ಭಿಕ್ಷುಕ ಅಂದುಕೊಂಡು ಶೋ ರೂಂನಿಂದ ಹೊರಗೆ ತಳ್ಳಿದರು ಮತ್ತೆ ನೋಡಿದರೆ ಶಾಕ್…!

0
127

ನಮ್ಮ ದಿನನಿತ್ಯದ ಜೀವನದಲ್ಲಿ ದಿನ ಸಾವಿರಾರು ಜನರ ಮುಖಗಳನ್ನು ನೋಡ್ತಾ ಇರ್ತೀವಿ
ಅದರಲ್ಲಿ ಸುಂದರವಾಗಿ ಇರುವವರನ್ನು , ಕೆಟ್ಟದಾಗಿ ಕಾಣುವವರನ್ನು, ಕೋಪಿಷ್ಟ ರನ್ನು , ವಿಕೃತರನ್ನು, ಭಿಕ್ಷುಕರನ್ನು ಯಾವುದೋ ಒಂದು ಸಮಯದಲ್ಲಿ ನೋಡ್ತ ಬಂದಿದೀವಿ
ಆದರೆ ಮುಖವನ್ನು ನೋಡಿ ಅವರ ವ್ಯಕ್ತಿತ್ವವನ್ನು ಹೇಳಲು ಸಾಧ್ಯನಾ ಅನ್ನೋದು ತುಂಬಾ ಕಷ್ಟ
ಸುಂದರವಾದ ಬಟ್ಟೆಗಳನ್ನು ಹಾಕಿಕೊಂಡ ಮಾತ್ರಕ್ಕೆ ಅವರು ಸಾಫ್ಟ್ವೇರ್ ಆಗಲು ಸಾಧ್ಯವಿಲ್ಲ
ಮನುಷ್ಯ ಎಷ್ಟೇ ಸುಂದರವಾಗಿ ಕಂಡರೂ ಸಹ

ವಿಷಯಕ್ಕೆ ಬಂದರೆ ಅವರ ಹತ್ತಿರ ಬೇಕಾಗಿರುವ ಜ್ಞಾನ ಇಲ್ಲದೇ ಇರಬಹುದು
ಹಾಗೆ ಸರಿಯಾದ ಬಟ್ಟೆ ಇಲ್ಲದೆ ಇರುವವರ ಹತ್ತಿರ ಏನು ಜ್ಞಾನ ಇಲ್ಲ ಅಂತ ಅಂದುಕೊಳ್ಳೋದು ತುಂಬಾ ದೊಡ್ಡ ತಪ್ಪು
ಅಂತಹ ಒಂದು ಘಟನೆ ಇದು ಸಹ

ತಾಯ್ಲೆಂಡ್ ನಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಪ್ರಪಂಚವನ್ನೇ ನಿಬ್ಬೆರಗಾಗುವಂತೆ ಮಾಡಿದೆ
ಮನುಷ್ಯನನ್ನು ನೋಡಿ ಕೀಳಾಗಿ ನೋಡುವವರಿಗೆ ಈ ಒಂದು ಲೇಖನ ಪಾಠ ಇದ್ದಂಗೆ.

ಥಾಯ್ಲೆಂಡ್ ನಲ್ಲಿ ಒಬ್ಬ ವ್ಯಕ್ತಿ ಒಂದು ಮೋಟಾರ್ ಸೈಕಲ್ ಶೋರೂಂಗೆ ಬರ್ತಾನೆ
ಅದೇ ಹಾರ್ಲಿ ಡೇವಿಡ್ಸನ್ ಶೋರೂಮ್
ಶೋರೂಂಗೆ ಬಂದ ವ್ಯಕ್ತಿ ಅಲ್ಲಿರುವ ಬೈಕ್ಗಳನ್ನು ನೋಡ್ತಾನೆ ಪ್ರತಿ ಒಂದು ಬೈಕ್ ಅನ್ನು ಸೂಕ್ಷ್ಮವಾಗಿ ಗಮನಿಸ್ತ ಇರ್ತಾನೆ

ಅಲ್ಲಿರುವ ಸೇಲ್ಸ್ ಮೆನ್ ಗಳು ಆತನನ್ನು ನೋಡಿ
ಕಷ್ಟಮರ್ ಆಗಿ ಟ್ರೀಟ್ ಮಾಡಲಿಲ್ಲ
ಯಾಕಂದ್ರೆ ಆತನ ರೂಪ ವಿಚಿತ್ರವಾಗಿರುತ್ತದೆ
ಆತನನ್ನು ನೋಡಿದರೆ ಭಿಕ್ಷುಕನ ರೀತಿ ಇರ್ತಾನೆ
ಈ ಶೋ ರೂಂನವರು ಯಾರೂ ಸಹ ಆತನಿಗೆ ಗೌರವ ಕೊಡದೆ
ಆತ ನನ್ನ ಹೊರಗೆ ಹಾಕ್ತಾರೆ
ಅದಾದ ನಂತರ ಮತ್ತೊಂದು ಶೋ ರೂಮ್ ಗೆ ಹೋಗ್ತಾನೆ
ಇದನ್ನು ಮೊದಲನೇ ಶೋರೂಂ ಸೇಲ್ಸ್ ಮೆನ್ ಗಳು ಗಮನಿಸುತ್ತಾ
ನಗ್ತಾ ಇರ್ತಾರೆ
ಆ ನಂತರ ಆ ಶೋರೂಂನಿಂದ ಸಹ ಆತ ಹೊರಕ್ಕೆ ಬರ್ತಾನೆ
ನಂತರ ಇನ್ನೊಂದು ಶೋರೂಂಗೆ ಹೋಗ್ತಾನೆ
ಅಲ್ಲಿಯೂ ಸಹ ಆತನಿಗೆ ಗೌರವ ಕೊಡದೆ ಹೊರ ಹಾಕ್ತಾರೆ

