ರಾಜ್ಯ ನಾಯಕರಿಗೆ ಬಿಜೆಪಿ ವರಿಷ್ಠರಿಂದ ಬಿಗ್ ಶಾಕ್…

0
207

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸರ್ಕಾರದ ಸಂಪುಟ ವಿಸ್ತರಣೆಯನ್ನು ಇದೆ ತಿಂಗಳ 5ರ ನಂತರ ಬಿಜೆಪಿ ವರಿಷ್ಠರು ತೀರ್ಮಾನಿಸಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಎಷ್ಟು ಉಪ ಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ , ವರಿಷ್ಠರ ತೀರ್ಮಾನ ಶಾಸಕರಿಗೆ ನಿರಾಸೆ ಮೂಡಿಸಿದೆ.

6 ವರ್ಷಗಳ ಬಳಿಕ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕಾರ ದೊರೆತಿದೆ . ಆದ್ದರಿಂದ, ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಎರಡು ಅಥವಾ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗಲಿದೆ ಎಂಬ ನಿರೀಕ್ಷೆ ಎಲ್ಲ ಶಾಸಕರಲ್ಲೂ ಇತ್ತು. ಆದರೆ ವರಿಷ್ಠರು ಕೈಗೊಂಡಿರುವ ಈ ನಿರ್ಧಾರ ಶಾಸಕರ ಅಸಮಾಧಾನಕ್ಕೆ ಕಾರಣವಾಗುವ ಸಂಭವ ಇದೆ.

ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎರಡು ಉಪಮುಖ್ಯಮಂತ್ರಿ ಹುದ್ದೆಯನ್ನು ರಾಜ್ಯದಲ್ಲಿ ಸೃಷ್ಟಿಸಲಾಗಿತ್ತು .ಆ ಸಂದರ್ಭದಲ್ಲಿ ಕೆ. ಎಸ್. ಈಶ್ವರಪ್ಪ ಹಾಗೂ ಆರ್. ಅಶೋಕ ಉಪಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಆಧಾರದ ಮೇಲೆ ಈ ಬಾರಿಯೂ ಡಿಸಿಎಂ ಹುದ್ದೆ ಸೃಷ್ಠಿ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು.

ಬಿ. ಶ್ರೀರಾಮುಲು ,ಕೆ. ಎಸ್. ಈಶ್ವರಪ್ಪ ಮತ್ತು ಆರ್. ಅಶೋಕ ರವರ ಉಪ ಮುಖ್ಯಮಂತ್ರಿ ರೆಸ್ ನಲ್ಲಿದ್ದ ಪ್ರಮುಖರು. ಆದರೆ ಬಿಜೆಪಿ ವರಿಷ್ಠರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವ ಮನಸಿಲ್ಲ ಎಂಬ ವಿಷಯ ತಿಳಿದು ಬಂದಿದೆ .

ಇನ್ನು ಸಂಸತ್ತಿನ ಅಧಿವೇಶನದ ನಂತರ ಬಿಜೆಪಿ ವರಿಷ್ಠರು ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೊದಲನೆಯ ಹಂತದಲ್ಲಿ ಕೇವಲ 10 ಮಂದಿ ಶಾಸಕರು ಮಾತ್ರ ಸಂಪುಟ ಸೇರಲಿದ್ದು, 2ನೇ ಹಂತದ ಸಂಪುಟ ವಿಸ್ತರಣೆ ಅನರ್ಹಗೊಂಡಿರುವ ಶಾಸಕರ ಬಗ್ಗೆ ಸುಪ್ರೀಕೋರ್ಟ್ ನಲ್ಲಿ ಬರುವ ತೀರ್ಪು ನೋಡಿಕೊಂಡು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ .

ಇಂದು ಹಾಗೂ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತ್ ಸಿಇಓಗಳ ಸಭೆ ಕರೆದಿದ್ದು ಆಗಸ್ಟ್ 5ರ ನಂತರ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಸಂಪುಟ ಸೇರುವ ಪಟ್ಟಿಯನ್ನು ಈಗಾಗಲೇ ವರಿಷ್ಠರಿಗೆ ನೀಡಲಾಗಿದ್ದು ದೆಹಲಿಗೆ ಭೇಟಿ ನೀಡಿದಾಗ ಅದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here