ಡಾ. ವಿಷ್ಣುವರ್ಧನ್ ಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಂಗಳಮುಖಿ ಬಳಿ 1 ರೂಪಾಯಿ ಕೇಳಿ ಪಡೆದಿದ್ದಾರೆ. ಇನ್ನು ಮಂಗಳಮುಖಿ ಕೂಡಾ ಖುಷಿಯಿಂದಲೇ ಆಶೀರ್ವದಿಸಿ ಭಾರತಿಗೆ ಒಂದು ರೂಪಾಯಿ ನೀಡಿದ್ದಾರೆ.
ನಿನ್ನೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 10 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ, ಅಳಿಯ ಅನಿರುಧ್ ಸೇರಿ ವಿಷ್ಣು ಕುಟುಂಬದ ಇತರ ಸದಸ್ಯರು ಹೆಚ್.ಡಿ. ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಬರುತ್ತಿದ್ದರು. ಈ ವೇಳೆ ಅವರಿಗೆ ಮಂಗಳಮುಖಿಯೊಬ್ಬರು ಎದುರಾಗಿ ಹಣ ಕೇಳಿದರು.
ಕೂಡಲೇ ಭಾರತಿ ಅವರು 200 ರೂಪಾಯಿ ನೀಡಿ, ನೀವು 1 ರೂಪಾಯಿ ಕೊಡಿ ಎಂದು ಕೇಳಿದರು. ಇದಕ್ಕೆ ಖುಷಿಯಿಂದಲೇ ಆ ಮಂಗಳಮುಖಿ 1 ರೂಪಾಯಿ ನೀಡಿ, ನೀವು ಚೆನ್ನಾಗಿರಿ ಎಂದು ಆಶೀರ್ವದಿಸಿದರು. ನಾವು ಕೊಡುವ ಹಣಕ್ಕಿಂತ ನೀವು ನಮಗೆ ಕೊಡುವ ದುಡ್ಡಿಗೆ ಬೆಲೆ ಜಾಸ್ತಿ ಎಂದು ಭಾರತಿ ಪ್ರತಿಕ್ರಿಯಿಸಿದರು.