ಮಾಯಾ ಮೂವಿ ಮೇಕರ್ಸ್ ಲಾಂಛನದಲ್ಲಿ ಜಿ.ಕೆ. ಮಾಧುರಿ ಉಮೇಶ್ ನಿರ್ಮಿಸಿರುವ ಬೆಕ್ಕಿಗೊಂದು ಮೂಗುತಿ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಸ್ಲಿ ಚಾಕೋ ನಿರ್ದೇಶಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ – ರುದ್ರಮುನಿ, ಸಂಗೀತ – ವಿಶಾಖ್ ವಸಿಷ್ಠ, ಸಹ ಸಾಹ – ಹ್ಯಾರಿಸ್ ಜಾನಿ, ಸಂಕಲನ-ಶ್ರೀನಿವಾಸನ್, ಅರುಣ್, ನೃತ್ಯ – ಚಂದ್ರಕಲಾ, ಕಪಿಲ್, ಸಹನಿರ್ದೇಶನ ಮುತ್ತುರಾಜ್, ಕಲೆ-ಮಣಿ ಅರುಣ್, ತಾರಾಗಣದಲ್ಲಿ – ಸುಷ್ಮಾ, ರಮೇಶ್ ಭಟ್, ಬೆಂಗಳೂರು ನಾಗೇಶ್, ಮುನಿ, ವಿವಿನ್, ಉಮೇಶ್ ಮುಂತಾದವರಿದ್ದಾರೆ.

ಈ ಚಿತ್ರಕ್ಕೆ ಬೆಂಗಳೂರು, ತುಮಕೂರು, ದೇವರಾಯನದುರ್ಗ, ಕನಕಪುರ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಕಥಾವಸ್ತು ‘ಏಲಿಯನ್ ಲವ್ ಇನ್ ದಿಸ್ ವಲ್ರ್ಡ್’.
ಚಿತ್ರದ ನಾಯಕ ತಿಲಕ್ ಮಾತನಾಡಿ, “ಈ ಚಿತ್ರದಲ್ಲಿ ಸೇನಾ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ಏಲಿಯನ್ ಗುಣವನ್ನು ಬದಲಿಸುವ ಅಪರೂಪದ ಪಾತ್ರ ಈ ಚಿತ್ರದಲ್ಲಿ ನನಗೆ ಸಿಕ್ಕಿದೆ. ಭೂಮಿಗೆ ಬರುವ ಏಲಿಯನ್ಗೂ, ನನಗೂ ಯಾವ ರೀತಿಯ ಸಂಬಂಧ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬೇಕು’ ಎಂದರು.
ಪ್ರೀತಿ, ನಂಬಿಕೆ, ವಿಶ್ವಾಸ ಯಾವುದರಲ್ಲೂ ಅರ್ಥವಿಲ್ಲ ಎಂದು ತಿಳಿದುಕೊಂಡಿರುವ ಪಾತ್ರದಲ್ಲಿ ನಾಯಕಿ ಸುಷ್ಮಾ ರಾಜ್ ಕಾಣಿಸಿಕೊಂಡಿದ್ದಾರೆ. “ಪ್ರಾಣಿ ರೂಪದಲ್ಲಿ ಭೂಮಿಗೆ ಬಂದು, ಕೊನೆಗೆ ಮನುಷ್ಯಳಾಗಿ ರೂಪುಗೊಳ್ಳುತ್ತೇನೆ. ಪ್ರೀತಿ ಎಂದರೆ ಅದೊಂದು ಆಯುಧವಲ್ಲ. ಭಾವನೆಗಳು ತುಂಬಿಕೊಂಡಿದ್ದರೇನೆ ಬದುಕು ಎಂದು ನಾಯಕ ನನಗೆ ಅರಿವು ಮೂಡಿಸುತ್ತಾನೆ. ಅದರಿಂದ ಜೀವನದಲ್ಲಿ ಬದಲಾಗುತ್ತೇನೆ’ ಎಂದು ಸುಷ್ಮಾ ರಾಜ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು.
