ಇನ್ನು ಮುಂದೆ ಮದ್ಯಪಾನ ಮಾಡಬೇಕು ಅನ್ನಿಸಿದರೆ ಸೀದಾ ಹೋಗಿ ಮದ್ಯಪಾನ ಅಂಗಡಿಯಲ್ಲಿ ದುಡ್ಡು ಕೊಟ್ಟು ಖರೀದಿಸುವಂತಿಲ್ಲ. ನಿಮ್ಮ ಜೇಬಿನಲ್ಲಿ ದುಡ್ಡಿನ ಜೊತೆಗೆ ಆಧಾರ್ ಕಾರ್ಡ್ ಸಹಿತ ಇಟ್ಟುಕೊಂಡಿರಬೇಕು. ಹೌದು ಇನ್ಮುಂದೆ ಮದ್ಯ ಖರೀದಿ ಮಾಡಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ, ಎಂದು ಸರ್ಕಾರ ನಿರ್ಧರಿಸುತ್ತದೆ ಎಂಬ ವರದಿಗಳು ಕೇಳಿ ಬರುತ್ತಿದೆ..
ಇಷ್ಟು ದಿನ ಪ್ರಾಯಣಿಸುವ ಸಂದರ್ಭದಲ್ಲಿ, ಯಾವುದಾದರೂ ಸರ್ಕಾರಿ ಕೆಲಸ ಆಗಬೇಕಾದ ಸಂದರ್ಭದಲ್ಲಿ ಆಧಾರ್ಕಾರ್ಡ್ ಕಡ್ಡಾಯವಾಗಿತ್ತು. ಆದ್ರೀಗ ಮದ್ಯ ಖರೀದಿಸಬೇಕಾದರೂ ಆಧಾರ್ ಕಾರ್ಡ್ ಕಡ್ಡಾಯ ಮಾಡೋ ಪ್ಲ್ಯಾನ್ನಲ್ಲಿದೆ ಸರ್ಕಾರ.

ಟೆಟ್ರಾ ಪ್ಯಾಕ್ ಮತ್ತು ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ .ನೀವು ನೋಡಿರಬಹುದು ರಸ್ತೆಗಳು, ನದಿಗಳು, ಉದ್ಯಾನವನ ಹೀಗೆ ಸಾಕಷ್ಟು ಕಡೆ ಬಾಟಲಿಗಳು ಬಿದ್ದಿರುತ್ತವೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಅಲ್ಲದೇ ಪ್ರಾಣಿ ಪಕ್ಷಿಗಳಿಗೂ ಅನೇಕ ತೊಂದರೆಯುಂಟಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು. ಇದನ್ನು ತಡೆಗಟ್ಟಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಜಾರಿಗೆ ತರಲು ಇಂಥದ್ದೊಂದು ಮಹತ್ವದ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೀತಿದೆ.

ಆಧಾರ್ ಮಾಹಿತಿ ದಾಖಲಿಸಿಕೊಂಡ ಬಳಿಕವೇ ಮದ್ಯ ನಿಡಬೇಕು, ಎರಡನೇ ಬಾರಿ ಮದ್ಯ ಖರಿದಿಸಲು ಬಂದಾಗ ಹಳೆಯ ಬಾಟಲ್ ಅಂಗಡಿಗೆ ನೀಡಲೆಬೇಕು. ಎಲ್ಲೆಂದರಲ್ಲಿ ಬಿದ್ದಿರುವ ಖಾಲಿ ಬಾಟಲ್ ಮೇಲಿನ ಬಾರ್ಕೋಡ್ ಮೂಲಕ ಮದ್ಯದಂಗಡಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ.