ಭೀಮಾ ತೀರದ ಕೊಲೆ ಆರೋಪಿಗೂ ಸಿಕ್ತು ಗೌರವ ಡಾಕ್ಟರೇಟ್..!

0
752

ಭೀಮಾ ತೀರದ ದ್ವೇಷದ ಕೊಲೆಗಳ ಸರಣಿಯ ಕಾವು ಇಂದಿಗೂ ಜೀವಂತವಾಗಿದೆ. ಆಗಾಗ ಭೀಮಾ ತೀರದಲ್ಲಿ ಗುಂಡಿನ ಸದ್ದು ಕೇಳುತ್ತದೆ, ರಕ್ತ ಹರಿಯುತ್ತದೆ. ಈ ಮಧ್ಯೆ ಅಚ್ಚರಿಯ ಬೆಳವಣಿಗೆಯೊಂದು ಇದೀಗ ಭೀಮಾ ತೀರದಲ್ಲಿ ಭಾರೀ ಸುದ್ದಿಯಾಗಿದೆ. ಅದುವೇ ಪುತ್ರಪ್ಪ ಸಾಹುಕಾರನ ತಮ್ಮ ಮಹಾದೇವ ಸಾಹುಕಾರ ಬೈರಗೊಂಡಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು.

ಹೌದು, ಭೀಮಾ ತೀರದ ಇತಿಹಾಸ ಬಲ್ಲವರಿಗೆ ಮಹಾದೇವ ಸಾಹುಕಾರ ಯಾರೆಂದು ಗೊತ್ತಿರುತ್ತದೆ. ಈ ಹಿಂದೆ ವಿಜಯಪುರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿ ನಂತರ ಜಾಮೀನಿನ ಮೇಲೆ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದ್ದಾನೆ ಮಹಾದೇವ ಸಾಹುಕಾರ.

ಅಚ್ಚರಿ ಎಂದರೆ ಮಹಾದೇವ ಸಾಹುಕಾರ ಬೈರಗೊಂಡಗೆ ಏಷಿಯನ್ ಇಂಟರ್‍ನ್ಯಾಷನಲ್ ಇಂಡೋನೆಷಿಯಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಬೈರಗೊಂಡ ಭೀಮಾತೀರದ ಧರ್ಮರಾಜ ಚಡಚಣ ಕೊಲೆ ಮತ್ತು ಗಂಗಾಧರ ಚಡಚಣ ನಾಪತ್ತೆ ಮತ್ತು ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿ. ಆದರು ಏಷಿಯನ್ ವಿಶ್ವವಿದ್ಯಾಲಯದ ಕರ್ನಾಟಕದ ಸಂಯೋಜಕ ಡಾ. ರಾಜು ರೋಖಡೆ ಮಹಾದೇವ ಸಾಹುಕಾರ ಬೈರಗೊಂಡ ಅವರ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ್ದು ಇದೀಗ ಎಲ್ಲೆಡೆ ಸುದ್ದಿಯಾಗಿದೆ.

ಎರಡು ಕೊಲೆಗಳ ಆರೋಪಿಯಾಗಿರುವ ಮಹಾದೇವ ಸಾಹುಕಾರ ಭೈರಗೊಂಡ ಜೈಲು ಪಾಲಾಗಿದ್ದರು. ಆದರೆ ಕಳೆದ ಮೇ 4ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆಗ ಭೈರವಗೊಂಡ ಅವರ ನೂರಾರು ಅಭಿಮಾನಿಗಳು ದೊಡ್ಡ ಹೂವಿನ ಹಾರ ಹಾಕಿ ಆತನನ್ನು ಬರಮಾಡಿಕೊಂಡಿದ್ದರು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here