ಬಿಎಸ್‍ವೈಗೆ ಇವರಿಂದಲೇ ಧರ್ಮ ಸಂಕಟ ಎದುರಾಗಿದೆ..!!

0
126

ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್. ಯಡಿಯೂರಪ್ಪ ಅವರು ಅಂದುಕೊಂಡ ಹಾಗೆ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಗಳು ಆದರೂ, ಜೊತೆಗೆ ಯಾವುದೇ ಅಡಚಣೆ ಇಲ್ಲದೆ ಸಿಎಂ ಸ್ಥಾನವನ್ನು ಅಲಂಕರಿಸಿ ಹಣಕಾಸು ಬಜೆಟ್ ಮಂಡನೆ ಕೂಡ ಮಾಡಿದ್ದಾರೆ. ಆದರೆ ಇಂದು ಬಿಜೆಪಿಗೆ ಸಚಿವ ಸಂಪುಟ ರಚನೆ ಮಾಡುವಲ್ಲಿ ‘ರಿವರ್ಸ್ ಆಪರೇಷನ್’ ಭೀತಿ ಎದುರಾಗಿದೆ. ಬಿಜೆಪಿ ಹೈಕಮಾಂಡ್’ಗೆ ಒತ್ತಡ ಹೇರಿದಂತಾಗಿದ್ದು, ಬಿಜೆಪಿಯ ೮ ರಿಂದ ೧೨ ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡುವ ವಿಚಾರವನ್ನು ಗುಪ್ತಚರ ಇಲಾಖೆಯಿಂದ ಅಧಿಕೃತವಾಗಿ ತಿಳಿದುಕೊಂಡ ಬಿಜೆಪಿ ಹೈಕಮಾಂಡ್ ಭಾರಿ ಶಾಕ್’ಗೆ ಒಳಗಾಗಿದೆ ಎನ್ನಬಹುದು. ಸಚಿವ ಸ್ಥಾನಗಳಿಗೆ ಹೋರಾಡುತ್ತಿರುವ ಶಾಸಕರು ತಮ್ಮಲ್ಲೇ ಸೆಣಸಾಡುತ್ತಿರುವುದು ಎಲ್ಲರ ಕಣ್ಣಿಗೆ ಕಾಣುವಂತಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಖಡಕ್ ಶಾಕ್ ನೀಡಲಿದೆ.!

ಜಗದೀಶ್ ಶೆಟ್ಟರ್, ವಿ ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಸಿ.ಎಂ. ಉದಾಸಿ,ಜೆ. ಸಿ.ಮಾಧುಸ್ವಾಮಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಬಸವನಗೌಡ ಯತ್ನಾಳ್, ಸಿ.ಸಿ. ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಇವರೆಲ್ಲ ಮಂತ್ರಿಗಿರಿಗಾಗಿ ಹೋರಾಡುತ್ತಿರುವ ಶಾಸಕರು. ಬಿಎಸ್ವೈಗೆ ಇವರೆ ದೊಡ್ಡ ಧರ್ಮ ಸಂಕಟವಾಗಿ ಎದುರಾಗಿದ್ದಾರೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here