ಸರ್ಕಾರಿ ಕೆಲಸಕ್ಕಾಗಿ ತಮ್ಮನನ್ನೇ ಕೊಂದ ಅಣ್ಣ ..!

0
111

ಇದು ತುಮಕೂರಿನಲ್ಲಿ ನಡೆದ ಘಟನೆಯಾಗಿದ್ದು ,ತಂದೆಯ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಸಿಗುವ ಸರ್ಕಾರಿ ಕೆಲಸ ತಮ್ಮನಿಗೆ ಸಿಗುತ್ತೆ ಎಂದು ದ್ವೇಷದಿಂದ ಸ್ವತಃ ಅಣ್ಣನೆ ತನ್ನ ಸ್ವಂತ ತಮ್ಮನನ್ನು ಕೊಂಡ ಘಟನೆ ತುಮಕೂರಿನ ಸರಸ್ವತಿ ಪುರಂ ನಲ್ಲಿ ನಡೆದಿದೆ.
17 ವರ್ಷದ ಕಿರಣ್ ಎಂಬಾತ ತನ್ನ ತಮ್ಮನನ್ನೇ ಕೊಂದಿದ್ದಾನೆ
ಅಣ್ಣ ಕಿರಣ್ 11 ವರ್ಷದ ತಮ್ಮ ಕಿಶೋರ್ ನನ್ನು ಕೊಲೆ ಮಾಡಿದ್ದಾನೆ
ಕಿರಣ್ ಮತ್ತು ಕಿಶೋರ್ ತಂದೆ ಪುಟ್ಟಯ್ಯ ಕೇಂದ್ರ ಸರ್ಕಾರದ ನೌಕರಣಗಿದ್ದನು.
ಪುಟ್ಟಯ್ಯ ಎರಡು ವರ್ಷದ ಹಿಂದೆ ಅಕಾಲಿಕ ಮರಣ ಹೊಂದಿದ್ದನು
ಆದ್ದರಿಂದ ಆ ಕೆಲಸವನ್ನು ಅವನ ಮಕ್ಕಳಿಗೆ ಕೊಡುವುದಾಗಿ ಹೇಳಲಾಗಿತ್ತು
ಪುಟ್ಟಯ್ಯನವರ ಇಬ್ಬರು ಮಕ್ಕಳಲ್ಲಿ ಆರೋಪಿ 17 ವರ್ಷದ ಕಿರಣ್ ಹಿರಿಯವನಾಗಿದ್ದ ಹಾಗೂ 11 ವರ್ಷದ ಕಿಶೋರ್ ಕಿರಿಯವನಾಗಿದ್ದ
18 ವರ್ಷ ತುಂಬಿದ ಕೂಡಲೇ ಆ ಮಕ್ಕಳಲ್ಲಿ ಒಬ್ಬರಿಗೆ ಕೆಲಸ ನೀಡಲು ಅನುಮತಿಯಿತ್ತು
ಕಿರಣ್ ವಿಪರೀತ ಮದ್ಯ ವ್ಯಸನಿ ಆಗಿದ್ದ.
ಈತನ ಬದಲು ತಮ್ಮ ಕಿಶೋರನನ್ನು ಆ ಕೆಲಸಕ್ಕೆ ಕಳಿಸಬೇಕೆಂದು ಅವನ ಮನೆಯವರು ನಿರ್ಧರಿಸಿದ್ದರು.
ಆದರೆ ಇದರಿಂದ ಕುಪಿತಗೊಂಡ
ಕಿರಣ್ ಮನೆಯವರೊಂದಿಗೆ ಮಂಗಳವಾರ ರಾತ್ರಿ ಕುಟುಂಬದವರ ಜೊತೆ ಜಗಳ ಮಾಡಿ ಕೋಪದಲ್ಲಿ ಚಾಕು ತೆಗೆದ ಕಿರಣ್ ಕಿಶೋರನನ್ನು ಇರಿದು ತನ್ನ ತಮ್ಮನನ್ನು ಕೊಂದೆಬಿಟ್ಟ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ
ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದೆ ಹಾಗೂ ಆರೋಪಿ ಕಿರಣನ ಬಂಧನವಾಗಿದೆ.

LEAVE A REPLY

Please enter your comment!
Please enter your name here