ಬಿಎಸ್ವೈಗೆ ಒಂದು ಕಂಡೀಷನ್ ಮುಂದಿಟ್ಟ ಬಾಲಚಂದ್ರ ಜಾರಕಿಹೊಳಿ..!

0
3332

ಮಂಗಳವಾರ ರಾಜ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಸಚಿವ ಸಂಪುಟ ರಚನೆಗೆ ಸಿದ್ಧತೆಗಳನ್ನು ಮಾಡಿಕೊಂಡರು. ತಮ್ಮ ಪಕ್ಷದ ೧೭ ಶಾಸಕರಾದ ಶ್ರೀರಾಮುಲು, ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ, ನಾಗೇಶ್, ಗೋವಿಂದ್ ಕಾರಜೋಳ, ಶಶಿಕಲಾ ಜೊಲ್ಲೆ, ವಿ. ಸೋಮಣ್ಣ, ಆರ್. ಅಶೋಕ್, ಅಶ್ವಥ್ ನಾರಾಯಣ,ಸಿ.ಟಿ.ರವಿ, ಬಸವರಾಜ್ ಬೊಮ್ಮಾಯಿ, ಸಿಸಿ ಪಾಟೀಲ್, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಲಕ್ಷ್ಮಣ ಸಾವಡಿ ಸೇರಿದಂತೆ ಒಟ್ಟು ೧೭ ಶಾಸಕರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಕರ್ತವ್ಯಗಳನ್ನು ಹೊತ್ತುಕೊಂಡರು.

ಇದಾದ ಬಳಿಕ ಎಲ್ಲ ಮುಗಿಯಿತು ಅನ್ನುವಷ್ಟರಲ್ಲಿ ಬಿಎಸ್ ವೈಗೆ ಶಾಕ್ ನೀಡಿದ್ದಾರೆ, ಬಾಲಚಂದ್ರ ಜಾರಕಿಹೊಳಿ ಹೌದು, ಸಿ.ಎಂ. ಯಡಿಯೂರಪ್ಪನವರಿಗೆ ಒಂದು ‘ಕಂಡೀಷನ್’ ಹಾಕುವ ಮೂಲಕ ಶಾಕ್ ನೀಡಿದ್ದಾರೆ. ಅಣ್ಣ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಇಲ್ಲವೇ ಪ್ರಮುಖ ಖಾತೆಯನ್ನು ನೀಡಬೇಕು! ನನಗಂತೂ ಸಚಿವ ಸ್ಥಾನವನ್ನು ನೀವು ನೀಡಲಿಲ್ಲ, ಆದರೂ ಪರವಾಗಿಲ್ಲ. ನಮ್ಮ ಅಣ್ಣ ರಮೇಶ್ ಜಾರಕಿಹೊಳಿ ಅವರಿಗೆ ದೊಡ್ಡ ಹುದ್ದೆ,ಪ್ರಭಾವಿ ಖಾತೆಯನ್ನು ಕಾಯ್ದಿರಿಸಬೇಕು ಎಂದು ಹೇಳಿ ಕಂಡೀಷನ್ ಹಾಕಿದ್ದಾರೆ ಬಾಲಚಂದ್ರ ಜಾರಕಿಹೊಳಿ.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ದೊಡ್ಡ ಹುದ್ದೆ ಅಂದರೆ ಯಾವ ರೀತಿ.? ಎಂದಾಗ, ಬಾಲಚಂದ್ರ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಜಲಸಂಪನ್ಮೂಲ ಖಾತೆ ನೀಡಬೇಕು. ಈ ಎರಡು ಸ್ಥಾನಗಳನ್ನು ಪ್ರತ್ಯೇಕವಾಗಿ ನಮಗೆ ಕಾಯ್ದಿರಿಸಬೇಕು. ಹಾಲಿ ಸಚಿವರ ಪೈಕಿ ಯಾರಿಗೂ ಕೊಡಬೇಡಿ ಎಂದು ಆಗ್ರಹಿಸಿ ಬಿಎಸ್ ವೈಗೆ ತಿಳಿಸಿದ್ದಾರೆ. ಇದನ್ನು ಆಲಿಸಿದ ಬಿಎಸ್ವೈ, ಮುಂದೆ ನೋಡೋಣ, ಕೊಡುವ ವಿಚಾರವನ್ನು ಮುಂದೆ ಪ್ರಸ್ತಾಪ ಮಾಡೋಣ, ನನಗೆಲ್ಲ ತಿಳಿದಿದೆ. ಈಗ ನೀನು ಸಮಾಧಾನ ಮಾಡಿಕೋ! ಎಂದು ಸಮಾಧಾನಕರ ಮಾತನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here