ನಮ್ಮವರೇ ನನಗೆ ಮುಳ್ಳು : ಬಿ.ಎಸ್ ಯಡಿಯೂರಪ್ಪ.!

0
362

ರಾಜ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಪಕ್ಷ ಸದ್ಯ ಬೈ ಎಲೆಕ್ಷನ್ನಲ್ಲಿ ಜಯಭೇರಿಯನ್ನು ಗಳಿಸಿಕೊಂಡಿತು. ಅನರ್ಹರಿಗೆ ಟಿಕೆಟ್ ಕೊಟ್ಟು, ಅವರಿಗೆ ಮಾತುಕೊಟ್ಟು ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಬಿಜೆಪಿ ಪಕ್ಷ ಸದ್ಯ ಸುಭದ್ರವಾಗಿದೆ. ಆದರೂ ಕೂಡ ಯಡಿಯೂರಪ್ಪ ಅವರಿಗೆ ಒಂದು ತಲೆನೋವು ಎದುರಾಗಿದೆಯಂತೆ. ಹೌದು, ರಾತ್ರಿ- ಬೆಳಿಗ್ಗೆ ಎಂದು ನೋಡದೆ ಉಪ ಚುನಾವಣೆಗೆ ಶ್ರಮಿಸಿದ ಯಡಿಯೂರಪ್ಪ ಅವರಿಗೆ ತಮ್ಮವರೇ ದೊಡ್ಡ ಕಂಟಕವಾಗಿ ಎದುರಾಗಿದ್ದಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

 

 

ನಾನು ಸಿಎಂ ಆಗಲು ಏಳು ಕೆರೆ ನೀರು ಕುಡಿದು ಶ್ರಮ ವಹಿಸಿ ಬಂದಿದ್ದೇನೆ. ಆದರೆ ನಮ್ಮವರೇ ನನ್ನ ಸಿಎಂ ಕುರ್ಚಿಗೆ ಮುಳುವಾಗುತ್ತಿದೆ, ಅದೇ ನನಗೆ ಭಯ ಆಗಿದೆ, ಯೋಚನೆಯಾಗಿದೆ. ಕೆಲ ಆಪ್ತರೇ ನನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿ ಬಿಡ್ತಾರೆ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಬಿಜೆಪಿ ಪಕ್ಷದ ಕೋಟೆ ಸುಭದ್ರವಾಗಿದ್ದು, ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಪಕ್ಷದ ಆಂತರಿಕ ವಿಷಯದಲ್ಲಿ ನೋಡುವುದಾದರೆ, ಕೆಲ ಆಪ್ತರೇ ಅವರಿಗೆ ತೊಂದರೆಯಾಗಿದ್ದರೆ ಎಂಬುದು ತಿಳಿದು ಬಂದಿದೆ.

 

 

ನಮ್ಮ ಪಕ್ಷದವರೇ ನನ್ನ ಸಿಎಂ ಕುರ್ಚಿಗೆ ದೊಡ್ಡ ಮುಳುವಾಗಿದ್ದಾರೆ ಎಂಬ ಭಯ ಕಾಡುತ್ತಿದೆ ಎಂಬುದು ಖಚಿತವಾಗಿದೆ. ಕೊಟ್ಟ ಮಾತಿನ ಪ್ರಕಾರ ಗೆದ್ದವರಿಗೆ ಸಚಿವ ಸ್ಥಾನವನ್ನು ಕೊಡ್ತೇನೆ ಎಂದು ಹೇಳಿದ್ದೇನೆ ಅದನ್ನು ಮಾಡಲೇಬೇಕು. ಆದರೆ ಸಚಿವರೇ, ಆಪ್ತರೇ ಬೀದಿಗಿಳಿದು ಈ ರೀತಿ ಮಾಡುತ್ತಿರುವುದು ನನಗೆ ಬೇಸರ ತಂದಿದೆ. ಈಗಾಗಲೇ ನನ್ನ ಸಂಪುಟದಲ್ಲಿ ಏಳು ಜನರು ಲಿಂಗಾಯತ ಸಚಿವರು ಇದ್ದಾರೆ. ಆದರೆ ಮಹೇಶ ಕುಮಟಳ್ಳಿ ಲಿಂಗಾಯತ ಕೂಟಕ್ಕೆ ಸೇರಿದರೆ ೮ ಕ್ಕೆ ಏರುತ್ತೆ. ಆದರೆ ಹೈಕಮಾಂಡ್ ಒಪ್ಪಿಸಿ ಕತ್ತಿಗೆ ಸ್ಥಾನ ಕೊಟ್ಟರೂ ಲಿಂಗಾಯತ ಸಂಖ್ಯೆ ೯ ಕ್ಕೆ ಏರಿಕೆಯಾಗುತ್ತದೆ.

 

 

ಒಟ್ಟಾರೆಯಾಗಿ ಸರ್ಕಾರದಲ್ಲಿ ನನ್ನನ್ನೂ ಸೇರಿಸಿದಂತೆ ಲಿಂಗಾಯತ ಸಂಖ್ಯೆ ಹತ್ತಕ್ಕೆ ಏರುತ್ತೆ. ಕರ್ನಾಟಕದ ಇತಿಹಾಸದಲ್ಲಿ ಒಂದು ಜಾತಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟ ದಾಖಲೆಯಾಗುತ್ತೆ. ಅನ್ನೋ ಅಸಮಾಧಾನ ಕಾಡುತ್ತಿದೆ. ಜೊತೆಗೆ ಈ ನಡುವೆ ಇನ್ನೂ ಮೂರು ಜನ ಕ್ಯೂನಲ್ಲಿ ನಿಂತು ನನಗೂ ಸ್ಥಾನ ಬೇಕು ಅಂತಿದ್ದಾರೆ. ಇದನ್ನು ನಾನು ಹೇಗೆ ಬ್ಯಾಲೆನ್ಸ್ ಮಾಡಲಿ.? ನಮ್ಮವರೇ ನಮಗೆ ಮುಳುವಾದರೆ ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here