ನಿಷ್ಕಲ್ಮಶ ಹೃದಯ ಇರುವ ವ್ಯಕ್ತಿ ಅಜೀಮ್ ಪ್ರೇಮ್ ಜೀ

0
386

ಅಜೀಮ್ ಪ್ರೇಮ್ ಜೀ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ,ಇವರು ಯಾವತ್ತೂ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಕುಳಿತವರಲ್ಲ, ಇವರು ವಿಮಾನ ತೆಗೆದುಕೊಳ್ಳುವಷ್ಟು ಹಣವನ್ನು ಹೊಂದಿದ್ದರು ಕೂಡ ಇವರು ಕ್ಲಾಸ್-1 ರಲ್ಲಿ ಟಿಕೆಟ್ ಪಡೆದು ಪ್ರಯಾಣಿಸುವ ಸರಳ ಜೀವಿ ಇವರು. ಇವರು ಓದಿದ್ದು ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದು ಆದರೆ, ಇವರು ಭಾರತದ ಎಲ್ಲ ಬಡವರ ಮಕ್ಕಳು ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೇ ವಿದ್ಯಾಭ್ಯಾಸ ಮಾಡಬೇಕೆಂಬ ಕನಸನ್ನು ಹೊಂದಿರುವ ವಿಶಾಲ ಹೃದಯಿ.

ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ತಮ್ಮ ಆದಾಯದ ಅರ್ಧದಷ್ಟು ಹಣವನ್ನು ಅವರಿಗಾಗಿಯೇ ಮುಡುಪಾಗಿಟ್ಟಿದ್ದಾರೆ. ಅಜೀಮ್ ಪ್ರೇಮ್ ಜೀ ಭಾರತದ ಐ.ಟಿ ಕ್ಷೇತ್ರದ ಜಾರ್ಜ್ ದೊರೆ ಎಂದೇ ಪ್ರಸಿದ್ದಿ ಪಡೆದಿದ್ದಾರೆ. ಇವರು ಜನಿಸಿದಾಗಲೇ ಇವರು “ಸೌಭಾಗ್ಯ ಕಾ ಬೇಟಾ “ಎಂದು ಕರೆಸಿಕೊಂಡಿದ್ದರು.
ಇವರ ತಂದೆ ಹಶೀಮ್ ಪ್ರೇಮ್ ಜೀ ಅವರು 50 ರ ದಶಕದಲ್ಲೇ ಪ್ರಖ್ಯಾತ ಉದ್ಯಮಿ ಆಗಿದ್ದರು.
ಇವರು ಶ್ರೀಮಂತ ಕುಟುಂಬದಲ್ಲೇ ಜನಿಸಿದರು ಕೂಡ ಇಂದಿಗೂ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲಿಲ್ಲ.

ಇವರು ಎಲ್ಲ ಮಕ್ಕಳೂ ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂಬ ನಿಟ್ಟಿನಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರಖಾಂಡ, ರಾಜಸ್ತಾನ, ಛತ್ತೀಸಗಢ, ಪಾಂಡಿಚೇರಿ, ಬಿಹಾರ, ಮಧ್ಯಪ್ರದೇಶ, ಸರ್ಕಾರಗಳ ಸಹಾಯದೊಂದಿಗೆ 2001 ರಲ್ಲಿ “ಅಜೀಮ್ ಪ್ರೇಮ್ ಜೀ ಎಜುಕೇಷನ್ ಪೌಂಡೇಶನ್” ಅನ್ನು ಸ್ಥಾಪಿಸಿ ಅತ್ಯುತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ದೊಡ್ಡ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ.
2010 ರಲ್ಲಿ ಬಿಲ್ ಗೇಟ್ಸ್ ಹಾಗೂ ಶೇರುಮಾರುಕಟ್ಟೆಯ ಮಾಸ್ಟರ್ ಮೈಂಡ್ ವಾರನ್ ಬಫೆಟ್ ಇಬ್ಬರು ಕೂಡ ತಮ್ಮ ಅರ್ಧ ಆಸ್ತಿಯನ್ನು ಸಮಾಜದ ಉನ್ನತಿಗಾಗಿ ಧಾನ ಮಾಡುವುದಾಗಿ ಘೋಷಿಸಿದ್ದಾರೆ.

ಇವರಿಬ್ಬರೊಂದಿಗೆ ಹಲವರು ಕೈಜೋಡಿಸಿದ್ದಾರೆ. ಅಜೀಮ್ ಪ್ರೇಮ್ ಜೀ 52,750 ಕೋಟಿ ಹಣವನ್ನು ಸಮಾಜಿಕ ಕಾರ್ಯಕ್ಕಾಗಿ ಮಿಸಲಿಟ್ಟಿದ್ದಾರೆ. 21ನೇ ವಯಸ್ಸಿಗೆ ದಶಕೋಟಿ ಹಣದ ಉದ್ಯಮವನ್ನು ವಹಿಸಿಕೊಂಡ ಅಜೀಮ್ ಪ್ರೇಮ್ ಜೀ ಐ.ಟಿ ಕ್ರಾಂತಿಯ ರೂವಾರಿ ಆಗಿದ್ದಾರೆ . ಕಂಪ್ಯೂಟರ್ ಎನ್ನುವ ಮಾಯಾ ಪೆಟ್ಟಿಗೆಯನ್ನು ಭಾರತದಲ್ಲಿ ಉತ್ಪಾದನೆ ಮಾಡಿದರು. ತನ್ನ ತಂದೆಯಿಂದ ಬಂದ ಉದ್ಯಮದ ಉಪಾಯ ಬಳಸಿಕೊಂಡು ಇಡೀ ಪ್ರಪಂಚದಲ್ಲೇ ವಿಪ್ರೋವನ್ನು ಜನಪ್ರಿಯಗೊಳಿಸಿದರು.

