ಸ್ಟಾರ್ ಸೆಲೆಬ್ರಿಟಿಗಳ ಮುಂದೆ ದರ್ಶನ ಕೊಟ್ಟ ಶ್ರೀಮನ್ನಾರಾಯಣ : ಹಾಲಿವುಡ್ ರೇಂಜ್ ನಲ್ಲಿ ಪ್ರೀಮಿಯರ್ ಶೋ !

0
264

ಕನ್ನಡ ಚಿತ್ರರಂಗದಲ್ಲಿ ನಟ,ನಿರ್ದೇಶಕ,ನಿರ್ಮಾಪಕರಾಗಿರುವ ರಕ್ಷಿತ್ ಶೆಟ್ಟಿ, ತಮ್ಮ ವಿಭಿನ್ನ ಸ್ಕ್ರೀನ್ ಪ್ಲೇ ಮತ್ತು ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. `ನಮ್ ಏರಿಯಲ್ ಒಂದ್ ದಿನ’ ಎಂಬುವ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, `ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ ಚಿತ್ರದ ಮುಖಾಂತರ ಸಿಂಪಲ್ ಸ್ಟಾರ್ ಆಗಿ ಹೊರಹೊಮ್ಮಿದ್ದರು ನಂತರ 2014 ರಲ್ಲಿ `ಉಳಿದವರು ಕಂಡಂತೆ’ ಎಂಬುವ ವಿಶೇಷ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಾನೂ ಒಬ್ಬ ಉತ್ತಮ  ನಿರ್ದೇಶಕನೆಂದು ಸಾಭೀತು ಮಾಡಿದರು.

 

 

ಹೀಗೆ ಸಾಲುಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದ ಸಿಂಪಲ್ ಸ್ಟಾರ್ 2016 ರಲ್ಲಿ ಕಿರಿಕ್ ಪಾರ್ಟಿ ಎಂಬುವ ಕ್ಯಾಂಪಸ್ ರೊಮ್ಯಾಂಟಿಕ್ ಹಾಸ್ಯ ಚಿತ್ರವನ್ನು ಬರೆದು ಅಭಿನಯಿಸಿದರು, ಈ ಸಿನಿಮಾ ರಾಜ್ಯಾದ್ಯಾಂತ 15 ಚಿತ್ರಮಂದಿರಗಳಲ್ಲಿ 250 ದಿನಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 365 ದಿನಗಳನ್ನು ಪೂರೈಸುವ ಮುಖಾಂತರ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು.

 

 

ಇದೀಗ ಅವರ ಕನಸಿನ ಕೂಸು ಅವನೇ ಶ್ರೀಮನ್ ನಾರಾಯಣ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ನಿನ್ನೆ ಲಾಲ್ ಬಾಗ್ ಬಳಿ ಇರುವ ಊರ್ವಶಿ ಚಿತ್ರಮಂದಿರದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್ ಶೋವೊಂದನ್ನು ಆಯೋಜಿಸಿದ್ದರು.. ಸಾಮಾನ್ಯವಾಗಿ ಪ್ರೀಮಿಯರ್ ಶೋಗಳಲ್ಲಿ ಸೆಲೆಬ್ರಿಟಿಗಳು ಬಂದು ಸಿನಿಮಾವನ್ನು ವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ.

 

ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್ ಶೋವನ್ನು ಆಯೋಜಿಸಿದ್ದು ,ಊರ್ವಶಿ ಚಿತ್ರಮಂದಿರಕ್ಕೆ ಅದ್ದೂರಿಯಾದ ಲೈಟಿಂಗ್ಸ್ ಮತ್ತು ಸೆಲೆಬ್ರಿಟಿ ಎಂಟ್ರಿಗೆ ವಿಶೇಷ ಬ್ಯಾಂಡ್ ಸೆಟ್ ಗಳನ್ನು ಕರೆಸಿದ್ದರು.. ಚಿತ್ರ ಮಂದಿರ ಸೆಲೆಬ್ರಿಟಿ ಮತ್ತು ಲೈಟಿಂಗ್ಸ್ ಗಳಿಂದ ರಾರಾಜಿಸುತ್ತಿದ್ದು ಕನ್ನಡದ ಬಹುತೇಕ ನಟರು ಆಗಮಿಸಿದ್ದರು.

 

 

ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರೀಮಿಯರ್ ಶೋನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರವಿಚಂದ್ರನ್, ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರಿಷಬ್ ಶೆಟ್ಟಿ, ವಿನಯ್ ರಾಜ್ ಕುಮಾರ್, ಆಶಿಕಾ ರಂಗನಾಥ್, ತರುಣ್ ಸುಧೀರ್, ಶರಣ್, ಶ್ರೀಲೀಲಾ, ಅಕುಲ್ ಬಾಲಾಜಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು ಪಾಲ್ಗೊಂಡು ಚಿತ್ರದ ಮೆರುಗು ಹೆಚ್ಚಿಸಿ ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಹೇಳಿದರು.

