ಟ್ರಾಫಿಕ್ ಪೊಲೀಸರು ಧಾರ್ಮಿಕ ಗುರುಗಳ ಮೊರೆ ಹೋಗಿದ್ದಾದರೂ ಯಾಕೆ ಗೊತ್ತಾ.??

0
192

ಟ್ರಾಫಿಕ್ ಪೊಲೀಸರು ರಸ್ತೆ ಸಂಚಾರ ನಿಯಮ ಪಾಲಿಸದೆ ಹೋಗುವ ವಾಹನ ಸವಾರರ ಕುರಿತು ಕೆಲ ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಸ್ತೆ ಸಂಚಾರದ ನಿಯಮದ ಪ್ರಕಾರ ಇಂದು ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಭಾರಿ ದಂಡವನ್ನು ಹೇರಲಾಗುತ್ತಿದೆ. ರಾಜ್ಯದ ಎಲ್ಲೆಡೆ ವಾಹನ ಸವಾರರಿಗೆ ಪ್ರತ್ಯೇಕವಾಗಿ ಆಯಾ ನಿಯಮ ಉಲ್ಲಂಘನೆಗೆ ದಂಡವನ್ನೂ ವಿಧಿಸಲಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ ವಾಹನ ಸವಾರರ ದಟ್ಟಣೆ ಹೆಚ್ಚಿರುವುದರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೂ ಒಂದು ರೀತಿಯಲ್ಲಿ ಒತ್ತಡದ ಸಮಯ ಎಂದೇ ಹೇಳಬಹುದು.

ನಿಯಮ ಉಲ್ಲಂಘಿಸಿದ ಸವಾರರಿಗೆ ಈಗಾಗಲೇ ಟ್ರಾಫಿಕ್ ಪೊಲೀಸರು ವಿಶೇಷ ರೀತಿಯಲ್ಲಿ ದಂಡವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ದಂಡದ ಪಟ್ಟಿ ಯಾವಾಗ ಹೆಚ್ಚಾಯಿತೋ.! ಆ ಸಮಯದಿಂದ ವಾಹನ ಸವಾರರು ಟ್ರಾಫಿಕ್ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ತಮ್ಮ ದರ್ಪ ತೋರಿಸುತ್ತಿದ್ದಾರೆ. ಟ್ರಾಫಿಕ್ ಪೊಲೀಸರ ವಿರುದ್ಧ ಹರಿಹಾಯುವ ವಾಹನ ಸವಾರರು ನಿಯಮ ಉಲ್ಲಂಘಿಸುವುದನ್ನು ಹೆಚ್ಚು ಮಾಡುತ್ತಿದ್ದಾರೆ ಎನ್ನಬಹುದು. ಇದರಿಂದ ಬೇಸತ್ತು ಹೋಗಿರುವ ಬೆಂಗಳೂರಿನ ಹೆಬ್ಬಾಳ ಟ್ರಾಫಿಕ್ ಪೊಲೀಸರು ಜನರು ಯಾವ ರೀತಿಯಲ್ಲೂ ರಸ್ತೆ ಸಂಚಾರದ ನಿಯಮದ ಬಗ್ಗೆ ಜಾಗ್ರತೆ ತೆಗೆದುಕೊಳ್ಳುತ್ತಿಲ್ಲ.

ತಮ್ಮ ಮಾತನ್ನು ಕೇಳದೆ ಹೋಗುತ್ತಿರುವುದನ್ನು ಗಮನಿಸಿದ ಹೆಬ್ಬಾಳ ಪೊಲೀಸರು ಧಾರ್ಮಿಕ ಗುರುಗಳ ಮೊರೆ ಹೋಗಿದ್ದಾರೆ. ಹೌದು, ನಂಬಿಕೆಯ ಮೂಲಕವಾದರೂ ಜನರನ್ನು ದಾರಿಗೆ ತರಬಹುದ.? ಎಂಬ ಯೋಚನೆ ಮಾಡಿದ್ದಾರೆ. ಧಾರ್ಮಿಕ ಗುರುಗಳ ಮೂಲಕ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲು ಹೆಬ್ಬಾಳ ಪೊಲೀಸರು ಗುರುಗಳ ಮೊರೆ ಹೋಗಿದ್ದು, ಈ ರೀತಿಯ ಒಂದು ಹೊಸ ಪ್ರಯೋಗವನ್ನು ಮಾಡುವ ಮೂಲಕ ಗುರುಗಳಿಂದಲೇ ಒಂದು ಸಲಹೆಯನ್ನು ಕೊಡುವ ನಿಟ್ಟಿನಲ್ಲಿ ಒಂದು ಪ್ಲಾನ್ ರೂಪಿಸಿದ್ದಾರೆ ಎನ್ನಬಹುದು.

ಚರ್ಚ್ ,ಮಸೀದಿ ,ದೇವಸ್ಥಾನ ಹೀಗೆ ಎಲ್ಲಿ ಜನ ನಂಬಿಕೆಯಿಟ್ಟು ಹೋಗುತ್ತಾರೋ, ಯಾರ ಮಾತನ್ನು ಕೇಳುತ್ತಾರೋ.! ಅಂಥವರ ಬಳಿ ಸಂಚಾರಿ ನಿಯಮಗಳನ್ನು ಹೇಳಿಸುವ ವಿನೂತನ ಪ್ರಯತ್ನಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಹೆಬ್ಬಾಳ ಪೊಲೀಸರು.

LEAVE A REPLY

Please enter your comment!
Please enter your name here