ಎಸ್​​​​ಪಿಬಿ ಅವರನ್ನು ನೋಡಿದರೆ ವಿಷ್ಣುವರ್ಧನ್​​ ನೆನಪಾಗುತ್ತಾರೆ ಎಂದು ಭಾವುಕರಾದ ಭಾರತಿ

0
148

ಗಾನ ಗಾರುಡಿಗ, ತಮ್ಮ ಸಾವಿರಾರು ಹಾಡುಗಳಿಂದ ಕೋಟ್ಯಂತರ ಮನಸ್ಸುಗಳನ್ನು ಕದ್ದ ಖ್ಯಾತ ಗಾಯಕ ಎಸ್​​​.ಪಿ. ಬಾಲಸುಬ್ರಮಣ್ಯಂ ಆಗಸ್ಟ್ 5 ರಿಂದ ಚೆನ್ನೈನ ಎಂಜಿಎಂ ಹೆಲ್ತ್​ಕೇರ್ ಆಸ್ಪತ್ರೆಯಲ್ಲಿ ಕೋವಿಡ್​​-19 ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಜೊತೆಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಕೂಡಾ ಬಳಲುತ್ತಿರುವ ಎಸ್​​​​ಪಿಪಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಎಸ್​​​ಪಿಪಿ ಪುತ್ರ ಚರಣ್ ಕೂಡಾ ಫೇಸ್​​ಬುಕ್ ಲೈವ್​​​ನಲ್ಲಿ ಪ್ರತಿದಿನ ತಂದೆ ಆರೋಗ್ಯದ ಬಗ್ಗೆ ಅಪ್​​ಡೇಟ್ ನೀಡುತ್ತಿದ್ದಾರೆ. ದೇಶ-ವಿದೇಶಿ ವೈದರು ಕೂಡಾ ಎಸ್​​​​ಪಿಬಿ ಅವರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯಕ್ಕೆ ಅವರಿಗೆ ಎಕ್ಮೋ ಮೆಷಿನ್ ಹಾಗೂ ವೆಂಟಿಲೇಟರ್​​​​ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಎಸ್​​​​ಪಿಬಿ ಶೀಘ್ರ ಗುಣಮುಖರಾಗಲೆಂದು ದೇಶ ಹಾಗೂ ವಿದೇಶದಲ್ಲಿರುವ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಪ್ರಾರ್ಥಿಸುತ್ತಿದ್ದಾರೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೂಡಾ ಎಸ್​​​​​ಪಿಬಿ ಅವರು ಆದಷ್ಟು ಬೇಗ ಗುಣಮುಖರಾಗಿ ವಾಪಸ್ ಬರಲಿ, ಅವರ ಹಾಡುಗಳನ್ನು ನಾವು ಮತ್ತೆ ಕೇಳುವಂತಾಗಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲ, ಎಸ್​​​.ಪಿ. ಬಾಲಸುಬ್ರಮಣ್ಯಂ ಅವರನ್ನು ನೋಡಿದರೆ ನನ್ನ ಪತಿ ವಿಷ್ಣುವರ್ಧನ್ ನೆನಪಾಗುತ್ತಾರೆ ಎಂದು ಡಾ. ವಿಷ್ಣುವರ್ಧನ್ ಹಾಗೂ ಎಸ್​​​.ಪಿ. ಬಾಲಸುಬ್ರಮಣ್ಯಂ ನಡುವಿನ ಒಡನಾಟವನ್ನು ಭಾರತಿ ಅವರು ನೆನೆದು ಭಾವುಕರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತರ ನಟರಿಗಿಂತ ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಿಗೆ ಎಸ್​​​​​ಪಿಬಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲೂ ‘ಬಂಧನ’ ಚಿತ್ರದ ಪ್ರೇಮದ ಕಾದಂಬರಿ…ಬರೆದೆನು ಕಣ್ಣೀರಲಿ…. ಹಾಡಂತೂ ಯಾವ ಕನ್ನಡಿಗರೂ ಮರೆಯಲು ಸಾಧ್ಯವಿಲ್ಲ. ಆ ಹಾಡಿನಲ್ಲಿ ಎಸ್​​​​ಪಿಬಿ ಅವರ ಹಾಡಿಗೆ ಡಾ. ವಿಷ್ಣುವರ್ಧನ್ ನಟಿಸಿರುವ ದೃಶ್ಯಗಳನ್ನು ನೋಡಿದರೆ ಒಬ್ಬ ಗಾಯಕ ಈ ರೀತಿ ಹಾಡಲು ಸಾಧ್ಯವೇ ಎಂದು ಆಶ್ಚರ್ಯವಾಗುತ್ತದೆ. ಇನ್ನು ಡಾ. ವಿಷ್ಣುವರ್ಧನ್ ಎಸ್​​​​ಪಿಬಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನನ್ನ ಚಿತ್ರದ ಹಾಡುಗಳಿಗೆ ಎಸ್​​​​ಪಿಬಿ ಅವರು ಹಾಡಲೇಬೇಕು. ಅವರು ಹಾಡಿದರೆ ಮಾತ್ರ ನನಗೆ ನಟಿಸಲು ಸ್ಪೂರ್ತಿ ಸಿಗುತ್ತದೆ ಎಂದು ಹೇಳುತ್ತಿದ್ದರಂತೆ.

6 ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಎಸ್​​​ಪಿಬಿ ಅವರು ಗಾಯಕನಾಗಿ ಮಾತ್ರವಲ್ಲ ನಟ, ಕಂಠದಾನ ಕಲಾವಿದ, ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. 1981 ರಲ್ಲಿ ಒಮ್ಮೆ ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಬೆಳಗ್ಗೆ 9 ರಿಂದ ಸಂಜೆ 9 ವರೆಗೆ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರ 21 ಹಾಡುಗಳನ್ನು ಎಸ್​​​ಪಿಬಿ ರೆಕಾರ್ಡ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಸುಮಾರು 40 ಸಾವಿರ ಹಾಡುಗಳನ್ನು ಎಸ್​​​​ಪಿಬಿ ಹಾಡಿದ್ದಾರೆ.

3 ದಿನಗಳ ಹಿಂದೆ ಎಸ್​​​.ಪಿ. ಬಾಲಸುಬ್ರಮಣ್ಯಂ ಶೀಘ್ರ ಚೇತರಿಸಿಕೊಳ್ಳಲೆಂದು ಚೆನ್ನೈನಲ್ಲಿ ಜಾಗತಿಕ ಪ್ರಾರ್ಥನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿದಿನವೂ ಪ್ರತಿಯೊಬ್ಬರೂ ಅವರು ಆರೋಗ್ಯವಂತರಾಗಿ ಗುಣಮುಖರಾಗಿ ಬಂದು ಮತ್ತೆ ಹಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here