ಜೀವನವಿಡೀ ಮೂರ್ಖರಾಗಿ! ಅಥವಾ ಈ ನಾಲ್ಕು ಮಾತಿನಿಂದ ಯಾರನ್ನಾದರೂ ಪರೀಕ್ಷಿಸಿ

0
93

ಪ್ರಸಿದ್ಧ ಕವಿಯೊಬ್ಬರು ಯಾರನ್ನೂ ಪರೀಕ್ಷಿಸಬೇಡಿ. ಪರೀಕ್ಷಿಸಿದರೆ ಯಾರೂ ನಮ್ಮವರು ಎಂದು ಯಾರೂ ಇರುವುದಿಲ್ಲ. ಯಾವುದೇ ಕನ್ನಡಿಯಲ್ಲಿ ನಮ್ಮ ಮುಖವೂ ಕೂಡ ಇರುವುದಿಲ್ಲ. ಆದರೆ ನಿಮಗೆ ಹತ್ತಿರವಾದ ಮನುಷ್ಯನನ್ನು ಪರೀಕ್ಷಿಸಲೇಬೇಕು. ಒಂದು ವೇಳೆ ಅವರಿಂದಲೇನಾದರೂ ನಿಮಗೆ ಮೋಸವಾದರೆ ಅದರಿಂದ ನಿಮಗೆ ತಂಬಾನೆ ಹಾನಿಯಾಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರಲ್ಲಿ ಒಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ. ಆತ ಹೇಗಿದ್ದಾನೆ, ಆತನ ವ್ಯಕ್ತಿತ್ವ ಎಂಥಹದ್ದು?, ಆ ವ್ಯಕ್ತಿ ಹೇಗೆ ನಿರ್ಧರಿಸುತ್ತಾನೆ? ಎಂಬುದು ಕಾಡುತ್ತಲೇ ಇರುತ್ತದೆ.
ದೇಶದ ಅತ್ಯಂತ ಪ್ರತಿಭಾನ್ವಿತ ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿ ತಜ್ಞ ಚಾಣಕ್ಯ ಯಾವ ವ್ಯಕ್ತಿಯಿಂದ ನಿಮಗೆ ಹಾನಿಯಾಗುತ್ತದೆ ಎಂಬುದನ್ನು ತಿಳಿಯಲು ಈ ನಾಲ್ಕು ವಿಷಯಗಳ ಮೇಲೆ ಗಮನ ಹರಿಸುವಂತೆ ತಿಳಿಸಿದ್ದಾನೆ.
ಬಂಗಾರವನ್ನು ಪರೀಕ್ಷೆ ಮಾಡಬೇಕಾದರೆ ನಾವು ನಾಲ್ಕು ಕೆಲಸ ಮಾಡಬೇಕಾಗುತ್ತದೆ. ಬಂಗಾರವನ್ನು ತೆರೆಯಬೇಕು, ಕತ್ತರಿಸಬೇಕು ಮತ್ತು ಬೆಂಕಿಯಲ್ಲಿ ಹಾಕಬೇಕು ಹಾಗೂ ಬಂಗಾರ ಹೊಡೆದು ಪರೀಕ್ಷಿಸಬೇಕಾಗುತ್ತದೆ. ಆಗ ಬಂಗಾರದಲ್ಲಿ ಏನಾದರೂ ಲೋಹಗಳ ಮಿಶ್ರಣ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಯಾರನ್ನಾದರೂ ಪರೀಕ್ಷೆ ಮಾಡಬೇಕಾದರೆ ಹೀಗೆ ನಾಲ್ಕು ರೀತಿಯಲ್ಲಿ ಪರೀಕ್ಷೆ ಮಾಡಬೇಕು.
• ತ್ಯಾಗದ ಭಾವನೆಯನ್ನು ಎಲ್ಲರಲ್ಲಿಯೂ ಪರೀಕ್ಷೆ ಮಾಡುವುದು ಪ್ರಮುಖವಾಗುತ್ತದೆ.
• ಯಾವುದೇ ವ್ಯಕ್ತಿಯ ಚಾರಿತ್ರ್ಯದಲ್ಲಿ ದೋಷವಿದ್ದರೆ ಹಾಗೂ ವಿಚಾರಗಳಲ್ಲಿ ಕೂಡ ದೋಷವಿದ್ದರೆ ಅವರಿಂದ ದೂರವಿರುವುದು ಒಳ್ಳೆಯದು.
• ಯಾವುದೇ ವ್ಯಕ್ತಿಯನ್ನು ಪರೀಕ್ಷೆ ಮಾಡುವಾಗ ಅವರ ಗುಣಗಳನ್ನು ನೋಡಿ ಬದಲಾಗಿ ಸೌಂದರ್ಯಕ್ಕೆ ಮಾರು ಹೋಗಬೇಡಿ.
• ಯಾವುದೇ ವ್ಯಕ್ತಿಯ ಕರ್ಮವನ್ನು ನೋಡಬೇಕು. ಹಣದ ಹಿಂದೆ ಬೀಳುವ ವ್ಯಕ್ತಿಯನ್ನು ಎಂದಿಗೂ ನಂಬಬಾರದು ಎಂದಿದ್ದಾರೆ.
ಹೀಗೆ ಯಾವುದೇ ವ್ಯಕ್ತಿಯನ್ನು ಪರೀಕ್ಷೆ ಮಾಡಿ ಸ್ನೇಹ ಅಥವಾ ಸಂಬಂಧವನ್ನು ಬೆಳೆಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here