ಧಿಗಳನ್ನು ಸೆಳೆಯುವಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಳೆದ 6 ಸೀಸನ್‍ಗಳಲ್ಲಿ ಯಶಸ್ವಿಯಾಗಿದ್ದಾರೆ.

ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಬಿಗ್‍ಬಾಸ್ ಶೋ ವೀಕ್ಷಿಸುವ ಮುಖ್ಯ ಉದ್ದೇಶ ಸುದೀಪ್ ಅವರು ಕಾರ್ಯಕ್ರಮವನ್ನು ನಡೆಸಿಕೊಡುವ ಶೈಲಿಗೆ ಎಂದೇ ಹೇಳಬಹುದಾಗಿದೆ. ಈ ವರ್ಷದ ಬಿಗ್‍ಬಾಸ್ 7ರ ಅವೃತ್ತಿಗೆ ಈಗಾಗಲೇ ಕ್ಷಣಗಣನೇ ಆರಂಭವಾಗಿದ್ದು, ವೀಕ್ಷಕರು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಪ್ರತಿ ಅವೃತ್ತಿಯಲ್ಲೂ ಯಾವ ಸೆಲೆಬ್ರಿಟಿ ಬರಲಿದ್ದಾರೆ ಎಂಬ ಕೂತೂಹಲ ವೀಕ್ಷಕರಲ್ಲಿ ಇರುತ್ತದೆ ಅದೇ ರೀತಿ ಈ ಭಾರಿಯೂ ಸಾಮಾನ್ಯವಾಗಿದೆ.

ಬಿಗ್‍ಬಾಸ್ ಸೀಸನ್ 7ರ ಅವೃತ್ತಿಯಲ್ಲಿ ನಟಿ ಅಮೂಲ್ಯ, ನಟಿ ಶರ್ಮಿಳಾ ಮಾಂಡ್ರೆ, ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ, ಸರಿಗಮಪ ಕಾರ್ಯಕ್ರಮ ಖ್ಯಾತಿಯ ಹನುಮಂತು ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಈ ವರ್ಷದ ಬಿಗ್‍ಬಾಸ್ ಸೀಸನ್‍ನಲ್ಲಿ ಸಾಮಾನ್ಯ ಜನರಿಗೆ ಅವಕಾಶವಿಲ್ಲ ಎಂಬುದು ಒಂದು ಬೇಸರದ ಸಂಗತಿ ಎನ್ನಬಹುದು. ಸೆಲೆಬ್ರಿಟಿಗಳ ಲಿಸ್ಟ್‍ಗೆ ಟಿಕ್‍ಟಾಕ್ ಸ್ಟಾರ್‍ಗಳ ಎಂಟ್ರಿ ಇರಲಿದೆ ಎಂಬ ಸುದ್ದಿ ಸದ್ಯಕ್ಕೆ ಕೇಳಿಬರುತ್ತಿದೆ.

LEAVE A REPLY

Please enter your comment!
Please enter your name here