ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ : ಪಿಜಿ ಸೇರಿಸುವ ಮುನ್ನ ಯೋಚಿಸಿ!

0
252

ಇತ್ತೀಚಿಗೆ ಭಾರತಾದ್ಯಂತ ಅತ್ಯಾಚಾರಗಳು,ಲೈಂಗಿಕ ದೌರ್ಜನ್ಯ ಎಸಗುವುದು ದಿನೇ ದಿನೇ ಹೆಚ್ಚುತ್ತಿದೆ. ಮನೆಯ ಮಾಲೀಕನೇ ಕೆಲಸಕ್ಕೆ ಬರುವ ಯುವತಿಯರನ್ನು ತಮ್ಮ ಕಾಮದಾಸೆಗೆ ಬಳಸಿಕೊಳ್ಳುವುದು, ಅಷ್ಟೇ ಅಲ್ಲದೆ ಸಣ್ಣಪುಟ್ಟ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವ ಕಿಡಿಗೇಡಿಗಳ ಸಂಖ್ಯೆಯು ಹೆಚ್ಚುತ್ತಿದೆ. ದೇಶದ ವ್ಯವಸ್ಥೆ ಹದಗೆಟ್ಟಿದೆಯೋ ಅಥವಾ ಜನರ ಮನೋಭಾವ ಸರಿಯಿಲ್ಲವೊ ದೇವನೆ ಬಲ್ಲ. ಒಟ್ಟಾರೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಇದೇರೀತಿ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪಿಜಿ ಮಾಲೀಕನೊಬ್ಬ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಪಿಜಿಯಲ್ಲಿ ಮಾಲೀಕನು ಪತ್ನಿ ಇಲ್ಲದ ಸಮಯದಲ್ಲಿ, ತನ್ನ ಪಿಜಿಯಲ್ಲಿದ್ದ 19 ವರ್ಷದ ಯುವತಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವತಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಒಡಿಶಾ ಮೂಲದ ಯುವತಿ ಇಂಜಿನಿಯರಿಂಗ್ ಮಾಡಲು ಬೆಂಗಳೂರಿಗೆ ಬಂದಿದ್ದು ತನ್ನ ಕಾಲೇಜು ಸಮೀಪದ ವಿಶ್ವನಾಥಪುರದ ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿದ್ದ ಪಿಜಿಗೆ ಸೇರಿದ್ದಾಳೆ. ಪಿಜಿಯ ಮಾಲೀಕ ಕಟ್ಟಡದ ನೆಲ ಮಹಡಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು. ತನ್ನ ಪತ್ನಿ ಇಲ್ಲದ ಸಮಯ ನೋಡಿಕೊಂಡು ಯುವತಿಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ಎಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಆರೋಪಿ ಕೇಳುತ್ತಿರಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ತೆ ದೂರು ನೀಡಿದ್ದಾಳೆ

LEAVE A REPLY

Please enter your comment!
Please enter your name here