“ಸಿದ್ದರಾಮಯ್ಯನ್ನ ರಾಜಕೀಯವಾಗಿ ಮುಗಿಸೋಕೆ ಡಿಕೆ, ಡಿಕೆಯನ್ನು ರಾಜಕೀಯವಾಗಿ ಮುಗಿಸೋಕೆ ಸಿದ್ದರಾಮಯ್ಯ ಕಾಯ್ತಿದ್ದಾರೆ”..!

0
72

ಕೊಪ್ಪಳ: ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಒಬ್ಬೊಬ್ಬ ಸಚಿವರು ಚುನಾವಣೆ ಎದುರಾಗುತ್ತಿದ್ದಂತೆ ತಿರುಗಿಬೀಳೋದಕ್ಕೆ ಪ್ರಾರಂಭಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕೃಷಿ ಸಚಿವ ಬಿಸಿ ಪಾಟೀಲ್ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಬೇಕು ಎಂದಿದ್ದರೆ, ಸಿದ್ದರಾಮಯ್ಯ ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಬೇಕೆಂದಿದ್ದಾರೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಇಲ್ಲದಿದ್ದರೆ ಮೈತ್ರಿ ಸರ್ಕಾರದಿಂದ ಬಿಜೆಪಿಗೆ ಹೋದ 17 ಜನರ ಅಸ್ತಿತ್ವವಿರುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಸಿದ್ದರಾಮಯ್ಯಗೆ ಅದ್ಯಾಕೆ ಬಿಜೆಪಿ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳುತ್ತಾರೆಯೋ ಗೊತ್ತಾಗುತ್ತಿಲ್ಲ.

ಸಿದ್ದರಾಮಯ್ಯಗೆ ಡಿ.ಕೆ‌‌.ಶಿವಕುಮಾರ್ ಅವರನ್ನು ಸಂಬಾಳಿಸಿಕೊಂಡು ಹೋದರೆ ಸಾಕಾಗಿದೆ. ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಬೇಕು ಎಂದಿದ್ದರೆ, ಸಿದ್ದರಾಮಯ್ಯ ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಬೇಕೆಂದಿದ್ದಾರೆ. ಈ ನಡುವೆ ಇಬ್ಬರು ಜುಗಲ್ ಬಂದಿಯಂತೆ ಕೂತು ಭಾಷಣ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಬಿಜೆಪಿಗೆ ಬಂದ್ರೆ ಸ್ವಾಗತಿಸುತ್ತೇನೆ: ಬಿಸಿ ಪಾಟೀಲ್

ಕಾಂಗ್ರೆಸ್ ತಟ್ಟೆಯಲ್ಲಿಯೇ ಕತ್ತೆ ಬಿದ್ದಿದೆ ಅದನ್ನು ನೋಡುವುದು ಬಿಟ್ಟು ಸಿದ್ದರಾಮಯ್ಯ,ಇನ್ನೊಬ್ಬರ ತಟ್ಟೆಯಲ್ಲಿನ ನೊಣ ಓಡಿಸಲು ಹೊರಟಿದ್ದಾರೆ. ಸಿದ್ದರಾಮಯ್ಯಗೆ ಈ ನಡುವೆ ಬಿಜೆಪಿ ಬಗ್ಗೆ ಬಹಳ ಆಸಕ್ತಿ ಬಂದಂತಿದೆ. ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅವರನ್ನು ಹೃದಯಪೂರ್ವಕ ಸ್ವಾಗತಿಸುವುದಾಗಿ ಬಿಸಿ ಪಾಟೀಲ್ ಹೇಳಿದರು.

ಇನ್ನೂ ಎರಡುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.ಆ ನಂತರ ಚುನಾವಣೆ ನಡೆದಾಗ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ನಿಗದಿಯಾಗಲಿದೆ.ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ. ಸಿದ್ದರಾಮಯ್ಯ ಮೊದಲು ಅವರ ಪಕ್ಷವನ್ನು ಸರಿಯಾಗಿ ನೋಡಿಕೊಳ್ಳಲಿ. ಸಿದ್ದರಾಮಯ್ಯ ಮೊದಲು ಕಾಂಗ್ರೆಸ್ ಪಕ್ಷದ ಒಳಜಗಳ ಸರಿಪಡಿಸಿಕೊಳ್ಳಲಿ. ಆನಂತರ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.

LEAVE A REPLY

Please enter your comment!
Please enter your name here