ಅನಿತಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬೆಂಗಳೂರು 69’ ಚಿತ್ರದ ಅಫಿಷಿಯಲ್ ಟೀಸರ್ ಬಿಡುಗಡೆಯಾಗಿದೆ. ಮೊನ್ನೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು. ಆದರೆ ಇದು ಇಂಟರ್ನೆಟ್ನಲ್ಲಿ ಲಭ್ಯವಿರಲಿಲ್ಲ. ಇದೀಗ ಚಿತ್ರತಂಡ ಟೀಸರನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದೆ.
ಉಗ್ರವಾದ ಕುರಿತು ಅಂತಾರಾಷ್ಟ್ರೀಯ ಪಿತೂರಿ ಅಂಶಗಳನ್ನು ಒಳಗೊಂಡಿರುವ ಕಥೆ ಇದಾಗಿದೆ. ಇನ್ನು ಈ ಚಿತ್ರದಲ್ಲಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ಜೋಡಿಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅನಿತಾ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೊಮ್ಯಾನ್ಸ್ ದೃಶ್ಯಗಳಲ್ಲಿ ಮೈ ಚಳಿ ಬಿಟ್ಟು ಅಭಿನಯಿಸಿದ್ದಾರೆ. ಅನಿತಾ ಬೋಲ್ಡ್ ಲುಕ್ಗೆ ಪಡ್ಡೆಗಳು ಫಿದಾ ಆಗಿದ್ದಾರೆ. ಚಿತ್ರದ ಪಾತ್ರಕ್ಕೆ ದೃಶ್ಯಗಳು ಅಗತ್ಯವಿದ್ದರಿಂದ ನಾನು ಒಪ್ಪಿಕೊಳ್ಳಬೇಕಾಯಿತು ಎಂದು ಅನಿತಾ ಹೇಳಿದ್ದಾರೆ.
ಇನ್ನು ಚಿತ್ರದ ನಾಯಕ ಪವನ್ ಶೆಟ್ಟಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್. ಚಿತ್ರಕ್ಕೆ ಜೈದೇವ್ ಚಿತ್ರಕಥೆ ಬರೆದಿದ್ದು, ಕ್ರಾಂತಿಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯಕ್ಕೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮುಂದಿನ ವರ್ಷ ಫೆಬ್ರವರಿಗೆ ಸಿನಿಮಾ ಬಿಡುಗಡೆಯಾಗಲಿದೆ.