ಯಡಿಯೂರಪ್ಪಗೆ ಖಡಕ್ ವಾರ್ನಿಂಗ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ..!

0
211

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡಾಯ ಭುಗಿಲೆದ್ದಿದೆ. ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ದೊಡ್ಡ ಮಟ್ಟದಲ್ಲಿ ಭುಗಿಲೆದ್ದಿದೆ. ಬಿಜೆಪಿ ಅನೇಕ ಶಾಸಕರುಗಳು ತಮ್ಮ ಆಕ್ರೋಶವನ್ನು ಮಾದ್ಯಮಗಳ ಮುಂದೆ ನೇರವಾಗಿ ಹೊರಹಾಕುತ್ತಿದ್ದಾರೆ. ಇದೀಗ ಅರಬಾವಿ ಕ್ಷೇತ್ರದ ಪ್ರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಿಎಂ ಯಡಿಯೂರಪ್ಪನವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಮಾತು ಬಿಜೆಪಿ ನಾಯಕರನ್ನು ಬೆಚ್ಚಿಬೀಳಿಸಿದೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು ಲಕ್ಷ್ಮಣ್ ಸವದಿಯವರನ್ನು ಮಂತ್ರಿ ಮಾಡಿರುವುದು ಬೆಳಗಾವಿ ಭಾಗದ ಶಾಸಕರುಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿಯವರು ಬಹಿರಂಗವಾಗಿಯೇ ಸಿಎಂ ಯಡಿಯೂರಪ್ಪ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಉಮೇಶ್ ಕತ್ತಿ, ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಕುಟುಂಬ ಹೀಗೆ ಮೂರು ಬಣಗಳಿರುವುದನ್ನು ಬಾಲಚಂದ್ರ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಇನ್ನು ರಾಜಕೀಯವಾಗಿ ಜಾರಕಿಹೊಳಿ ಕುಟುಂಬವನ್ನು ಹಣೆಯಲು ಕೆಲವರು ಪರೋಕ್ಷವಾಗಿ ಯತ್ನಿಸುತ್ತಿದ್ದಾರೆಂಬುದಾಗಿ ಹೇಳಿದ ಬಾಲಚಂದ್ರ ಜಾರಕಿಹೊಳಿ, “ತಮ್ಮ ಕುಟುಂಬದ ಮೇಲೆ ಜನರ ಆಶೀರ್ವಾದ ಇರುವವರೆಗೆ ಯಾರೂ ಏನೂ ಮಾಡಲಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕುಟುಂಬದಿಂದ ಯಾರು ಸಚಿವರಾಗಿಲ್ಲ, ಆದ್ರೆ ಮುಂದಿನ ದಿನಗಳಲ್ಲಿ ನಮ್ಮ ಕುಟುಂಬಕ್ಕೆ ಪ್ರಭಾವಿ ಖಾತೆಯೇ ಸಿಗಲಿದೆ” ಎಂದಿದ್ದಾರೆ. ಬಾಲಚಂದ್ರ ಜಾರಕಿಹೊಳಿಯ ಈ ಮಾತು ಕೇಳಿದ ಯಡಿಯೂರಪ್ಪ ತಲ್ಲಣಗೊಂಡಿದ್ದಾರೆ.

LEAVE A REPLY

Please enter your comment!
Please enter your name here