ಸಚಿನ್ ರವಿ ನಿರ್ದೇಶದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಹವಾ ಭಾರೀ ಜೋರಾಗಿದೆ. ಚಿತ್ರತಂಡ ಭರ್ಜರಿ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದು ಜನರನ್ನು ಥಿಯೇಟರ್ನತ್ತ ಆಕರ್ಷಿಸಲು ಕಸರತ್ತು ಮಾಡುತ್ತಿದೆ.
ಸಿನಿಮಾ ಇದೇ ತಿಂಗಳು 27 ರಂದು ತೆರೆ ಕಾಣುತ್ತಿದ್ದು, 5 ಭಾಷೆಗಳಲ್ಲಿ ತಯಾರಿಸಲಾಗಿದೆ. ಆದರೆ ಎಲ್ಲಾ ಭಾಷೆಯ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿಲ್ಲ. ಕನ್ನಡದಲ್ಲಿ ಡಿಸೆಂಬರ್ 27, ತೆಲುಗಿನಲ್ಲಿ ಮುಂದಿನ ವರ್ಷ ಜನವರಿ 1, ತಮಿಳು, ಮಲಯಾಳಂನಲ್ಲಿ ಜನವರಿ 3 ಹಾಗೂ ಹಿಂದಿಯಲ್ಲಿ ಜನವರಿ 17 ರಂದು ಬಿಡುಗಡೆಯಾಗುತ್ತಿದೆ. ಇನ್ನು ಪ್ರಮೋಷನ್ ಅಂಗವಾಗಿ ಎಲ್ಲೆಡೆ ಸಿನಿಮಾ ಪೋಸ್ಟರ್ಗಳು ರಾರಾಜಿಸುತ್ತಿವೆ.
ಬಹುತೇಕ ಎಲ್ಲಾ ವಾಹನಗಳ ಹಿಂಭಾಗಗಳಲ್ಲಿ ಪೋಸ್ಟರ್ ಅಂಟಿಸುವ ಮೂಲಕ ಪ್ರಮೋಷನ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಮೈಸೂರು-ಯಶವಂತಪುರ ರೈಲಿನ ಹೊರಭಾಗ ಹಾಗೂ ಒಳಗಡೆ ‘ಅವನೇ ಶ್ರೀಮನ್ನಾರಾಯಣ’ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಇದೆಲ್ಲಾ ನೋಡಿದರೆ ಈ ಸಿನಿಮಾ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂಬುದು ತಿಳಿಯುತ್ತದೆ.
ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ನಟಿಸಿದ್ದಾರೆ. 4-5 ದಿನಗಳ ಹಿಂದಷ್ಟೇ ಬಿಡುಗಡೆಯಾದ ‘ಹ್ಯಾಂಡ್ಸ್ ಅಪ್’ ಹಾಡು ಜನರಲ್ಲಿ ಸಖತ್ ಕ್ರೇಜ್ ಕೂಡಾ ಹುಟ್ಟುಹಾಕಿದೆ.
ಇದಕ್ಕೆ ಜನರು ಟಿಕ್ಟಾಕ್ ಮಾಡಲು ಕೂಡಾ ಆರಂಭಿಸಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.