ನಟಿ ಮಣಿಯರ ವಿಚಾರಣೆ ಗೌಪ್ಯ ಸ್ಥಳದಲ್ಲಿ ನಡೆಸುವ ವಿಚಾರವಾಗಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾರಿಗೆ ನೋಟಿಸ್ ಕೊಡುತ್ತಿವಿ ಅವರು ನಮ್ಮ ಅಧಿಕೃತ ಕಚೇರಿಯಲ್ಲೇ ವಿಚಾರಣೆ ಎದುರಿಸಬೇಕು. ಬೇರೆ ಹೊಟೇಲ್, ಗೌಪ್ಯ ಸ್ಥಳದಲ್ಲಿ ನಡೆಸುವುದಿಲ್ಲ ಎಂದರು.
ಸದ್ಯ ತನಿಖೆ ಅಧಿಕೃತ ಸಿಸಿಬಿ ಕಚೇರಿಯಲ್ಲೇ ನಡೆಯುತ್ತೆ, ಯಾರಿಗೂ ಯಾವುದೇ ರಿಯಾಯಿತಿ ಇಲ್ಲ, ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದೇ ವೇಳೆ ತಿಳಿಸಿದರು.
ಇನ್ನೂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ದೂರು ದಾಖಲಾದ ಹಿನ್ನಲೆ ಮಾತು ಮುಂದುವರೆಸಿದ ಅವರು, ಸೈಬರ್ ಕ್ರೈಂ ನಲ್ಲಿ 10 ಸಾವಿರ ಪ್ರಕರಣ ದಾಖಲಾಗಿದೆ. ಮೊಬೈಲ್ ಗಳಿಂದ ಮುಖ್ಯವಾಗಿ ಅಪರಾಧ ನಡೆಯುತ್ತಿದೆ. ಮಾಲ್ ಗಳಲ್ಲಿ ಅಂಗಡಿಗಳಲ್ಲಿ ಮತ್ತು ಇನ್ನಿತರ ವ್ಯವಹಾರ ಸ್ಥಳದಲ್ಲಿ ಮೊಬೈಲ್ ನಂಬರ್ ನ್ನು ಕೊಡಬೇಡಿ, ಮೊಬೈಲ್ ನಂಬರ್ ಕೊಟ್ಟೇ ವ್ಯಾಪಾರ ಮಾಡಬೇಕು ಅಂತಿಲ್ಲ.
ತಾಂತ್ರಿಕ ಪ್ರಪಂಚಕ್ಕೆ ಮೊಬೈಲ್ ಮುಖ್ಯ, ಮೊಬೈಲ್ ನಂಬರ್ ನೀಡಿದರೆ ಅದರಲ್ಲಿರುವ ಡಾಟಾಗಳನ್ನು ಕದಿಯೋದಕ್ಕೆ ಸಹಕಾರಿಯಾಗುತ್ತೆ, ಮೊಬೈಲ್ ನಂಬರ್ ಅಂಗಡಿಗಳಲ್ಲಿ ಕೊಡೊದು ಕಡ್ಡಾಯ ಅಲ್ಲ, ಮೊಬೈಲ್ ನಂಬರ್ ಕೊಡಲೇಬೇಕು ಅಂದರೆ ಅವರ ಬಳಿ ವ್ಯಾಪಾರವನ್ನೇ ಮಾಡಬೇಡಿ ಎಂದರು.