ಬಿಬಿಎಂಪಿ ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ..!

0
205

ಉದ್ಯೋಗವನ್ನು ಹರಸಿಕೊಂಡು ಹಲವರು ಗ್ರಾಮೀಣ ಪ್ರದೇಶಗಳು, ನಗರ ಪ್ರದೇಶಗಳಿಂದ ಬೆಂಗಳೂರಿಗೆ ಬರುವುದು ಸಹಜವಾಗಿದೆ. ಸಾವಿರಾರು ಮಂದಿ ಅದರಲ್ಲೂ ಹೆಚ್ಚಾಗಿ ಇಂದಿನ ಯುವಕರು ಉದ್ಯೋಗ ನಿರೀಕ್ಷೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಆನ್ಲೈನ್ ಮೂಲಕ ಪರೀಕ್ಷೆಗಳನ್ನು ಬರೆದು ಕೆಲಸ ಪಡೆಯಬೇಕಾಗಿದೆ. ಉದ್ಯೋಗ ಹರಸಿ ಬರುವ ಅಭ್ಯರ್ಥಿಗಳು ಇಂದು ಆನ್ಲೈನ್ ಮೂಲಕವೇ ಅರ್ಜಿ ನೋಂದಾಯಿಸಬೇಕಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಉದ್ಯೋಗಕಾಂಕ್ಷಿಗಳನ್ನು ಗಮನದಲ್ಲಿ ಇಟ್ಟುಕೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಗಳ ವೇಳಾಪಟ್ಟಿ ಸುದ್ದಿಯನ್ನು ತಮ್ಮ ಅಧಿಕೃತ ವೆಬ್ ಸೈಟ್’ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭ್ಯರ್ಥಿಗಳಿಗೆ ಸುದ್ದಿ ರವಾನಿಸುತ್ತದೆ.

ಇದೇ ರೀತಿ ಕರ್ನಾಟಕ ರಾಜಧಾನಿ ಬೆಂಗಳೂರಿನ ‘ಬಿಬಿಎಂಪಿ’ ಘನತ್ಯಾಜ್ಯ ವಿಭಾಗದಲ್ಲಿ ಸರಿ ಸುಮಾರು ೪,೦೦೦ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಈಗಾಗಲೇ ಪ್ರಕಟಿಸಿದ ಬಿಬಿಎಂಪಿ ಪ್ರಕಟಣೆ ಮಾಡಿರುವ ಅನುಸಾರ ನಾಲ್ಕು ಸಾವಿರ ಹುದ್ದೆಗಳಿದ್ದು, ಉದ್ಯೋಗಕಾಂಕ್ಷಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಹುದ್ದೆಗಳು ‘ಗ್ರೂಪ್ ಡಿ ವೃಂದದ’ ಪೌರಕಾರ್ಮಿಕ ಹುದ್ದೆಗಳಾಗಿವೆ. ಅರ್ಜಿ ಸಲ್ಲಿಸಲು ನಿಗದಿಯಾಗಿರುವ ದಿನಾಂಕ ಸೆಪ್ಟೆಂಬರ್ ೦೯-೦೯-೨೦೧೯ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ ೦೯-೧೦-೨೦೧೯ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ. ಅರ್ಜಿಯ ಶುಲ್ಕ ಪಾವತಿ ಮಾಡಲು ಕಡೆಯ ದಿನಾಂಕ ಅಕ್ಟೋಬರ್ ೦೯ ೨೦೧೯, ಈ ಬಗ್ಗೆ ಹೆಚ್ಚು ಮಾಹಿತಿಗಾಗಿ ಬಿಬಿಎಂಪಿ ತನ್ನ ಅಧಿಕೃತ ವೆಬ್’ಸೈಟ್ನಲ್ಲಿ ಶೀಘ್ರವೇ ಲಿಂಕ್ ಅಳವಡಿಸಲಿದೆ, ಆಸಕ್ತರು ವೆಬ್ಸೈಟ್ನಲ್ಲಿ ಲಿಂಕ್ ಮೂಲಕ ಮಾಹಿತಿ ಕಲೆ ಹಾಕಬಹುದು.

LEAVE A REPLY

Please enter your comment!
Please enter your name here