ಜನಸಾಮಾನ್ಯರು ತಪ್ಪದೇ ಓದ ಬೇಕಾದ ಪತ್ರ, ಕಮೀಷನರ್ ಭಾಸ್ಕರ್ ರಾವ್ ಬರೆದದ್ದು..

0
334

ಡಿಯರ್ ಫ್ರೆಂಡ್ಸ್…
ಇವತ್ತು ನಿಮ್ಮೊಂದಿಗೆ ಒಂದು ವಿಷಯ ಹಂಚಿಕೊಳ್ಳಬೇಕು ಅಂತ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ ..
ಪೊಲೀಸ್ ಇಲಾಖೆ ಮತ್ತು ಪೊಲೀಸರು ಸಾಮಾನ್ಯವಾಗಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ ಅದಕ್ಕೆ ಕಾರಣಗಳು ಹಲವಾರು. ಆದರೆ ಜನತೆ ಎಂದಾದರೂ ಪೊಲೀಸರ ಸಮಸ್ಯೆಗಳು, ಪೊಲೀಸರ ಒತ್ತಡಗಳ ಕಡೆಗೆ ಗಮನ ಹರಿಸುವುದೇ ಇಲ್ಲ..

ಪೊಲೀಸರು ನಿರಂತರವಾಗಿ ಜನತೆಯೊಂದಿಗೆ ಕೆಲಸ ಮಾಡಬೇಕು, ಜನತೆಯ ಎಲ್ಲಾ ರೀತಿಯ ಆಕ್ರೋಶಗಳಿಗೆ ಮೊದಲು ತುತ್ತಾಗುವುದು ಪೊಲೀಸರೇ, ಆದರೆ ಆ ಪೊಲೀಸರು ನಮ್ಮಂತೆಯೇ ನಾಗರಿಕ ಸಮಾಜದ ಅಂಗ, ಅಲ್ಲೆ ಬದುಕಿ ಬಾಳುತ್ತಿರುವವರು ಎಂಬುದನ್ನು ಜನತೆ ಯೋಚಿಸುವ ಅರಿತುಕೊಳ್ಳುವ ಪ್ರಯತ್ನ ಮಾಡುವುದೇ ಇಲ್ಲ. ಪೊಲೀಸರಿಗೂ ಸಂಸಾರವಿರುತ್ತದೆ, ಭಾವನೆಗಳಿರುತ್ತವೆ, ಆದರೆ ಪೊಲೀಸರು ಅದೆಲ್ಲವನ್ನೂ ಮೀರಿ ಸಮಾಜದ ನಡುವೆ ಜನತೆಗಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ..

ಆ ಕೆಲಸದ ನಡುವೆ ಸಂಸಾರವನ್ನು ಮರೆಯಬೇಕಾಗುತ್ತದೆ, ಭಾವನೆಗಳಿಗೆ ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ.. ಒಮ್ಮೆ ಯೋಚನೆ ಮಾಡಿ ಸರ್ಕಾರದ ಮತ್ತು ಬೇರೆ ಬೇರೆ ರೀತಿಯ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹಬ್ಬ ಹರಿದಿನ, ಸರ್ಕಾರಿ ರಜೆ ಇರುತ್ತದೆ, ತಮ್ಮ ಕುಟುಂಬ ಹೆಂಡತಿ ಮಕ್ಕಳೊಂದಿಗೆ ಸಮಯ ನಿಭಾಯಿಸಲು ಸಮಯವಿರುತ್ತದೆ, ಆದರೆ ಪಾಪ ಪೊಲೀಸರಿಗೆ ಆ ರೀತಿಯ ಯಾವ ಮನರಂಜನೆಗಳು ಇರುವುದೇ ಇಲ್ಲ. ಪೊಲೀಸರು ಸಂಪೂರ್ಣವಾಗಿ ಎಲ್ಲ ಸಮಯದಲ್ಲೂ ಜನತೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ.

ಯಾವುದೇ ಕಾರ್ಯಕ್ರಮಗಳಲ್ಲಿ ನಾವು ಮನರಂಜನೆಯನ್ನು ಅನುಭವಿಸುತ್ತಿರುತ್ತೇವೆ, ಆದರೆ ಪಾಪ ಅಲ್ಲಿರುವ ಪೊಲೀಸರು ನಿಮ್ಮ ರಕ್ಷಣೆಯ ಭಾರ ಹೊತ್ತು ಆ ಜಾಗದಲ್ಲಿ ಮನರಂಜನೆಯನ್ನೇ ಮರೆತು ನಿಮಗಾಗಿ ಕೆಲಸ ಮಾಡುತ್ತಿರುತ್ತಾರೆ. ಈ ರೀತಿ ಪ್ರತಿ ಹಂತ ಪ್ರತಿ ಸಂದರ್ಭಗಳನ್ನು ನೀವೊಮ್ಮೆ ಪೊಲೀಸರ ಜಾಗದಲ್ಲಿ ನಿಂತು ಯೋಚಿಸಿ ನೋಡಿ ಅವರ ಸಮಸ್ಯೆ ನಿಮಗೆ ಅರ್ಥವಾಗಬಹುದು..

ನಾನು ಯಾಕಾಗಿ ಇಷ್ಟೊಂದು ವಿಚಾರ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ಪೊಲೀಸರು ಮತ್ತು ಜನತೆ ಪರಸ್ಪರ ಅರಿತುಕೊಂಡು ಕೆಲಸ ಮಾಡಬೇಕಾಗುತ್ತದೆ. ಜನತೆಯನ್ನು ಪ್ರೀತಿಸಬೇಕು, ಜನತೆ ಪೊಲೀಸರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು ಆಗ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಸುಲಭವಾಗಿ ಮಟ್ಟ ಹಾಕಬಹುದು..
ನಮಸ್ಕಾರ .. ಭಾಸ್ಕರ್ ರಾವ್

LEAVE A REPLY

Please enter your comment!
Please enter your name here