ಬಾಹ್ಯಕಾಶದ ‘ಬಕಾಸುರ’ ಕಪ್ಪು ರಂಧ್ರ..!!!

0
169

ಬಾಹ್ಯಕಾಶದಲ್ಲಿರುವ ಕಪ್ಪು ರಂಧ್ರ (black whole) ಇದರ ಬಗ್ಗೆ ಹೊಸದಾಗಿ ಯಾರ ಬಳಿ ಕೇಳಿದರೂ ಸ್ವಲ್ಪ ಭಯ ಪಡುವುದು ಸಹಜ. ಇವು ಒಂದು ರೀತಿ ಗಗನದಲ್ಲಿರುವ ಬಕಾಸುರರ ತರಹ ಕೈಗೆ ಸಿಕ್ಕಿದೆಲ್ಲ ನುಂಗಿ ಹಾಕುವಂತಹವು. ಆದರೆ ಸಧ್ಯಕ್ಕೆ ಅವುಗಳಿಂದ ನಮಗೆ ಯಾವುದೇ ರೀತಿಯ ತೊಂದರೆಗಳಿಲ್ಲ ಎಂದು ತಿಳಿದ ಮೇಲೆ ವಿಸ್ಮಯಗಳ ಗುಂಪಿಗೆ ಸೇರಿಸಿ ಸುಮ್ಮನಾಗಿದ್ದೇವೆ. ಕಪ್ಪು ರಂಧ್ರ ಅಂದರೆ ಈ ಸೂರ್ಯ,ಚಂದ್ರ,ನಕ್ಷತ್ರಗಳ ತರಹವೇ ಒಂದು ಆಕಾಶಕಾಯ. ಆದರೆ ಇದರ ಪ್ರಮುಖ ವೈಶಿಷ್ಟ್ಯವೆನೆಂದರೆ ಇದು ಕಪ್ಪಗಿರುತ್ತದೆ. ಮತ್ತೆ ಇದರ ಗುರುತ್ವಾಕರ್ಷಣಾ ಶಕ್ತಿ ಪ್ರಬಲವಾಗಿರುತ್ತದೆ.

ಅತಿ ವೇಗವಾಗಿ ರುವುದು,ಮನುಷ್ಯನಿಗೆ ಗೊತ್ತಿರುವುದು ಅಂದರೆ ಬೆಳಕು.

ಬೆಳಕು ಒಂದು ಕ್ಷಣಕ್ಕೆ 300 ಸಾವಿರ ಕಿ.ಮೀ ಹೋಗುತ್ತದೆ.ಅಂದರೆ ಒಂದು ಕ್ಷಣಕ್ಕೆ ಈಡೀ ಭೂಮಿಯನ್ನ 7.5 ಸಲ ಸುತ್ತಾಡಿ ಬರುತ್ತದೆ. ಅಷ್ಟು ವೇಗವಾಗಿ ಚಲಿಸುತ್ತದೆ. ಇಷ್ಟು ವೇಗವಾಗಿ ಚಲಿಸುವ ಬೆಳಕೇ ಕಪ್ಪುರಂಧ್ರದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ! ಅಂದರೆ ನೀವೆ ಊಹೆ ಮಾಡಿ ನೋಡಿ. ಈ ಕಪ್ಪುರಂಧ್ರ ಕಪ್ಪಗಿರಲು ಇದೇ ಕಾರಣ, ಏಕೆಂದರೆ ಅದರಿಂದ ಹೋರಗೆ ಬಂದರೆ ತಾನೇ ನಮಗೆ ಕಾಣುವುದು. ಇದರಿಂದ ಹೊರಗೆ ಏನು ಬರುವುದೇ ಇಲ್ಲ. ಆದರಿಂದ ಅದು ಕಪ್ಪಗಿರುತ್ತದೆ. ಈ ಕಪ್ಪುರಂಧ್ರಗಳು ವಿವಿಧ ಗಾತ್ರದಲ್ಲಿರುತ್ತದೆ.ಗಾತ್ರ ಜಾಸ್ತಿಯಾದಷ್ಟು ಸೆಳೆತ ಜಾಸ್ತಿ ಆಗುತ್ತಾ ಹೋಗುತ್ತದೆ. ಇಡೀ ಬಾಹ್ಯಕಾಶದಲ್ಲಿ ಇಂತಹ ಕಪ್ಪುರಂಧ್ರಗಳು ಬಹಳ ಇವೆ. ಈಗ ಕಪ್ಪುರಂಧ್ರವೆಂದರೆ ಏನು ಎಂಬ ಒಂದು ಪರಿಕಲ್ಪನೆ ನಿಮಗೆ ಬಂದಿರಬಹುದು.

LEAVE A REPLY

Please enter your comment!
Please enter your name here