 

 

”ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನ ಚೆನ್ನಾಗಿ ಮಾಡಿದ್ದಾರೆ. ಮೇಕಿಂಗ್ ತುಂಬಾ ಚೆನ್ನಾಗಿದೆ. ಸೆಟ್ ವರ್ಕ್ ನ್ಯಾಚುರಲ್ ಆಗಿದೆ. ಈ ಸಿನಿಮಾ ಒಂದು ಡಿಫರೆಂಟ್ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ರಕ್ಷಿತ್ ಶೆಟ್ಟಿ ಹ್ಯಾಸ್ ಡನ್ ಎ ಗುಡ್ ಜಾಬ್. ತುಂಬಾ ಒಳ್ಳೆಯ ಅಟೆಂಪ್ಟ್ ಇದು. ಅವರು ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ನಾವು ಬೆಲೆ ಕೊಡಬೇಕು. ಎಲ್ಲರೂ ಈ ಚಿತ್ರವನ್ನ ನೋಡಿ” ಎಂದು ಶಿವಣ್ಣ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

 

 

”ಈ ಸಿನಿಮಾ ಒಂದೊಳ್ಳೆ ಅನುಭವ ಕೊಡುತ್ತೆ. ಸಿನಿಮಾ ಟೇಕಾಫ್ ಆದ ರೀತಿ, ಆಡಿಯನ್ಸ್ ನ ಹಿಡಿದಿಟ್ಟುಕೊಳ್ಳುವ ಶೈಲಿ ಚೆನ್ನಾಗಿದೆ. ಕುತೂಹಲದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ತಮಾಷೆ ಮಿಕ್ಸ್ ಮಾಡಿಕೊಂಡು ಸೀರಿಯಸ್ ಕಥೆಯನ್ನ ಹೇಳಿರುವುದು ತುಂಬಾ ಚೆನ್ನಾಗಿದೆ. ಇದು ವಿಶುವಲ್ ಟ್ರೀಟ್ ಮಾತ್ರ ಅಲ್ಲ. ಬ್ರೇನ್ ಸ್ವಲ್ಪ ಚುರುಕಾಗಿ ಇರಬೇಕು ಚಿತ್ರವನ್ನ ಅರ್ಥಮಾಡಿಕೊಳ್ಳೋಕೆ. ಈ ಚಿತ್ರದ ಹಿಂದೆ ಇರುವ ಪ್ರತಿಯೊಬ್ಬರ ಪ್ರಯತ್ನ ಮೆಚ್ಚಬೇಕು. ಯಾರ ಬಗ್ಗೆಯೂ ನಾನು ಕೊರತೆ ಕಂಡು ಹಿಡಿಯಲು ಆಗಲಿಲ್ಲ. ಒಂದು ಕಂಪ್ಲೀಟ್ ಸಿನಿಮಾ ನೋಡಿದ ಅನುಭವ ನನಗೆ ಆಯ್ತು. ಚಿತ್ರ ನೋಡುವಾಗ ಎರಡುವರೆ ಗಂಟೆ ನಾನು ಫೋನ್ ನೋಡಲಿಲ್ಲ. ಫೋನ್ ನೋಡಬೇಕು ಅಂತ ನನಗೆ ಅನಿಸಲಿಲ್ಲ. ಆ ಕ್ಯೂರಿಯಾಸಿಟಿ ಲೆವೆಲ್ ನ ಚಿತ್ರ ಮೇನ್ಟೇನ್ ಮಾಡಿದೆ. ಈ ಚಿತ್ರದ ನಿರ್ಮಾಪಕರಿಗೆ ಲಕ್ಷ್ಮಿ ಸಿಗಲಿ” ಎಂದು ರವಿಚಂದ್ರನ್ ಅವರು ಹಾರೈಸಿ ಸಚಿನ್ ಅವರಿಗೆ ಕಿವಿಮಾತು ನೀಡಿದರು.

 

 

ಒಟ್ಟಾರೆ ನಿನ್ನ ಸ್ಯಾಂಡಲ್ ವುಡ್ ನಲ್ಲಿ ಸೆಲೆಬ್ರಿಟಿಗಳು ಜೊತೆ ಅನಾವರಣಗೊಂಡ ಅವನೇ ಶ್ರೀಮನ್ನಾರಾಯಣ, ಟಿ ಭಾರತ ಚಿತ್ರರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.. ಇನ್ನು ಸಿನಿಮಾವನ್ನು ನೋಡಿದ ಪ್ರೇಕ್ಷಕರು ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ತಯಾರಾಗಿದೆ ಈ ಸಿನಿಮಾವೂ ಕೂಡ ಕನ್ನಡಕ್ಕೆ ದೊಡ್ದದೊಂದು ಹೆಮ್ಮೆಯನ್ನು ತಂದುಕೊಡುತ್ತದೆ ಎಂದು ಹೇಳುತ್ತಿದ್ದಾರೆ.

 

 

ಸದಾ ವಿಶೇಷ ಕಾರ್ಯಕ್ರಮಗಳಿಂದ ಜನ ಮನ್ನಣೆ ಪಡೆದುಕೊಳ್ಳುವ ನಮ್ಮ ಕನ್ನಡ ಯೂಟ್ಯೂಬ್ ಚಾನೆಲ್ ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರೀಮಿಯರ್ ಶೋ ಗೆ ಪಾಲ್ಗೊಂಡಿದ್ದು ಸಮಾರಂಭ ಹೇಗೆ ಮೂಡಿ ಬಂದಿದೆ ಎಂಬುದನ್ನು ಚಿತ್ರಿಸಿದೆ. ಪ್ರೀಮಿಯರ್ ಶೋನಲ್ಲಿ ಯಾರ್ ಯಾರು ಪಾಲ್ಗೊಂಡಿದ್ದರು ಮತ್ತು ಸೆಲಬ್ರಿಟಿಗಳು ಏನನ್ನು ಮಾತನಾಡಿದರು ಮತ್ತು ಸಿನಿಮಾ ಬಗ್ಗೆ ಪ್ರೇಕ್ಷಕರು ಏನೆಲ್ಲ ಹೇಳಿದರೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

LEAVE A REPLY

Please enter your comment!
Please enter your name here