ಬೆಂಗಳೂರು ಪೋಲಿಸರಿಗೆ ಆಯುಕ್ತ ಭಾಸ್ಕರ್ ರಾವ್ ಕೊಟ್ಟ ಗಿಫ್ಟ್ ಏನು ಗೊತ್ತಾ..?

0
160

ಬೆಂಗಳೂರು ನಗರ ಸಾಮಾನ್ಯವಾಗಿ ಹೇಳುವುದಾದರೆ ಸದಾ ಜನರ ದಟ್ಟಣೆಯಿಂದ ಕೂಡಿರುವ ನಗರ ಎಂದೇ ಹೇಳಬಹುದು. ಬೆಂಗಳೂರು ನಗರದಲ್ಲಿ ನಡೆಯುವ ಹಲವಾರು ತೊಂದರೆಯ ಘಟನೆಗಳಿಂದ ನಮ್ಮ ಜನರನ್ನು ರಕ್ಷಣೆ ಮಾಡುವುದು ನಮ್ಮ ಪೋಲಿಸರು. ಪೋಲಿಸರು ಸದಾ ತಮ್ಮ ಕರ್ತವ್ಯ ನಿಷ್ಠೆಯಿಂದ ಕೆಲಸದಲ್ಲಿ ನಿರತಾಗಿರುತ್ತಾರೆ. ನಮಗೆ ನಿಮಗೆ ತಿಳಿದಿರುವ ಹಾಗೆ ಪೋಲಿಸರು ಹೆಚ್ಚು ಜನರ ರಕ್ಷಣೆಗೆ ನಿಂತು, ಸಮಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಹಬ್ಬದ ದಿನ, ಯಾರಾದರು ರಾಜಕೀಯ ವ್ಯಕ್ತಿಯ ಆಗಮನ ಇನ್ನು ಮುಂತಾದ ಕರ್ತವ್ಯಗಳಿಗೆ ರಜೆಯನ್ನು ನಿರೀಕ್ಷಿಸದೆ ಸದಾ ಮುಂದಿರುತ್ತಾರೆ.

ಇದನ್ನು ಗಮನದಲಿಟ್ಟುಕೊಂಡು ಪೋಲಿಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಬೆಂಗಳೂರಿನ ಪೋಲಿಸರಿಗೆ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಬೆಂಗಳೂರಿನ ಪೋಲಿಸರು ತಮ್ಮ ಹುಟ್ಟುಹಬ್ಬದ ದಿನ ರಜೆಯನ್ನು ತೆಗೆದುಕೊಳ್ಳಬಹುದಾಗಿದೆ. ಹೌದು, ಪೋಲಿಸ್ ಸಿಬ್ಬಂದಿಗಳು ಅವರ ಹುಟ್ಟುಹಬ್ಬದ ದಿನ ರಜೆಯನ್ನು ತೆಗೆದುಕೊಳ್ಳಬಹುದು ಅಂದು ಎಷ್ಟೇ ಒತ್ತಡದ ದಿನವಾದರೂ ಅಥವಾ ಕೆಲಸವಿದ್ದರು ಕೂಡ ರಜೆಯನ್ನು ನೀಡಲಾಗುವುದು.

ಪೋಲಿಸರು ಹುಟ್ಟುಹಬ್ಬದ ದಿನವಾದರೂ ಮನೆಯವರ ಜೊತೆ ಸ್ವಲ್ಪ ಸಮಯವನ್ನು ಕಳೆಯಬೇಕು ಎಂಬುದು ಭಾಸ್ಕರ್ ಅವರ ಅಭಿಪ್ರಾಯವಾಗಿದೆ. ಈ ಮೂಲಕ ಎಲ್ಲ ಪೋಲಿಸರಿಗೂ ತಮ್ಮ ಹುಟ್ಟುಹಬ್ಬದ ದಿನ ಸಂಪೂರ್ಣ ರಜೆಯನ್ನು ತೆಗೆದುಕೊಂಡು ತಮ್ಮ ಕುಟುಂಬದವರ ಜೊತೆ ಸಮಯ ಕಳೆಯಬಹುದಾಗಿದೆ.

LEAVE A REPLY

Please enter your comment!
Please enter your name here