ಆಯ್ರಾ ಬರ್ತ್ ಡೇ ಹೇಗೆ ಸಿಲಿಬ್ರೇಟ್ ಮಾಡಿದ್ರೂ ಎಂಬ ಸೀಕ್ರೇಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್.!

0
411

ಸ್ಯಾಂಡಲ್ ವುಡ್ ಲವ್ಲಿ ಕಪಲ್ ರಾಧಿಕಾ ಪಂಡಿತ್ ಮತ್ತು ಯಶ್ ತಮ್ಮ ಮುದ್ದಿನ ಕೂಸು ಆಯ್ರಾಗೆ ಮೊನ್ನೆ – ಮೊನ್ನೆ ತಾನೇ ಮೊದಲ ವರ್ಷ ತುಂಬಿದೆ. ಅಲ್ಲದೇ ಆಯ್ರಾ ಬರ್ತ್ ಡೇ ಯನ್ನು ಯಶ್ ದಂಪತಿ ಅದ್ದೂರಿಯಾಗಿ ಆಚರಿಸಿದ್ದಾರೆ. ಅಲ್ಲದೇ ಆ ಅದ್ದೂರಿ ಕಾರ್ಯಕ್ರಮದ ಫೋಟೋ ಮಾತ್ರ ಸಿಕ್ಕಿತ್ತು. ಆದರೆ ಅದರ ವಿಡಿಯೋಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಆದರೆ ಆ ಆಸೆಯನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ಇದೀಗ ಯಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಪೂರೈಸಿದ್ದಾರೆ.

 

ಹೌದು, ಆಯ್ರಾ ಮೊದಲ ಹುಟ್ಟುಹಬ್ಬವನ್ನು ದಂಪತಿ ಎಷ್ಟೆಲ್ಲಾ ಗ್ರ್ಯಾಂಡ್ ಆಗಿ ಸೆಲಿಬ್ರೇಟ್ ಮಾಡಿದರೂ ಎಂಬುದನ್ನು ಈ ವಿಡಿಯೋದಲ್ಲಿ ಎದ್ದು ಕಾಣಬಹುದು. ಸೆಟ್ ನಲ್ಲಿ ತಮ್ಮ ಮುದ್ದಿನ ಮಗಳು ಆಯ್ರಾಗಾಗಿ ತಯಾರಿಸಿದ ಭರ್ಜರಿ ಕೇಕ್, ಮನರಂಜನೆ ಕಾರ್ಯಕ್ರಮಗಳು ಆ ಬರ್ತ್ ಡೇ ಪಾರ್ಟಿಯಲ್ಲಿ ಏನುಂಟು ಏನಿಲ್ಲ ಎಂಬಂತೆ ಯಶ್ ದಂಪತಿಗಳು ಈ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಇದು ಹೇಗೆ ನಡೆಯಿತು ಎಂಬುದರ ವಿಡಿಯೋವನ್ನು ಯಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ನಲ್ಲಿ ಹಂಚಿಕೊಂಡಿದ್ದರು.

 

ಅಲ್ಲದೇ ತಮ್ಮ ಪಾರ್ಟಿಗಾಗಿ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ದಾರೆ ಎಂಬುದನ್ನೂ ವಿಡಿಯೋದಲ್ಲಿ ಕಾಣಬಹುದು. ಇನ್ನು ಕೆಲವೇ ಗಂಟೆಗಳ ಕೆಳಗಷ್ಟೇ ಈ ವಿಡಿಯೋ ಅಪ್ಲೋಡ್ ಮಾಡಿದ್ದು ಇದನ್ನು ನೋಡಿದ ಅಭಿಮಾನಿಗಳಿಂದ ಲೈಕ್ಸ್, ಕಾಮೆಂಟ್ಸ್ ಹರಿದು ಬರುತ್ತಿದೆ. ಇನ್ನು ನಿಮ್ಮೆಲ್ಲ ಬೇಡಿಕೆಯನ್ನು ಇಲ್ಲ ಎನ್ನಲು ಸಾಧ್ಯವೇ? ನೀವು ಕೇಳಿದಿರಿ, ಇಲ್ಲಿದೆ ನೋಡಿ ನಮ್ಮ ಲಿಟ್ಲ್ ಪ್ರಿನ್ಸ್ ವಂಡಲ್ಲ್ಯಾಂಡ್ ಹುಟ್ಟುಹಬ್ಬ ಸಂಭ್ರಮ!

 

ನಿಮ್ಮೆಲ್ಲ ಶುಭಹಾರೈಕೆಗೆ ಆಯ್ರಾ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾಳೆ. ಈ ವಿಡಿಯೋದಲ್ಲಿನ ಕ್ಷಣಗಳು ಜೀವನ ಪರ್ಯಂತ ನೆನಪಿನಲ್ಲಿರುತ್ತವೆ ಎಂದು ಕಾಮೆಂಟ್ ಹಾಕುವ ಮೂಲಕ ಯಶ್ ಸೋಷಿಯಲ್ ಪೋಸ್ಟ್ ಮಾಡಿದ್ದಾರೆ.

 


ಇನ್ನು ಈ ವಿಡಿಯೋದಲ್ಲಿ ಒಬ್ಬರು ಕೆಜಿಎಫ್ನ ಛಾಯಾಗ್ರಾಹಕ ಭುವನ್ ಗೌಡ ಅವರು ಈ ವಿಡಿಯೋ ಸೃಷ್ಟಿ ಹಿಂದೆ ತೊಡಗಿಕೊಂಡಂತಿದೆ, ಅಷ್ಟು ಚೆನ್ನಾಗಿ ಮೂಡಿಬಂದಿದೆ ಎಂದಿದ್ದಾರೆ. ಇನ್ನು ಈ ವಿಡಿಯೋ ಆಚರಣೆಗೂ ಮುನ್ನ ಈಗಿರುವ ಕಷ್ಟದ ದಿನಗಳಲ್ಲಿ ಜನ ಸಾಮಾನ್ಯರು ಪರದಾಡುತ್ತಿರುವಾಗ ಈ ಮಟ್ಟದ ಆಚರಣೆ?” ಅಗತ್ಯ ಏನಿತ್ತು ಎಂಬ ಕಾಮೆಂಟನ್ನೂ ಅನೇಕರು ಹಾಕಿದ್ದಾರೆ.

 

https://www.instagram.com/tv/B6C2p4rngeq/?utm_source=ig_web_copy_link

ಮತ್ತೊಂದಷ್ಟು ಮಂದಿ ಈ ವಿಡಿಯೋ ಹಾಗೂ ಕಾರ್ಯಕ್ರಮ ತುಂಬಾ ನೇ ಚೆನ್ನಾಗಿದೆ… ಆದ್ರೆ ದುಡ್ಡು ಎಷ್ಟು ಖರ್ಚು ಆಯಿತು.. ತಿಳಿಸಿ ಯಶ್ ಸರ್ ತಿಳ್ಕೊಬೇಕು ಅಂತ ತುಂಬಾ ಕುತೂಹಲ ಇದೆ… ಪ್ಲೀಸ್. ಸುದೀಪ್ ಸರ್ ಮಿಸ್ ಆಗಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಬಹಳಷ್ಟು ಅಭಿಮಾನಿಗಳು ಈ ವಿಡಿಯೋ ನೋಡಿ ಎಂಜಾಯ್ ಮಾಡಿರುವುದರ ಜೊತೆಗೆ ಕಾಲೆಳೆಯುತ್ತಿದ್ದಾರೆ ಕೂಡ.

LEAVE A REPLY

Please enter your comment!
Please enter your name here