1999-2000ನೇ ಇಸವಿಯ ನಡುವೆ ಪ್ರಪಂಚದಲ್ಲಿ 150 ಸಂಸ್ಥೆಗಳು ವಿಪ್ರೋದ ಗ್ರಾಹಕರಾಗಿದ್ದವು, ಆದರೆ 2018 -2019 ರಲ್ಲಿ 1,513 ಕಂಪನಿಗಳು ವಿಪ್ರೋದ ಗ್ರಾಹಕರಾಗಿವೆ. 1999 ರಲ್ಲಿ ವಿಪ್ರೋದ ಉದ್ಯೋಗಿಗಳ ಸಂಖ್ಯೆ 8000 ಇತ್ತು ಆದರೆ, 2019 ರಲ್ಲಿ ಇದರ ಉದ್ಯೋಗಿಗಳ ಸಂಖ್ಯೆ 1,71,425 ಇದೆ. 1999 -2000ನೇ ಇಸವಿಯಲ್ಲಿ ವಿಪ್ರೋದ ಆದಾಯ 240 ಮಿಲಿಯನ್ ಅಮೆರಿಕನ್ ಡಾಲರ್ ಇತ್ತು ಆದರೆ, 2018-2019 ರಲ್ಲಿ ವಿಪ್ರೋದ ಆದಾಯ 8,12,03 ಮಿಲಿಯನ್ ಅಮೆರಿಕನ್ ಡಾಲರ್ ಇದೆ. ನಾನ್ ಪ್ರಾಫಿಟ್ ಆರ್ಗನೈಸೇಷನ್ ಮೂಲಕ ಇದುವರೆಗೆ ಅಜೀಮ್ ಪ್ರೇಮ್ ಜೀ ನೀಡಿರುವ ಸಹಾಯದ ಮೊತ್ತ 1ಲಕ್ಷದ 45 ಸಾವಿರ ಕೋಟಿ .

ದಕ್ಷಿಣ ಭಾರತ ,ಉತ್ತರ ಭಾರತದಲ್ಲಿ ಇವರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದ ಅತಿ ಬಡತನದ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಎನ್.ಜಿ.ಓ ಗಳಿಗೆ ಅಜೀಮ್ ಪ್ರೇಮ್ ಜೀ ಸಹಾಯ ಹಸ್ತ ನೀಡಿದ್ದಾರೆ.
ಇವರ ಈ ಸಾಧನೆಗಳನ್ನು ಪರಿಗಣಿಸಿ ಭಾರತ ಸರ್ಕಾರ 2005 ರಲ್ಲಿ “ಪದ್ಮಭೂಷಣ ಪ್ರಶಸ್ತಿ” ಪಡೆದರು ಹಾಗೂ 2011 ರಲ್ಲಿ “ಪದ್ಮವಿಭೂಷಣ ಪ್ರಶಸ್ತಿಯನ್ನು “ಪಡೆದರು. ಅತಿ ಕಿರಿಯ ವಯಸ್ಸಿನಲ್ಲೇ ಉದ್ಯಮಕ್ಕೆ ಕಾಲಿಟ್ಟು ಜಗತ್ತು ಬೆರಗುಗೊಳ್ಳುವಷ್ಟು ಎತ್ತರದ ಸ್ಥಾನಕ್ಕೆ ಇವರು ಬೆಳೆದಿದ್ದಾರೆ.

ವಿಪ್ರೋದ ಪ್ರತಿ ಹೆಜ್ಜೆಯನ್ನು ನಿರ್ಧರಿಸುವ ಮೂಲಕ ಅಜೀಮ್ ಪ್ರೇಮ್ ಜೀ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಈಗ ಅವರು ತಮ್ಮ ದೀರ್ಘಕಾಲದ ಓಟದಿಂದ ಬಿಡುವು ಬಯಸಿದ್ದಾರೆ. ತಮ್ಮ ಜ್ಞಾನದಿಂದ ದೊಡ್ಡ ಉದ್ಯಮಿ ಆಗಿ ಬೆಳೆದು , ನಿಷ್ಕಲ್ಮಶ ಮನಸ್ಸಿನಿಂದ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಇವರು ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿ ಅಂತಿದ್ದಾರೆ. ಹಾಗೂ ಆದರ್ಶ ಜೀವನ ನಡೆಸುತ್ತಿದ್ದಾರೆ.
-ಹರ್ಷಿತ ಎಚ್.ಬಿ

LEAVE A REPLY

Please enter your comment!
Please enter your name here