ಇದಕ್ಕೆ ಮೂಲ ಕಾರಣ ಆತ ಭಿಕ್ಷುಕನ ರೀತಿ ಕಾಣಿಸುವುದರಿಂದ
ಅದಾದ ನಂತರ ಮೊದಲು ಭೇಟಿ ನೀಡಿದ್ದ ಶೋರೂಮ್’ಗೆ ಬಂದು ಅಲ್ಲಿರುವ ಸೇಲ್ಸ್ ಮೆನ್ ಗಳು ಆತನನ್ನು ಪ್ರಶ್ನಿಸುತ್ತಾರೆ
ಏನು? ಯಾಕೆ ಒಳಗಡೆ ಬಂದೆ ? ಯಾರು ನೀನು ? ಏನು ಬೇಕು ? ಅಂತಾರೆ
ಆಗ ಆತ ನನಗೆ ಈ ಬೈಕ್ ಬೇಕು ಮತ್ತು
ಈ ಬೈಕ್ನ ಬೆಲೆ ಎಷ್ಟು ಅಂತ ಕೇಳಿದ
ಸೇಲ್ಸ್ ಮೆನ್ ಗಳು ನಿನ್ನಿಂದ ಈ ಬೈಕನ್ನು ತೆಗೆದುಕೊಳ್ಳೋಕೆ ಆಗಲ್ಲ ಹೊರಹೋಗು ಅಂತಾರೆ

ಆತ ನೇರವಾಗಿ ಮ್ಯಾನೇಜರ್ ರೂಂಗೆ ಹೋಗಿ ಮ್ಯಾನೇಜರನ್ನು ಕರೆದುಕೊಂಡು ಬಂದ
ಈ ಬೈಕ್ನ ಬೆಲೆ ಎಷ್ಟು ಅಂತ ಕೇಳಿದ
ಅದಕ್ಕೆ ಮ್ಯಾನೇಜರ್ 11 ಲಕ್ಷ ಅಂತ ಹೇಳಿದ

ಕೂಡಲೇ 11 ಲಕ್ಷ ಅವರ ಮುಂದೆ ಇಟ್ಟು
ನನಗೆ ಈ ಬೈಕ್ನ ಕೊಡಿ ಅಂದ
ಅಲ್ಲಿರುವ ಸೇಲ್ಸ್ ಮೆನ್ ಮತ್ತು ಮ್ಯಾನೇಜರ್ ಗೆ ಒಂದು ಬಾರಿ ತಲೆ ತಿರುಗುವಂತೆ ಆಗುತ್ತೆ.

ಆಗ ಮ್ಯಾನೇಜರ್ ಇಷ್ಟು ಹಣ ಎಲ್ಲಿಂದ ಬಂತು ಅಂತ ಕೇಳಿದ
ಇದು ನನ್ನ ಕಷ್ಟಾರ್ಜಿತ
ಹಾರ್ಲಿ ಡೇವಿಡ್ಸನ್ ಬೈಕ್ ತೆಗೆದುಕೊಳ್ಳಬೇಕೆಂಬುದು ನನ್ನ ಕನಸು
ಆದ್ದರಿಂದ ತುಂಬಾ ಕಷ್ಟ ಬಿದ್ದು ಹಣವನ್ನು ಸಂಪಾದಿಸಿದ್ದೇನೆ ಅಂದ.

ಭಿಕ್ಷುಕನ ರೀತಿಯಲ್ಲಿ ಕಾಣುವ ಆ ವಯಸ್ಸಾದ ವ್ಯಕ್ತಿ ಮಾತುಗಳನ್ನು ಕೇಳಿ ಅವರ ಬಾಯಿಂದ ಬಂದ ಏಕೈಕ ಪದ ಸಾರ್ ಕುಳಿತುಕೊಳ್ಳಿ ಅಂತ

ಸಾರ್ ಕುಳಿತುಕೊಳ್ಳಿ ಈಗಲೇ ಈ ಬೈಕನ್ನು ಡೆಲಿವರಿ ಕೊಡ್ತೀವಿ ಅಂತ ಗೌರವದಿಂದ ಹೇಳ್ತಾರೆ ಇದಕ್ಕೂ ಮುಂಚೆ ಆತ ನನ್ನ ಯಾರ್ಯಾರು ಅವರನ್ನು ನೂಕಿದರೊ ಅವರು ತನ್ನ ಮುಂದೆ ತಲೆ ತಗ್ಗಿಸುತ್ತಾ ಬೈಕ್ ಡೆಲಿವರಿ ಮಾಡ್ತಾರೆ.

ಒಬ್ಬ ಮನುಷ್ಯನನ್ನು ನೋಡಿ ಎಷ್ಟರವರೆಗೆ ನಾವು ತೂಕ ಹಾಕಿಕೊಳ್ಳಬೇಕು
ಮತ್ತು
ಎಷ್ಟರವರೆಗೆ ಅವರ ವ್ಯಕ್ತಿತ್ವದ ಬಗ್ಗೆ ಆಲೋಚನೆ ಮಾಡಬೇಕು ಅಂತ
ನಮ್ಮ ವೇಷ ಭಾಷೆಗಳಿಂದ ನಮಗೆ ಗೌರವ ಕೊಡ್ತಾರೆ
ಅಂದ್ರೆ ಅದು ತುಂಬಾ ದೊಡ್ಡ ತಪ್ಪು ನಿಮ್ಮ ಒಂದು ಸಾಧನೆಯೇ ನಿಮ್ಮ ಒಂದು ಗೌರವದ ಒಂದು ಸೂಚನೆಯಾಗಿರುತ್ತದೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here