ಪೃಥ್ವಿ ಶಾ’ಗೆ ೮ ತಿಂಗಳ ನಿಷೇಧ ಹೇರಿದ ಬಿಸಿಸಿಐ.!

0
240

ಭಾರತ ತಂಡಕ್ಕೆ ಭರವಸೆಯ ಆಟಗಾರನಾಗಿ ಹೊರಹೊಮ್ಮುತ್ತಿದ್ದ, ಪೃಥ್ವಿ ಶಾ’ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ,ಪೃಥ್ವಿ ಕ್ರಿಕೆಟ್ ಪಯಣಕ್ಕೆ ಎಂಟು ತಿಂಗಳು ನಿಷೇಧ ಸೂಚಿಸಿದೆ. ಮಾದಕ ದ್ರವ್ಯ ಸೇವನೆ ಮಾಡಿದ ಆರೋಪ ಹಿನ್ನೆಲೆ ಪೃಥ್ವಿ ಶಾ’ಗೆ ಎಂಟು ತಿಂಗಳ ಕಾಲ ನಿಷೇಧಕ್ಕೆ ಒಳಪಡಿಸಿದ್ದಾರೆ. ಕಳೆದ ವರ್ಷ ೨೦೧೮ರಲ್ಲಿ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ನಿಷೇಧಿತ ಟರ್ಬೊಟಲಾಯನ್(Tarbutaline) ಸೇವನೆ ಮಾಡಿದ್ದ ಹಿನ್ನೆಲೆಯಲ್ಲಿ, ನಿಷೇಧವನ್ನು ಹೇರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೃಥ್ವಿ ಶಾ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹೇಳಿದ್ದು, ನನಗೆ ಕೆಮ್ಮು ಮತ್ತು ನೆಗಡಿ ಇದ್ದ ಕಾರಣ ಕೆಲ ಔಷಧ ತೆಗೆದುಕೊಂಡಿದ್ದೆ,ಅದರೆ ಇದು ಅದರೊಳಗೆ ಮಿಶ್ರಿತ ಆಗಿರುವುದು ನನಗೆ ತಿಳಿದಿಲ್ಲ.! ಎಂದು ಖಚಿತಪಡಿಸಿದ್ದಾರೆ.

ಆದರೆ ಇದು ಕಾನೂನು ರೀತಿಯಲ್ಲಿ ತಪ್ಪಾಗಿರುವ ಕಾರಣ ಇದಕ್ಕೆ ಸೂಕ್ತ ಕ್ರಮದಲ್ಲಿ ಶಿಕ್ಷೆ ವಿಧಿಸಬೇಕಾಗಿದ್ದು, ಈಗ ಪೃಥ್ವಿ ಶಾ ಕ್ರಿಕೆಟ್ ಪಯಣಕ್ಕೆ ಎಂಟು ತಿಂಗಳ ಕಾಲ ಬ್ರೇಕ್ ನೀಡಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.

LEAVE A REPLY

Please enter your comment!
Please enter your name here